Asianet Suvarna News Asianet Suvarna News

Weather forecast: ದಕ್ಷಿಣಕನ್ನಡದಲ್ಲಿ ಮಳೆ ಇಳಿಮುಖ, ಉಡುಪಿಯಲ್ಲಿ ಮುಂದುವರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮಳೆ ಪ್ರಮಾಣ ಇನ್ನಷ್ಟುಇಳಿಮುಖವಾಗಿದ್ದು, ನದಿಗಳ ಪ್ರವಾಹ ಇಳಿದಿದೆ. ಆದರೆ ಇಡೀ ದಿನ ಜಿಲ್ಲೆಯಲ್ಲಿ ಭಾರೀ ಚಳಿ ಆವರಿಸಿದ್ದು, ಮೋಡ ಕವಿದ ವಾತಾವರಣವಿತ್ತು. ಆಗಾಗ ಸಾಧಾರಣ ಮಳೆ ಸುರಿದಿದೆ.

weather forecast rains decrease in Dakshina Kannada, continuation in Udupi rav
Author
First Published Jul 27, 2023, 5:47 AM IST | Last Updated Jul 27, 2023, 5:47 AM IST

ಮಂಗಳೂರು (ಜು.27) :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮಳೆ ಪ್ರಮಾಣ ಇನ್ನಷ್ಟುಇಳಿಮುಖವಾಗಿದ್ದು, ನದಿಗಳ ಪ್ರವಾಹ ಇಳಿದಿದೆ. ಆದರೆ ಇಡೀ ದಿನ ಜಿಲ್ಲೆಯಲ್ಲಿ ಭಾರೀ ಚಳಿ ಆವರಿಸಿದ್ದು, ಮೋಡ ಕವಿದ ವಾತಾವರಣವಿತ್ತು. ಆಗಾಗ ಸಾಧಾರಣ ಮಳೆ ಸುರಿದಿದೆ.

ಮಂಗಳೂರಿನ ಕಸಬಾ ಬಜಾರ್‌ ಧಕ್ಕೆಯಲ್ಲಿ ಮಂಗಳವಾರ ಮಧ್ಯಾಹ್ನ ಬೋಟಿನಿಂದ ಕಾಲುಜಾರಿ ಉಳ್ಳಾಲದ ಮುಜಾಮುಲ್ಲಾ (32) ಎಂಬವರು ಸಾವಿಗೀಡಾಗಿದ್ದು, ಮೃತರ ವಾರಸುದಾರರಿಗೆ ಪ್ರಾಕೃತಿಕ ವಿಕೋಪದಡಿ 5 ಲಕ್ಷ ರು. ಪರಿಹಾರ ಪಾವತಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ.

Karnataka rains: ಮಳೆಗೆ ಮತ್ತೆ 5 ಬಲಿ; ವಿವಿಧೆಡೆ ಭೂ ಕುಸಿತ

ಮನೆಗಳಿಗೆ ಹಾನಿ: ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಬಹಳಷ್ಟುಮನೆಗಳು ಶಿಥಿಲಗೊಂಡು ಹಾನಿಗೀಡಾಗಿವೆ. ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನವರೆಗೆ ಬಂಟ್ವಾಳದಲ್ಲಿ 2 ಮನೆಗಳು, ಪುತ್ತೂರಿನಲ್ಲಿ 4, ಮಂಗಳೂರಿನಲ್ಲಿ 4, ಮೂಡುಬಿದಿರೆಯಲ್ಲಿ 2 ಸೇರಿ ಜಿಲ್ಲೆಯಲ್ಲಿ 12 ಮನೆಗಳಿಗೆ ತೀವ್ರ ಹಾನಿ ಸಂಭವಿಸಿದ್ದರೆ, ಮಂಗಳೂರಿನಲ್ಲಿ 9 ಮನೆಗಳು, ಬಂಟ್ವಾಳದಲ್ಲಿ 1, ಪುತ್ತೂರಿನಲ್ಲಿ 2, ಮೂಡುಬಿದಿರೆಯಲ್ಲಿ 2, ಮೂಲ್ಕಿ 2, ಕಡಬದಲ್ಲಿ 2 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಬೆಳ್ತಂಗಡಿಯಲ್ಲಿ ಹಸುವೊಂದು ಮೃತಪಟ್ಟಿದೆ.

ನದಿ ನೀರು ಇಳಿಕೆ: ಬುಧವಾರ ಸಂಜೆ 4 ಗಂಟೆ ವೇಳೆಗೆ ಬಂಟ್ವಾಳದಲ್ಲಿ ನೇತ್ರಾವತಿ ನದಿಯು 7.1 ಮೀ ಎತ್ತರದಲ್ಲಿ ಹರಿಯುತ್ತಿತ್ತು, ಮಂಗಳವಾರದ ಹರಿವಿನ ಮಟ್ಟ8 ಮೀ. ಆಗಿತ್ತು. ನೀರಿನ ಮಟ್ಟಸುಮಾರು 1 ಮೀ.ನಷ್ಟುಇಳಿದಿದೆ. ಅದೇ ರೀತಿ ಉಪ್ಪಿನಂಗಡಿಯಲ್ಲಿ 27.6 ಮೀ. ಎತ್ತರದಲ್ಲಿ ನೇತ್ರಾವತಿ ನದಿ ಹರಿಯುತ್ತಿತ್ತು.

ಕಡಬದಲ್ಲಿ ಈಗಾಗಲೇ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿರುವ 35 ಮಂದಿ ಇನ್ನೂ ಅಲ್ಲೇ ಅಶ್ರಯ ಪಡೆದಿದ್ದಾರೆ. ಪಾಣೆಮಂಗಳೂರಿನಲ್ಲಿ ಸಂಬಂಧಿಕರ ಮನೆಗಳಿಗೆ ತೆರಳಿರುವ 15 ಮನೆಯವರು ಇನ್ನೂ ವಾಪಸಾಗಿಲ್ಲ. ಇನ್ನೆರಡು ದಿನಗಳಲ್ಲಿ ಮಳೆ ಇಳಿಕೆಯಾದರೆ ಮನೆಗೆ ಮರಳುವ ನಿರೀಕ್ಷೆಯಿದೆ.

ಮೂಡುಬಿದಿರೆಯಲ್ಲಿ ಗರಿಷ್ಠ ಮಳೆ: ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನವರೆಗೆ ಮೂಡುಬಿದಿರೆಯಲ್ಲಿ ಜಿಲ್ಲೆಯಲ್ಲೇ ಗರಿಷ್ಠ 100.9 ಮಿಮೀ ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿಯಲ್ಲಿ 66.4 ಮಿಮೀ, ಬಂಟ್ವಾಳ 75.5 ಮಿಮೀ, ಮಂಗಳೂರಿನಲ್ಲಿ 69.3 ಮಿಮೀ, ಪುತ್ತೂರು 54.7 ಮಿಮೀ, ಸುಳ್ಯ 63.3 ಮಿಮೀ, ಕಡಬದಲ್ಲಿ 72.5 ಮಿಮೀ ಮಳೆ ದಾಖಲಾಗಿದೆ.

 

ಮುಂಡಾಜೆ: ಬೃಹತ್‌ ಗಾತ್ರದ ಮರ ಉರುಳಿ ಒಂದೂವರೆ ತಾಸು ಸಂಚಾರ ವ್ಯತ್ಯಯ

ಇಂದೂ ರೆಡ್‌ ಅಲರ್ಟ್

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜು.27ರಂದು ಗುರುವಾರವೂ ಭಾರೀ ಮಳೆಯ ರೆಡ್‌ ಅಲರ್ಟ್ ಘೋಷಿಸಲಾಗಿದೆ. ಜು.28ರಂದು ಆರೇಂಜ್‌ ಅಲರ್ಟ್, ಜು.29ರಂದು ಹಳದಿ ಅಲರ್ಟ್ ನೀಡಲಾಗಿದೆ. ಅದರ ಬಳಿಕ ಮಳೆ ಇಳಿಮುಖವಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತಿಳಿಸಿದೆ.

Latest Videos
Follow Us:
Download App:
  • android
  • ios