Asianet Suvarna News Asianet Suvarna News

ಮಂಡ್ಯ: ಮನೆ ಸೊಸೆ Vs ಮನೆ ಮಗಳು, ಸುಮಲತಾಗೆ ಸೆಡ್ಡು ಹೊಡೆಯಲು JDS ಸಜ್ಜು

ಇದೇ ವೇಳೆ ಮಂಡ್ಯದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ನಿಂದ ಸುಮಲತಾಗೆ ಟಿಕೆಟ್ ನೀಡುವ  ಹೆಚ್ಚು ಒಲವಿದ್ದರೆ ಇತ್ತ ಜೆಡಿಎಸ್ ನಿಂದಲೂ ಕೂಡ ಎದುರಾಳಿ ಯಾಗಿ ಅಭ್ಯರ್ಥಿಯೋರ್ವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. 

Mandya Loksabha seat turns battle ground for daughter Vs daughter in law
Author
Bengaluru, First Published Feb 5, 2019, 1:25 PM IST

ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ  ಮಂಡ್ಯದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟಿಕೆಟ್ ವಿಚಾರದಲ್ಲಿ ಮನೆಮಗಳು ಹಾಗೂ ಮನೆ ಸೊಸೆ ನಡುವೆ ಸ್ಪರ್ಧೆಯಾಗುತ್ತಿದೆ. 

ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧೆ ವಿಚಾರ ಕೇಳಿ ಬಂದ ಬೆನ್ನಲ್ಲೆ ಈ ಕ್ಷೇತ್ರಕ್ಕೆ ಮತ್ತೊಂದು ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 

ನಿವೃತ್ತ IRS ಅಧಿಕಾರಿ  ಲಕ್ಷ್ಮೀ ಅಶ್ವಿನ್ ಗೌಡ ಹೆಸರು ಕೇಳಿ ಬಂದಿದೆ. ಕಳೆದ ಲೋಕಸಭಾ ಉಪಚುನಾವಣೆ ವೇಳೆಯೂ ಕೂಡ ಜೆಡಿಎಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಸರು ಕೇಳಿ ಬಂದಿತ್ತು. ಆದರೆ ಶಿವರಾಮೇ ಗೌಡ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಜಯಗಳಿಸಿದ್ದರು. 

ಇದೀಗ ಸಮಲತಾ ಹಾಗೂ ಲಕ್ಷ್ಮೀ ಅಶ್ವಿನ್ ನಡುವೆ ಮಂಡ್ಯದ ನಿಜವಾದ ಮನೆ ಮಗಳು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. 

ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ: ರಾಜಕೀಯ ರಾದ್ಧಾಂತವಾಯ್ತು!

ಲಕ್ಷ್ಮೀ ಅಶ್ವಿನ್ ಗೌಡ ಮೂಲತಃ ಮಂಡ್ಯದ ಮಳವಳ್ಳಿಯವರಾಗಿದ್ದರೆ, ಸುಮಲತಾ ಅಂಬಿ ವಿವಾಹವಾದ ಬಳಿಕ ಇಲ್ಲಿನ ಸೊಸೆಯಾದರು. ಕಾಂಗ್ರೆಸ್ ನಿಂದ ಸುಮಲತಾ ಅವರನ್ನು ಕಣಕ್ಕಿಳಿಸುವ ಯತ್ನ ನಡೆಯುತ್ತಿದ್ದರೆ,  ಜೆಡಿಎಸ್ ನಿಂದ ಲಕ್ಷ್ಮೀ ಅಶ್ವಿನ್ ಗೌಡ ಹೆಸರು ಚಾಲ್ತಿಯಲ್ಲಿದೆ. 

ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದಿದ್ದ JDS ನಾಯಕನ ವಿರುದ್ಧ ಸಿಡಿದೆದ್ದ ಅಂಬಿ ಫ್ಯಾನ್ಸ್

ಈಗ ಸುಮಲತಾ ಅಂಬರೀಶ್ ಸ್ಪರ್ಧೆಗೆ ಸ್ವತಃ ಸಿಎಂ ಕುಮಾರಸ್ವಾಮಿ ಅವರು ಅಸಮಾಧಾನ ಹೊಂದಿದ್ದು, ಅವರ ವಿರುದ್ಧ ಲಕ್ಷ್ಮೀ  ಅಶ್ವಿನ್ ಗೌಡ  ಅವರನ್ನು ಕಣಕ್ಕೆ ಇಳಿಸಲಾಗುತ್ತಿದೆ ಎಂಬ ಚರ್ಚೆ ಜೋರಾಗಿದೆ.  ಅಲ್ಲದೇ ತಾವೇ ಮಂಡ್ಯದ ನಿಜವಾದ ಮಗಳು ಎಂದು ಅಂಬಿ ಅಭಿಮಾನಿಗಳಿಗೆ ಸೆಡ್ಡು ಹೊಡೆಯುತ್ತಾರೆ ಎಂದು ಚರ್ಚಿಸಲಾಗುತ್ತಿದೆ.

 

Follow Us:
Download App:
  • android
  • ios