Asianet Suvarna News Asianet Suvarna News

ಹಿಜಾಬ್ ನಿಷೇಧ ವಾಪಸ್ ; ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಮಂಡ್ಯದ 'ಹಿಜಾಬ್ ಲೇಡಿ' ಖ್ಯಾತಿಯ ಮಸ್ಕಾನ್

ಕಳೆದ ವರ್ಷ ಬಿಜೆಪಿ ಅಧಿಕಾರವಾಧಿಯಲ್ಲಿ ಶಾಲೆಗಳಲ್ಲಿ ಸಮವಸ್ತ್ರದ ಜೊತೆ ಹಿಜಾಬ್ ಧರಿಸುವುದು ನಿಷೇಧಿಸಿತ್ತು. ಇದು ರಾಜ್ಯಾದ್ಯಂತ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ. 

Mandya hijab lady muskan reaction about CM Siddaramaiah announcement to withdraw hijab ban rav
Author
First Published Dec 23, 2023, 12:50 PM IST

ಮಂಡ್ಯ (ಡಿ.23) ಕಳೆದ ವರ್ಷ ಬಿಜೆಪಿ ಅಧಿಕಾರವಾಧಿಯಲ್ಲಿ ಶಾಲೆಗಳಲ್ಲಿ ಸಮವಸ್ತ್ರದ ಜೊತೆ ಹಿಜಾಬ್ ಧರಿಸುವುದು ನಿಷೇಧಿಸಿತ್ತು. ಇದು ರಾಜ್ಯಾದ್ಯಂತ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರೆ, ಇತ್ತ ಮುಸ್ಲಿಂ ಮುಖಂಡರು ಸಿದ್ದರಾಮಯ್ಯರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕಳೆದ ವರ್ಷ ಹಿಜಾಬ್ ವಿವಾದ ವೇಳೆ ಪಿಇಎಸ್ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಘೊಷಣೆ ಕೂಗಿ 'ಹಿಜಾಬ್ ಲೇಡಿ' ಎಂದೇ ಹೆಸರುವಾಸಿಯಾದ ಮಂಡ್ಯ ಜಿಲ್ಲೆಯ ಯುವತಿ ಮಸ್ಕಾನ್ ಪ್ರತಿಕ್ರಿಯಿಸಿದ್ದು, ನಮ್ಮ ಹಕ್ಕು ನಮಗೆ ಕೊಟ್ಟಿರೋದಕ್ಕೆ ಸಿಎಂ ಸಿದ್ದರಾಮಯ್ಯ, ಜಮೀರ್ ಅಹಮದ್, ಯು.ಟಿ.ಖಾದರ್, ಡಿ.ಕೆ.ಶಿವಕುಮಾರ್ ಎಲ್ಲರಿಗೂ ಧನ್ಯವಾದಗಳು ತಿಳಿಸಿದ್ದಾಳೆ.

 

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ

ನಮ್ಮ ಸಂಸ್ಕೃತಿಯನ್ನು ಬೆಂಬಲಿಸಿದ್ದಾರೆ. ನಾವು ಅಣ್ಣ-ತಮ್ಮಂದಿರು ರೀತಿ ಕಾಲೇಜಿಗೆ ಹೋಗಿ ಓದುತ್ತಾ ಇದ್ದೆವೋ ಅದೇ ರೀತಿ ನಾವು ಹೋಗಬೇಕಿದೆ. ಹಿಜಾಬ್ ನಮ್ಮ ಸಂಸ್ಕೃತಿ ನಮ್ಮ ಹಕ್ಕು.
ಹಿಜಾಬ್ ಹಕ್ಕು ವಾಪಸ್ ಬರುತ್ತೆ ಎಂಬ ನಂಬಿಕೆ ಇದೆ. ಈಗ ಎಲ್ಲರೂ ಶಿಕ್ಷಣ ಪಡೆಯಬೇಕು. ಹಿಜಾಬ್ ಇದೆ ಎಲ್ಲರೂ ಬಂದು ಪರೀಕ್ಷೆ ಬರೆಯಿರಿ. ಹಿಜಾಬ್ ಅನ್ನೋದು ನಮ್ಮ ಧರ್ಮ. ಇದನ್ನು‌ ನಾವು ಪಾಲನೆ ಮಾಡಬೇಕಾಗಿದೆ. ಹಿಜಾಬ್ ವಿವಾದದಿಂದ ಅನೇಕ ಹುಡುಗಿಯರು ಶಿಕ್ಷಣದಿಂದ ವಂಚಿತರಾಗಿದ್ರು.
ನಾನು‌ ಸಹ ಒಂದು ವರ್ಷ ಕಾಲೇಜಿಗೆ ಹೋಗಿಲ್ಲ. ಈಗ ನಾನು ಪಿಇಎಸ್ ಕಾಲೇಜಿಗೆ ಹೋಗ್ತೀನಿ. ಎಲ್ಲರೂ ಈಗ ಬಂದು ಪರೀಕ್ಷೆ ಬರೆಯಿರಿ. ಶಿಕ್ಷಣದ ವಿಚಾರದಲ್ಲಿ ರಾಜಕೀಯ ಬೇಡಾ. ಅಣ್ಣ-ತಮ್ಮಂದಿರ ರೀತಿ ಇದ್ದೀವಿ. ಮುಂದೆಯೂ ಸಹ ಹಾಗೇಯೇ ಇರೋಣ. ನಾವು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದೇವೆ. ಎಲ್ಲಾ ಧರ್ಮವೂ ಒಂದೇ, ಮನುಷ್ಯರ ರೀತಿ ಬದುಕೋಣಾ. ಧರ್ಮಗಳ ನಡುವೆ ಸಂಘರ್ಷ ಬೇಡ ಎಂಬ ಶಾಂತಿಯ ಸಂದೇಶ ನೀಡಿದ್ದಾಳೆ.

ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ ಅಥವಾ ಕಡ್ಡಾಯ ಅನ್ನೋದು ತಗೀತಾರೋ?: ಸಿ.ಟಿ.‌ರವಿ‌

ಕಳೆದ ವರ್ಷ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಜಾಬ್ ಸಂಘರ್ಷ ಭುಗಿಲೆದ್ದಿತ್ತು. ಹಿಂದು ವಿದ್ಯಾರ್ಥಿಗಳು ಅವರು ಹಿಜಾಬ್ ಧರಿಸುವುದಾದರೆ ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ಪ್ರತಿರೋಧ ತೋರಿಸಿದ್ದರು. ಅದರಂತೆ ಪಿಇಎಸ್ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ ಹುಡುಗರು. ಈ ವೇಳೆ ಮಸ್ಕಾನ್ ಅವರನ್ನು ಕಂಡು ಜೈಶ್ರೀರಾಮ ಘೋಷಣೆ ಕೂಗಿದ್ದರು. ಇದಕ್ಕೆ ಮಸ್ಕಾನ್ ಸಹ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಳು. ಈ ಘಟನೆ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಎಷ್ಟೆಂದರೆ ಉಗ್ರ ಸಂಘಟನೆಗಳು ಸಹ ಮಸ್ಕಾನ್ ಹೇಳಿಕೆ ಬೆಂಬಲಿಸಿ ಹೇಳಿಕೆ ನೀಡಿದ್ದರು. ಎಲ್ಲವೂ ತಣ್ಣಗಾಯ್ತು ಎನ್ನುವಷ್ಟರಲ್ಲಿ ಮತ್ತೆ ಇದೀಗ ಹಿಜಾಬ್ ವಿವಾದ ಭುಗಿಲೆದ್ದಿದೆ. ಹಿಜಾಬ್ ನಿಷೇಧ ವಾಪಸ್ ಮಾಡುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಂದುಪರ ಸಂಘಟನೆಗಳು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios