ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ ಅಥವಾ ಕಡ್ಡಾಯ ಅನ್ನೋದು ತಗೀತಾರೋ?: ಸಿ.ಟಿ.‌ರವಿ‌

ರಾಜ್ಯದಲ್ಲಿ ಹಿಜಾಬ್ ನಿಷೇಧ ಮಾಡಿರಲಿಲ್ಲ. ಶಾಲೆಗಳಲ್ಲಿ ಯೂನಿಫಾರಂ ಕಡ್ಡಾಯ ಮಾಡಿತ್ತು. ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ ಅಥವಾ ಯೂನಿಫಾರಂ ಕಡ್ಡಾಯ ಅನ್ನೋದು ತಗೀತಾರೋ ಎಂದು ಹಿಜಾಬ್ ನಿಷೇಧ ವಾಪಸ್ಸು ಬಗ್ಗೆ ಸಿ.ಟಿ.‌ರವಿ‌ ಪ್ರತಿಕ್ರಿಯೆ ನೀಡಿದ್ದಾರೆ. 

Ex MLA CT Ravi Slams On CM Siddaramaiah Over Hijab Issue gvd

ಚಿಕ್ಕಮಗಳೂರು (ಡಿ.23): ರಾಜ್ಯದಲ್ಲಿ ಹಿಜಾಬ್ ನಿಷೇಧ ಮಾಡಿರಲಿಲ್ಲ. ಶಾಲೆಗಳಲ್ಲಿ ಯೂನಿಫಾರಂ ಕಡ್ಡಾಯ ಮಾಡಿತ್ತು. ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ ಅಥವಾ ಯೂನಿಫಾರಂ ಕಡ್ಡಾಯ ಅನ್ನೋದು ತಗೀತಾರೋ ಎಂದು ಹಿಜಾಬ್ ನಿಷೇಧ ವಾಪಸ್ಸು ಬಗ್ಗೆ ಸಿ.ಟಿ.‌ರವಿ‌ ಪ್ರತಿಕ್ರಿಯೆ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್‌ ನಿಷೇಧ ಆಗಿರಲಿಲ್ಲ. ಕೇವಲ ಶಾಲೆ-ಕಾಲೇಜುಗಳಲ್ಲಿ 1964  ಶಿಕ್ಷಣ ಕಾಯ್ದೆ ಪ್ರಕಾರ ಯೂನಿಫಾರಂ ಕಡ್ಡಾಯ ಮಾಡಿತ್ತು. ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸುವ ಸಮವಸ್ತ್ರ ಪಾಲಿಸಬೇಕು ಅಂತ ನಿಯಮವಿತ್ತು.  

ಎಲ್ಲಾ ಯೂನಿಫಾರಂ ಗೂ ಹಿಜಾಬ್‌ ಕಡ್ಡಾಯ ಮಾಡಲು ಹೊರಟಿದ್ದೀರೋ ಯೂನಿಫಾರಂ ಬೇಡ ಅವರಿಷ್ಟದಂತೆ  ಅಂತ ಮಾಡಲು ಹೊರಟಿದ್ದೀರೋ ಸ್ಪಷ್ಟಪಡಿಸಿ. ಯೂನಿಫಾರಂ ವಿರುದ್ಧ ಇದ್ದೋರ್ದು ಗಲಾಟೆ ಇದ್ದದ್ದು. ಮಕ್ಕಳಿಗೆ ಯೂನಿಫಾರಂ ತಂದ ಉದ್ದೇಶ ಬಡವ-ಬಲ್ಲಿದ ಅಂತ ಬೇಧ ಇರ್ಬಾರ್ದು. ಜಾತಿಯ ಬೇದ ಇರಬಾರದು. ನಾವೆಲ್ಲರೂ ಸಮಾನರು ಎಂಬ ಮಾನಸೀಕತೆಯಲ್ಲಿ ಎಂದು ಕಲೀಯಬೇಕು ಅನ್ನೋ ಉದ್ದೇಶದಿಂದ ಸಿದ್ದರಾಮಯ್ಯ ಮನಸ್ಸಿಗೆ ಬಡವ-ಬಲ್ಲಿದ ಅಂತಿರಬೇಕು. ಈ ಜಾತಿ ಆ ಜಾತಿ ಅಂತ ಇರಬೇಕು ಎಂದರು.

ಪ್ರತಾಪ ಸಿಂಹ ಗುಹೆ ಸೇರಿದ್ರಾ ಅಬ್ಬರಿಸುತ್ತಿದ್ದ ಸಿ.ಟಿ.ರವಿ ಎಲ್ಲಿ: ಸಚಿವ ತಂಗಡಗಿ ಪ್ರಶ್ನೆ

ಶಾಲೆಗಳಲ್ಲೂ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂಬ ಗುರುತು ಬರಬೇಕು. ಆ ಗುರುತಿ ಇದ್ರೆ ನಮ್ಮನ್ನು. ಒಡೆದು ಆಳಲು, ರಾಜಕಾರಣ ಮಾಡಲು ಸುಲಭ ಅಂತ ಅನ್ನಿಸಿರಬಹುದು. ಆ ಕಾರಣಕ್ಕೆ ತರುತ್ತಿದ್ದಾರೆ ಅಂತ ಅನ್ಸತ್ತೆ. ಹಾಗೇನಾದ್ರು ಆದ್ರೆ, ನಾಳೆ ಎಲ್ಲರಿಗೂ ಅನ್ನಿಸಬಹುದು. ನಾಳೆ ಕೆಲವರಿಗೆ ಕೇಸರಿ ಶಾಲು ಹಾಕ್ಕೊಂಡು ಬರೋದು ನಮ್ಮ ಐಟೆಂಟಿ ಅನ್ನಿಸಬಹುದು. ಕೆಲವರಿಗೆ ಹಸಿರು ಶಾಲು ನಮ್ಮ ಗುರುತು ಅನ್ನಿಸಬಹುದು. ನೀಲಿ ಶಾಲು ನಮ್ಮ ಗುರುತು ಅನ್ನಿಸಬಹುದು. ಹಳದಿ ನಮ್ಮ ಗುರುತು ಅನ್ನಿಸಬಹುದು. ಎಲ್ಲರೂ ಅವರು ಗುರುತು ತೋರಿಸಲು ಹೊರಟರೆ ಸಮಾನತೆ ಎಲ್ಲಿ ಬರುತ್ತೆ. 

ಸಮಾನತೆ ಇರಬೇಕೋ ಅಥವ ಬೇದ ಭಾವ ಇರಬೇಕೋ ಎಂದು ಸಿ.ಟಿ ರವಿ ಪ್ರಶ್ನೆ ಮಾಡಿದರು. ಕಾಂಗ್ರೆಸ್ ದಲಿತರನ್ನ ಬರೀ ಹೇಳಕ್ಕೆ... ತೋರ್ಸಕ್ಕೆ ಇಟ್ಟುಕೊಂಡಿದೆ ಅಷ್ಟೆ. ಇಂದಿನ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 50  ಸ್ಥಾನ ಗೆಲ್ಲೋದೆ ಕಷ್ಟ. ಇಂತಹಾ ಸ್ಥಿತಿಯಲ್ಲಿ ಖರ್ಗೆ ಅವರನ್ನ ಮಾಡ್ತೀವಿ ಅಂದ್ರೇನು... ಮಾಡಲ್ಲ ಅಂದ್ರೇನು... ಮೂರು ಲೋಕಕ್ಕೂ ಖರ್ಗೆ ಅವರನ್ನ  ಅಧ್ಯಕ್ಷರನ್ನಾಗಿ ಮಾಡಲಿ. ಪಾತಾಳ, ದೇವ, ಭೂಲೋಕ ಮೂರಕ್ಕೂ ಅವರನ್ಮೇ ಮಾಡಲಿ. ಹೇಗೂ 50 ದಾಟಲ್ಲ... ಹೇಳಕ್ಕೇನು... ಹೇಳೋಣ... ಅಂತ ಹೇಳ್ತಾರೆ. 

ಕುರುಬರ ಹೋರಾಟಕ್ಕೆ ಕುರಿಗಳು ಸಾಥ್: ತಹಸೀಲ್ದಾರ್ ಕಚೇರಿ ಆವರಣದೊಳಗೆ ಪ್ರತಿಭಟನೆ!

ಮೆಜಾರಿಟಿ ಬಂದಾಗ ಮಾಡಿದ್ದಾರಾ...ಕರ್ನಾಟಕಲ್ಲಿ ಮೆಜಾರಿಟಿ ಇದೆ.. ಸಿಎಂ ಮಾಡಿದ್ರಾ. ಏಕೆ ಪರಮೇಶ್ವರ್ ಅವರನ್ನ ಸಿಎಂ ಮಾಡಬಾರದಿತ್ತು. ಕಾಂಗ್ರೆಸ್ ಬರೀ ತೋರಿಸಕ್ಕೆ, ಹೇಳಕ್ಕೆ ಇಟ್ಕಂಡಿದೆ ಅಷ್ಟೆ. ಖರ್ಗೆ ಅವರನ್ನ ಮುಖ್ಯಮಂತ್ರಿಯನ್ನೇ ಮಾಡ್ಲಿಲ್ಲ. ಪರಮೇಶ್ವರ್ ಅವರು ಎಲ್ಲಿ ಸಿಎಂ ಆಗ್ತಾರೋ ಅಂತ ಷಡ್ಯಂತ್ರ, ಹಣ, ಜಾತಿಯಿಂದ ಸೋಲಿಸಿದರು. ಚುನಾವಣೆ ಪೂರ್ವ ಡಿಕೆಶಿ ಅವರೇ ಖರ್ಗೆ ಸಿಎಂ ಆಗಲಿ ಎಂದಿದ್ರು. ಸುಮಾರು ಜನ ಅವರ ಮಾತನ್ನ ನಂಬಿ ಖರ್ಗೆ ಸಿಎಂ ಆಗ್ತಾರೆ ಅಂತ ಓಟು ಹಾಕಿದ್ರು. ಮೆಜಾರಿಟಿ ಬಂದ ಮೇಲೆ ಖರ್ಗೆ ಅವರು ಇಲ್ಲ... ಖರ್ಗೆ ಅವರ ಹೆಸರೂ ಇಲ್ಲ. ಮೆಜಾರಿಟಿ ಬಂದ ಕಡೆಯೇ ಸಿಎಂ ಮಾಡ್ಲಿಲ್ಲ ಎಂದು ಸಿ.ಟಿ.ರವಿ ಹೇಳಿದರು.

Latest Videos
Follow Us:
Download App:
  • android
  • ios