ಮಂಡ್ಯ ಜಿಲ್ಲೆಯಲ್ಲಿ ಬಂಡೂರು ತಳಿಯ ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆ. ಕೇವಲ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟವಾಗಿದ್ದು, ಮಾಂಸಕ್ಕಿಂತ ಹೆಚ್ಚಾಗಿ ತಳಿ ಅಭಿವೃದ್ಧಿಗಾಗಿ ಖರೀದಿಸಲಾಗಿದೆ.

ಮಂಡ್ಯ (ಫೆ.03): ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ಬಂಡೂರು ಕುರಿಗೆ ಎಲ್ಲಿಲ್ಲದ ಬೇಡಿಕೆ. ಬಂಡೂರು ಕುರಿಯ ಮಾಂಸ ಹೆಚ್ಚು ರುಚಿಕರ ಆಗಿರುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣ. ಆದರೆ, ಇದೀಗ 20 ಸಾವಿರ ರೂ.ಗೆ ಖರೀದಿ ಮಾಡಿದ್ದ ಬಂಡೂರು ಟಗರನ್ನು ತಳಿ ಅಭಿವೃದ್ಧಿಗಾಗಿ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಈ ಟಗರನ್ನು ಬರೋಬ್ಬರಿ 1.48 ಲಕ್ಷ ರೂ.ಗೆ ಖರೀದಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಬಂಡೂರು ತಳಿಯ ಟಗರು ದಾಖಲೆ ಬೆಲೆಗೆ ಸೇಲ್ ಆಗಿದೆ. ಕೇವಲ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷಕ್ಕೆ ಮಾರಾಟವಾಗಿದೆ. ಕಿರುಗಾವಲು ಗ್ರಾಮದ ಉಲ್ಲಾಸ್ ಗೌಡ ಎಂಬುವವರಿಗೆ ಸೇರಿದೆ. ಕಳೆದ 8 ತಿಂಗಳ‌ ಹಿಂದೆ ಉಲ್ಲಾಸ್ ಮನೆಯಲ್ಲಿ ಈ ಟಗರು ಮರಿ ಜನಿಸಿತ್ತು. ಬಳಿಕ ಕೆಲವು ದಿನದಲ್ಲೆ ಟಿ.ನರಸೀಪುರದ ಮೂಲದವರಿಗೆ 20 ಸಾವಿರಕ್ಕೆ ಟಗರು ಮಾರಾಟ ಮಾಡಿದ್ದರು. ಆದರೆ, ಅದೇ ಟಗರನ್ನು ಉಲ್ಲಾಸ್ ಅವರ ತಂದೆ ವಾಪಸ್ ನನಗೆ ಬೇಕು ಮನೋಹರ್ ಹೇಳಿದ್ದರು. ಹೀಗಾಗಿ, ನರಸೀಪುರದ ವ್ಯಕ್ತಿಗೆ ಮಾರಾಟ ಮಾಡಿದ ಟಗರನ್ನು ವಾಪಸ್ 50 ಸಾವಿರ ರೂ.ಗೆ ಖರೀದಿಸಿದ್ದರು.

ಇದನ್ನೂ ಓದಿ: ಬೆಂಗಳೂರಿಗರಿಗಾಗಿ 764 ಕೋಟಿ ಮೌಲ್ಯದ 20 ಯಂತ್ರ ಆಮದು ಮಾಡಿಕೊಳ್ಳಲು ಬಿಬಿಎಂಪಿ ಪ್ಲಾನ್ 

ಇದಾದ ಕೆಲವು ದಿನಗಳ ನಂತರ ಉಲ್ಲಾಸ್ ಅವರಿಂದ ಶಿವಮೊಗ್ಗ ಮೂಲದ ಉದ್ಯಮಿ ಜವಾದ್ ಅವರು ಅದೇ ಟಗರನ್ನು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ಟಗರು ಹಸ್ತಾಂತರ ಮಾಡಿದ್ದಾರೆ. ಉಲ್ಲಾಸ್ ತಂದೆ ಮನೋಹರ್ ಅವರಿಗೆ ಸನ್ಮಾನ ಮಾಡಿ ಜವಾದ್ ಅವರು 1.48 ಲಕ್ಷ ರೂ. ಹಣ ನೀಡಿ ಟಗರು ಕೊಂಡೊಯ್ದಿದ್ದಾರೆ. ಇನ್ನೂ ಮಾಂಸದ ದೃಷ್ಟಿಕ್ಕಿಂತ ಹೆಚ್ಚಾಗಿ ಬಂಡೂರು ತಳಿ ಅಭಿವೃದ್ದಿಗಾಗಿ ಈ ಟಗರು ದಾಖಲೆ ಬೆಲೆಗೆ ಮಾರಾಟ ಆಗಿದೆ.