ಬಿಬಿಎಂಪಿ 764 ಕೋಟಿ ರೂ. ಮೌಲ್ಯದ 20 ಯಂತ್ರಗಳನ್ನು ಆಮದು ಮಾಡಿಕೊಳ್ಳಲು ಯೋಜಿಸಿದೆ. ಈ ಪ್ರಸ್ತಾವನೆಗೆ ಪೌರಕಾರ್ಮಿಕರು ತಮ್ಮ ಉದ್ಯೋಗ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿಗೆ 764 ಕೋಟಿ ರೂಪಾಯಿ ಮೌಲ್ಯದ 20 ಮಷೀನ್‌ಗಳ ಅವಶ್ಯಕತೆ ಉಂಟಾಗಿದ್ದು, ಇವುಗಳನ್ನು ಆಮದು ಮಾಡಿಕೊಳ್ಳಲು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಮುಂದಿನ ಏಳು ವರ್ಷ ಬೆಂಗಳೂರು ರಸ್ತೆಗಳನ್ನು ಧೂಳು ಮುಕ್ತವಾಗಿಡಲು ಅತ್ಯಾಧುನಿಕ ಕಸ ಗುಡಿಸುವ ಯಂತ್ರಗಳ ಅಗತ್ಯತೆ ಬೆಂಗಳೂರು ಮಹಾನಗರಕ್ಕಿದ್ದು, ಇವುಗಳನ್ನು ಬಾಡಿಗೆಗೆ ಪಡೆಯುವ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದ್ರೆ ಬಿಬಿಎಂಪಿ ಈ ಪ್ರಸ್ತಾವನೆಗೆ ಪೌರ ಕಾರ್ಮಿಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅತ್ಯಾಧುನಿಕ ಯಂತ್ರಗಳಿಂದ ತಮ್ಮ ಕೆಲಸಕ್ಕೆ ಕುತ್ತು ಬರಬಹುದಾ ಎಂಬ ಆತಂಕ ಪೌರ ಕಾರ್ಮಿಕರಲ್ಲಿ ಮನೆ ಮಾಡಿದೆ. ಆದರೆ ಬಿಬಿಎಂಪಿ ತನ್ನ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡದೆ.
ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾದ ಪ್ರಸ್ತಾವನೆಯ ಪ್ರಕಾರ, ಅತ್ಯಾಧುನಿಕ ಯಂತ್ರಗಳು ಎಷ್ಟು ಕಿಲೋ ಮೀಟರ್ ರಸ್ತೆ ಕಸ ಗುಡಿಸುತ್ತವೆ ಎಂಬುದರ ಆಧಾರದ ಮೇಲೆ ಬಾಡಿಗೆ ನಿರ್ಧಾರವಾಗುತ್ತದೆ. ಪ್ರತಿ ಕಿಮೀ ರಸ್ತೆಯ ಸ್ವಚ್ಛತೆಗೆ ಅಂದಾಜು 1,000 ರೂಪಾಯಿ ಬಾಡಿಗೆ ನಿಗದಿ ಮಾಡಬಹುದು. ಈ ಬೆಲೆಯನ್ನು BBMPಯ ಸಲಹಾ ಸಂಸ್ಥೆ RITES ಲಿಮಿಟೆಡ್‌ನ ಆರ್ಕಿಟೆಕ್ಟ್ ನಿರ್ಧರಿಸಿದೆ ಎಂದು ವರದಿಯಾಗಿದೆ. 2024-25ರ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಕಸ ಗುಡಿಸುವ ಯಂತ್ರಗಳಿಗಾಗಿ 30 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ. ಮುಂದಿನ ವರ್ಷಗಳಲ್ಲಿ ಈ ಹಣದ ಪ್ರಮಾಣ 30 ರಿಂದ 60 ಕೋಟಿ ರೂಪಾಯಿಗಳಷ್ಟು ಅಧಿಕವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷದ ಬಳಿಕ ಕಸ ಗುಡಿಸುವ ಯಂತ್ರಗಳಿಗಾಗಿ ಮೀಸಲಿಡುವ ಅನುದಾನದ ಪ್ರಮಾಣ ಮೂರುಪಟ್ಟು ಹೆಚ್ಚಾಗಲಿದೆ.
ಸದ್ಯ 26 ಕಸ ಗುಡಿಸುವ ಯಂತ್ರಗಳಿದ್ದು, ಇವುಗಳನ್ನು 2017-18ನೇ ಸಾಲಿನಲ್ಲಿ ಖರೀದಿಸಲಾಗಿತ್ತು. ಒಂದು ಯಂತ್ರದ ಬೆಲೆ 1.8 ಕೋಟಿ ರೂ.ಗಳಾಗಿದ್ದು, ನಿರ್ವಹಣೆಗೆ ತಿಂಗಳಿಗೆ 6 ಲಕ್ಷ ರೂಪಾಯಿ ಖರ್ಚು ಆಗುತ್ತಿದೆ. ಈಗ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿರುವ ಯಂತ್ರಗಳಿಗೆ ತಗಲುವ ವೆಚ್ಚ ಭಾರತದಲ್ಲಿ ತಯಾರಿಸಿದ ಯಂತ್ರಗಳಿಗಿಂತ ಹಲವಾರು ಪಟ್ಟು ಅಧಿಕವಾಗಲಿದೆ ಎಂದು ಅಂದಾಜಿಸಲಾಗಿದೆ. ಅದ್ದರಿಂದ ಈ ಆರ್ಥಿಕ ಹೊರೆಯನ್ನು ನಿಭಾಯಿಸಲು ಕಷ್ಟ ಸಾಧ್ಯವಾಗಬಹುದು ಎಂಬ ವಿಶ್ಲೇಷಣೆಗಳು ಕೇಳಿ ಬಂದಿದೆ.
ಸದ್ಯ ರಸ್ತೆಗಳ ಕಸ ಗುಡಿಸಲು ಬಿಬಿಎಂಪಿ ಬಳಿಯಲ್ಲಿ 17,000 ಪುರಸಭೆ ಕಾರ್ಮಿಕರಿದ್ದಾರೆ. ಆಮದು ಮಾಡಿಕೊಳ್ಳಲು ನಿರ್ಧರಿಸುವ ಯಂತ್ರಗಳು ಭಾರತದ ರಸ್ತೆಗಳಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಮೊದಲ ತಿಳಿದುಕೊಳ್ಳಬೇಕು. ಈ ಸಂಬಂಧ ಪ್ರಾಯೋಗಿಕ ಪರೀಕ್ಷೆಗಳು ಸಹ ನಡೆಯುವ ಅವಶ್ಯಕತೆ ಇದೆ. ಆಮದು ಮಾಡಿಕೊಳ್ಳುವ ನಿರ್ಧಾರ, ಕೇಂದ್ರದ ಮೇಕ್ ಇನ್ ಇಂಡಿಯಾ ನೀತಿಗೆ ವಿರುದ್ಧವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ಅಸ್ತು
ಯಂತ್ರಗಳ ಆಮದು ಮಾಡಿಕೊಳ್ಳುವ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿ ನಾಥ್, ಈ ಪ್ರಸ್ತಾವನೆ ಅತ್ಯಂತ ಮಿತವ್ಯಯವಾಗಿದ್ದು, ಬೆಲೆಯನ್ನು ಸಲಹಾ ಸಂಸ್ಥೆಗಳಾದ RITES ಲಿಮಿಟೆಡ್ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಅಧ್ಯಯನ ಮಾಡಿದೆ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳನ್ನು ಧೂಳು ಮುಕ್ತವನ್ನಾಗಿ ಮಾಡಲು ಈ ಯಂತ್ರಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
ರಸ್ತೆಗಳನ್ನು ಧೂಳು ವಾತಾವರಣ ಮುಕ್ತ ಮಾಡುವ ಯಂತ್ರಗಳಿಗಾಗಿ 764 ಕೋಟಿ ರೂಪಾಯಿ ವೆಚ್ಚ ಮಾಡುವ ಅಗತ್ಯ ಇದೆಯಾ ಎಂದು ನಾಗರಿಕ ಸ್ವಯಂಸೇವಕ ವಿ ರಾಮಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ಈ ಕುರಿತ ಅಧ್ಯಯನ ಮಾಡಲಾಗಿದೆಯಾ? ಹೆಚ್ಚುವರಿ ಆರ್ಥಿಕ ವೆಚ್ಚ ಸರಿದೂಗಿಸಲು ಪುರಸಭೆಯ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಾ ಎಂದು ವಿ ರಾಮಪ್ರಸಾದ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
