ಪ್ರಧಾನಿ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪ ವಿರುದ್ಧ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿದ ಹೇಳಿಕೆಯಿಂದಾಗಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ವಾಟಾಳ್ ಅವರನ್ನು ಕಾಂಗ್ರೆಸ್ ಗುಪ್ತ ವಕ್ತಾರ ಎಂದು ಆರೋಪಿಸಿದರು.

ಮಂಡ್ಯ (ಮೇ.13): ಕನ್ನಡ ಹೋರಾಟಗಾರ ವಾಟಾಳ್(Vatal Nagaraj) ಅವರು ಪ್ರಧಾನಿ ಮೋದಿ ಹಾಗೂ ಬಿಎಸ್ ಯಡಿಯೂರಪ್ಪ ವಿರುದ್ಧ ನೀಡಿದ ಹೇಳಿಕೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ವಾಟಾಳ್ ಹೇಳಿಕೆಗೆ ಕೆರಳಿದ ಮಂಡ್ಯ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಜಯ್ ವೃತ್ತದಲ್ಲಿ ಪ್ರತಿಭಟನೆ, ವಾಟಾಳ್ ವಿರುದ್ಧ ಕಿಡಿ

ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ವಾಟಾಳ್ ನಾಗರಾಜ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 'ವಾಟಾಳ್ ನಾಗರಾಜ್ ಕನ್ನಡ ಹೋರಾಟಗಾರನ ಮುಖವಾಡಲ್ಲಿರುವ ಕಾಂಗ್ರೆಸ್ ಪಕ್ಷದ ಗುಪ್ತ ವಕ್ತಾರ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಟಾಳ್ ಭಾವಚಿತ್ರ ಹರಿದು ಚಪ್ಪಲಿಯಿಂದ ತುಳಿದ ಕಾರ್ಯಕರ್ತರು

ಪ್ರಧಾನಿ ಮೋದಿ, ಬಿಎಸ್‌ವೈ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಕಾರ್ಯಕರ್ತರು ವಾಟಾಳ್ ಭಾವಚಿತ್ರ ಹರಿದು ಹಾಕಿದರು. ಕೆಲವರು ಭಾವಚಿತ್ರವನ್ನು ಚಪ್ಪಲಿಯಿಂದ ತುಳಿದು ಆಕ್ರೋಶ ಹೊರಹಾಕಿದರು.

ಹೋರಾಟ ಮಾಡಿ.. ರಾಜಕಾರಣ ಬೇಡ..!

ವಾಟಾಳರೇ ನೀವು ಕನ್ನಡ ಹೋರಾಟಗಾರರಾಗಿದ್ದರೆ ಕನ್ನಡದ ಪರ ಹೋರಾಟ ಮಾಡಿ. ಆದರೆ ಹೋರಾಟದ ಹೆಸರಲ್ಲಿ ರಾಜಕೀಯ ಮಾಡ ಕಾಂಗ್ರೆಸ್‌ಪಕ್ಷದ ಗುಪ್ತ ವಕ್ತಾರರಂತೆ ವರ್ತಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ಯಡಿಯೂರಪ್ಪ ಬಗ್ಗೆ ಮಾತಾಡೋ ಮುನ್ನ ಎಚ್ಚರ

ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಬಾರದು ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಾಟಾಳ್ ನಾಗರಾಜ್ ಮಂಡ್ಯಕ್ಕೆ ಕಾಲಿಡಬೇಕಾದರೆ ಮೊದಲು ರಾಜ್ಯದ ಜನತೆ ಹಾಗೂ ಯಡಿಯೂರಪ್ಪ ಅವರ ಅಭಿಮಾನಿಗಳ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.