ಲವ್ ಜಿಹಾದ್‌ಗೆ ಹೆಣ್ಣು ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಿ: ಪೇಜಾವರ ಶ್ರೀ
ಮನೆಯೆ ಮೊದಲ ಪಾಠಶಾಲೆ ಅಮ್ಮ ತಾನೆ ಮೊದಲ ಗುರು ಎಂದು ನಮ್ಮ ಹಿರಿಯರು ಹೇಳಿಕೊಟ್ಟ ದಿವ್ಯ ಪರಂಪರೆ ನಮ್ಮದು . ನಮ್ಮ ಸನಾತನ ಧರ್ಮದ ಸಂಸ್ಕೃತಿವಸದಾಚಾರ ಸಂಪ್ರದಾಯ ಸದ್ವಿಚಾರಗಳನ್ನು ಮನೆ ಮನೆಗಳಲ್ಲಿ ಈ ತನಕ ಉಳಿಸಿಕೊಂಡು ಬಂದಿದ್ದರೆ ಅದರಲ್ಲಿ ಮಾತೆಯರ ಪಾತ್ರವೇ ಪ್ರಧಾನವಾದುದು.
ಮೈಸೂರು (ಸೆ.27): ಮನೆಯೆ ಮೊದಲ ಪಾಠಶಾಲೆ ಅಮ್ಮ ತಾನೆ ಮೊದಲ ಗುರು ಎಂದು ನಮ್ಮ ಹಿರಿಯರು ಹೇಳಿಕೊಟ್ಟ ದಿವ್ಯ ಪರಂಪರೆ ನಮ್ಮದು . ನಮ್ಮ ಸನಾತನ ಧರ್ಮದ ಸಂಸ್ಕೃತಿವಸದಾಚಾರ ಸಂಪ್ರದಾಯ ಸದ್ವಿಚಾರಗಳನ್ನು ಮನೆ ಮನೆಗಳಲ್ಲಿ ಈ ತನಕ ಉಳಿಸಿಕೊಂಡು ಬಂದಿದ್ದರೆ ಅದರಲ್ಲಿ ಮಾತೆಯರ ಪಾತ್ರವೇ ಪ್ರಧಾನವಾದುದು. ಈ ಪರಂಪರೆ ಉಳಿಯಬೇಕಾಗಿರುವುದೂ ಮಹಿಳೆಯರಿಂದಲೇ . ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಲ್ಲಿ ಲವ್ ಜಿಹಾದ್ ಮೊದಲಾದವುಗಳಿಗೆ ನಮ್ಮ ವಿಪ್ರ ಯುವತಿಯರು ಹೆಚ್ಚಾಗಿ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವುದರ ಜೊತೆಗೆ ಬ್ರಾಹ್ಮಣ ಸಂಸ್ಕೃತಿ ಭವಿಷ್ಯಕ್ಕೇ ಅಪಾಯ ಎದುರಾಗುತ್ತಿದೆ.
ನಮ್ಮ ಯುವತಿಯರನ್ನು ಅಂಥಹ ವಿಲಕ್ಷಣ ಮತ್ತು ಅಪಾಯಕಾರಿ ಬೆಳವಣಿಗೆಗಳಿಂದ ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿಯೂ ತಾಯಂದಿರ ಮೇಲೆ ಇದೆ ಎಂದು ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಮೈಸೂರಿನಲ್ಲಿ ವಿಪ್ರ ಮಹಿಳಾ ಸಂಗಮದ ಸ್ವಂತ ಕಚೇರಿಯನ್ನು ಉದ್ಘಾಟಿಸಿ ಅವರು ಅನುಗ್ರಹ ಸಂದೇಶ ನೀಡಿದರು. ಮುಡಾ ಮಾಜಿ ಅಧ್ಯಕ್ಷ ರಾಜೀವ್ , ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀ , ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮೊದಲಾದವರಿದ್ದರು.
ಕಾವೇರಿ ನೀರು ಹರಿಸಿದ್ದು ಸರ್ಕಾರದ ತಪ್ಪು: ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ
ಅರಮನೆ ನಗರಿ ಮೈಸೂರಿನಲ್ಲಿ ತಮ್ಮ ಚಾತುರ್ಮಾಸ್ಯ ವ್ರತ ಸಂಕಲ್ಪಿಸಿ ವೈವಿಧ್ಯಮಯ, ನಿರಂತರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಧರ್ಮಜಾಗೃತಿ ನಡೆಸಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಭಾನುವಾರ ಮೈಸೂರು ನಾಗರಿಕರ ಪರವಾಗಿ ವೈಭವದ ತುಲಾಭಾರ ನಡೆಸಲಾಯಿತು. ಚಾತುರ್ಮಾಸ್ಯ ಸಮಿತಿ ಮತ್ತು ಶ್ರೀ ಕೃಷ್ಣ ಮಂಡಳಿಯ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿತು.
ಪಟ್ಟದ ದೇವರಾದ ರಾಮ ಕೃಷ್ಣ ವಿಠಲ ದೇವರ ಸಂಪುಟವನ್ನು ಕೈಯಲ್ಲಿ ಹೊತ್ತ ಶ್ರೀಗಳನ್ನು ತಕ್ಕಡಿಯಲ್ಲಿ ಕೂಡಿಸಿ ಇನ್ನೊಂದು ಕಡೆ ಫಲವಸ್ತುಗಳು ಧನ ಕನಕ ಸಹಿತ ದಿವ್ಯ ವಸ್ತುಗಳನ್ನಿಟ್ಟು ತೂಗಿಸಿ ಮಂಗಳಾರತಿ ಬೆಳಗಲಾಯಿತು. ನಂತರ ಭಕ್ತರು , ಪುಷ್ಪವೃಷ್ಟಿಗೈದು ಗೌರವಿಸಿದರು. ಮಠದ ವಿದ್ಯಾರ್ಥಿಗಳು ಚೆಂಡೆವಾದನ ಮತ್ತು ಮಂತ್ರಘೋಷಗೈದರು. ಸಂಜೆ ಶ್ರೀಗಳ ಚಾತುರ್ಮಾಸ್ಯದ ಸಾಂಸ್ಕೃತಿಕ ಸರಣಿ ಕಾರ್ಯಕ್ರಮಗಳ ಅಂಗವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಎಂ.ಡಿ. ಪಲ್ಲವಿ ಅವರಿಂದ ಗಾನಸುಧೆ ಕಾರ್ಯಕ್ರಮ ನೆರೆದ ಕಿಕ್ಕಿರಿದ ಜನಸ್ತೋಮದ ಮನಸೂರೆಗೊಂಡಿತು.
ಕಾವೇರಿ ವಿಷಯದಲ್ಲಿ ದೊಡ್ಡ ಕಾನೂನು ಹೋರಾಟ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ
ಶತಕೋಟಿ ಮೀರಿದ ರಾಮಮಂತ್ರ ಜಪಯಜ್ಞ: ಇದೇ ಸಂದರ್ಭ ಪೇಜಾವರ ಶ್ರೀಗಳು ತಮ್ಮ 36 ನೇ ಚಾತುರ್ಮಾಸ್ಯದ ಅಂಗವಾಗಿ ನಾಡಿನಾದ್ಯಂತ ಶಾಲಾಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಲಕ್ಷಾಂತರ ಮಂದಿಯಿಂದ ದಶಕೋಟಿ ರಾಮಮಂತ್ರ ಜಪಯಜ್ಞ (ಇದು ಶತಕೋಟಿಗೂ ಮೀರಿದೆ) ಮತ್ತು ವಿದ್ವಾಂಸರಿಂದ ಶ್ರೀ ಮದ್ಭಾಗವತ ಪ್ರವಚನ ಸತ್ರ ಹಮ್ಮಿಕೊಳ್ಳಲಾಗಿತ್ತು. ಅದರ ಪರಿಸಮಾಪ್ತಿಯ ಅಂಗವಾಗಿ ಭಾನುವಾರ ಶ್ರೀರಾಮತಾರಕ ಯಜ್ಞ ಮತ್ತು ಶ್ರೀ ಮದ್ಭಾಗವತ ಉದ್ಯಾಪನಾ ಯಾಗಗಳು ಸರಸ್ವತಿಪುರಂನ ಕೃಷ್ಣಧಾಮದಲ್ಲಿ ನಡೆಸಲಾಯಿತು.