ಕಾವೇರಿ ವಿಷಯದಲ್ಲಿ ದೊಡ್ಡ ಕಾನೂನು ಹೋರಾಟ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಲು ದೊಡ್ಡ ಮಟ್ಟದ ಕಾನೂನು ಹೋರಾಟ ನಡೆಸುವ ಅಗತ್ಯವಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಮಂಡ್ಯ (ಸೆ.25): ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಲು ದೊಡ್ಡ ಮಟ್ಟದ ಕಾನೂನು ಹೋರಾಟ ನಡೆಸುವ ಅಗತ್ಯವಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಗರದ ಸರ್ ಎಂ.ವಿ.ಪ್ರತಿಮೆ ಬಳಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಾಧಿಕಾರ ಯಾವ ಮಾನದಂಡ ಆಧರಿಸಿ ನೀರು ಬಿಡುಗಡೆಗೆ ಆದೇಶ ಮಾಡುತ್ತಿದೆಯೋ ಗೊತ್ತಾಗುತ್ತಿಲ್ಲ. ಪ್ರಾಧಿಕಾರಕ್ಕೆ ವಾಸ್ತವ ಸ್ಥಿತಿ ಏಕೆ ಅರ್ಥವಾಗುತ್ತಿಲ್ಲ. ನೀರಿನ ಪರಿಸ್ಥಿತಿಯ ಅವಲೋಕನ ನಡೆಸುತ್ತಿಲ್ಲವೇಕೆ ಎಂಬುದೇ ತಿಳಿಯದಾಗಿದೆ.
ವಸ್ತು ಸ್ಥಿತಿಯನ್ನು ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆಯೇ ಎನ್ನುವುದೂ ತಿಳಿಯುತ್ತಿಲ್ಲ ಎಂದರು. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವ ಅಗತ್ಯವಿದೆ. ಹೋರಾಟದ ಮೂಲಕವೇ ಕೇಂದ್ರ ಸರ್ಕಾರ, ಪ್ರಾಧಿಕಾರ, ಸುಪ್ರೀಂ ಕೋರ್ಟ್ ಮತ್ತು ತಮಿಳುನಾಡಿಗೆ ವಾಸ್ತವ ಸ್ಥಿತಿ ಅರ್ಥ ಮಾಡಿಸಬೇಕಿದೆ ಎಂದು ಪ್ರತಿಪಾದಿಸಿದ ಅವರು, ಈ ನಿಟ್ಟಿನಲ್ಲಿ ಹಿರಿಯರು, ತಜ್ಞರು, ರೈತ ಮುಖಂಡರ ನಿರ್ದೇಶನದಂತೆ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು. ಸೆ. 26 ಮತ್ತು 29ರ ಬಂದ್‌ಗೆ ನಮ್ಮ ಬೆಂಬಲ ಇದೆ ಎಂದ ಅವರು, ಅದರಲ್ಲಿ ನಾವೂ ಸಹ ಭಾಗಿಯಾಗುತ್ತೇವೆ. ಒಟ್ಟಾರೆ ರೈತರ ಸಮಸ್ಯೆ ಬಗೆಹರಿಯಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಇಂದು ರಾಜ್ಯಾದ್ಯಂತ ಏಕಕಾಲಕ್ಕೆ ಸಚಿವರ ಜನತಾದರ್ಶನ: ಸಾರ್ವಜನಿಕರ ಅಲೆದಾಟ ತಪ್ಪಿಸುವ ಕಾರ್ಯಕ್ರಮ
ಸಹಕಾರ ಸಂಘಗಳಿಂದ ರೈತರ ಪ್ರಗತಿಗಾಗಿ ಕೆಲಸ: ಸಹಕಾರ ಸಂಘಗಳು ರೈತರ ಆರ್ಥಿಕ ಪ್ರಗತಿಗಾಗಿ ಕೆಲಸ ಮಾಡುತ್ತಿವೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ತಾಲೂಕಿನ ನಾರ್ಥ್‌ಬ್ಯಾಂಕ್ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಡೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಕೃಷಿ ಜತೆಗೆ ಹೈನುಗಾರಿಕೆ ರೈತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ರೈತರು ಹೆಚ್ಚಿನ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಬಲವರ್ಧನೆಗೊಳ್ಳಬಹುದು ಎಂದರು.
ಮನ್ಮುಲ್ ನಿರ್ದೇಶಕ ಕೆ.ರಾಮಚಂದ್ರು ಮಾತನಾಡಿ, ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ನಾಲ್ಕು ತಿಂಗಳು ಕಳೆದಿವೆ. ಶಾಸಕರಾದ ಬಳಿಕ ಚಿಕ್ಕಕೊಪ್ಪಲು, ದೊಡ್ಡಬ್ಯಾಡರಹಳ್ಳಿ, ಕಟ್ಟೇರಿ, ನಾರ್ಥ್ ಬ್ಯಾಂಕ್ ಸೇರಿದಂತೆ ಹಲವು ಡೇರಿ ಕಟ್ಟಡಗಳನ್ನು ಉದ್ಘಾಟಿಸಿದ್ದೇವೆ. ತಾಲೂಕಿನಲ್ಲಿ ಯಾವ ಡೇರಿಗಳಿಗೆ ಸ್ವಂತ ಜಾಗ ಇಲ್ಲ, ಸ್ವಂತ ಕಟ್ಟಡಗಳು ಇಲ್ಲವೋ ಅವುಗಳನ್ನು ಗುರುತಿಸಿ ಅವುಗಳಿಗೆ ಸ್ವಂತಜಾಗ, ಸ್ವಂತ ಕಟ್ಟಡ ನಿರ್ಮಿಸಿ ಮೂಲಸೌಕರ್ಯ ಒದಗಿಸಿ ಕೊಡುವುದೇ ನನ್ನ ಉದ್ದೇಶ ಎಂದು ಹೇಳಿದರು. ಮನ್ಮುಲ್ ಅಧ್ಯಕ್ಷ ಬೋರೇಗೌಡ ಮಾತನಾಡಿ, ಗ್ರಾಮದ ಸಂಘದ ಆರಂಭಗೊಂಡು ಕೇವಲ 9 ವರ್ಷದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಂಡಿದೆ ಎಂದರೆ ಸಂಘ ಉತ್ತಮವಾಗಿ ನಡೆಯುತ್ತಿದೆ ಎಂದರ್ಥ ಎಂದು ತಿಳಿಸಿದರು.
ಕಾವೇರಿದ ಕಾವೇರಿ ಕಿಚ್ಚು: ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ?
ಈ ವೇಳೆ ಮನ್ಮುಲ್ ವ್ಯವಸ್ಥಾಪಕ ಎಸ್.ಪ್ರಭಾಕರ್, ಉಪವ್ಯವಸ್ಥಾಪಕ ಆರ್.ಪ್ರಸಾದ್, ಸಹಾಯಕ ನಿರ್ದೇಶಕಿ ಎಸ್.ಬಿ.ನಿವೇದಿತಾ, ಮಾರ್ಗ ವಿಸ್ತರ್ಣಾಧಿಕಾರಿ ಎಚ್.ಎನ್.ಉಷಾ, ಡೇರಿ ಅಧ್ಯಕ್ಷ ಬಿ.ಎನ್.ನಾಗಮಣಿ, ಉಪಾಧ್ಯಕ್ಷೆ ವರಲಕ್ಷ್ಮಿ, ನಿರ್ದೇಶಕರಾದ ಪುಟ್ಟಲಕ್ಷ್ಮಮ್ಮ, ಮಂಗಳಮ್ಮ, ಭಾರತಿ, ರೇಣುಕಾ, ಭಾಗ್ಯಮ್ಮ, ಮಾಲಾಶ್ರೀ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಏಟ್ರಿಯಾ ಬೃಂದಾವನ್ ಪವರ್ ಲಿಮಿಟೆಡ್‌ನ ನಿರ್ದೇಶಕ ನಾಗರಾಜು, ಡೇರಿ ಕಾರ್‍ಯದರ್ಶಿ ಎನ್.ಸೌಮ್ಯ, ಹಾಲು ಪರೀಕ್ಷಕಿ ಎಸ್.ದೀಪಾ ಸೇರಿದಂತೆ ಹಲವರು ಭಾಗವಹಿಸಿದ್ದರು.