Asianet Suvarna News Asianet Suvarna News

ಗ್ರಹಣ ದೋಷ ಪರಿಹಾರಕ್ಕೆ ಅಘೋರಿಗಳಿಂದ ಗೌಪ್ಯವಾಗಿ ಮಹಾಯಾಗ

ಕಳೆದ 15 ದಿನಗಳ ಅಂತರದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಿರುವುದರಿಂದ ಸಂಭವಿಸುವ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ಅಘೋರಿಗಳು 9 ದಿನಗಳ ಮಹಾಯಾಗ ನಡೆಸುತ್ತಿದ್ದಾರೆ.

Mahayaga performed secretly by the Aghoris to cure Grahana Dosha SAT
Author
First Published Nov 12, 2022, 5:51 PM IST | Last Updated Nov 15, 2022, 10:45 AM IST

ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ನ.12): ರಾಜ್ಯದ ಕರಾವಳಿ ಪ್ರದೇಶ ಉಡುಪಿಯಲ್ಲಿ ಅಘೋರಿಗಳಿಂದ ಮಹಾಯಾಗ ನಡೆಯುತ್ತಿದೆ. 15 ದಿನಗಳ ಅಂತರದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಿರುವುದರಿಂದ ಅಘೋರಿಗಳು ಯಾಗ ನಡೆಸುತ್ತಿದ್ದಾರೆ. ಈ ರೀತಿ ಗ್ರಹಣವಾದಾಗಲೆಲ್ಲ ಪ್ರಾಕೃತಿಕ ವಿಪ್ಲವಗಳು ಸಂಭವಿಸುವ ಆತಂಕ ಇರುವ ಕಾರಣಕ್ಕೆ ಮಹಾಯಾಗ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಡಲ ತೀರ ಪ್ರದೇಶದಲ್ಲಿ ಅಘೋರಿಗಳು (Aghoris) ನಡೆಸುತ್ತಿರುವ ಮಹಾ ಮೃತ್ಯುಂಜಯ ಯಾಗ (Maha Mrityunjaya Yaga) ಇದೀಗ ಎಲ್ಲರ ಗಮನ ಸೆಳೆದಿದೆ. ಸಂಚಾರದಲ್ಲಿದ್ದ ಅಘೋರಿಗಳು ಲೋಕ ಕಲ್ಯಾಣಾರ್ಥವಾಗಿ ಈಗ ಮಹಾಯಾಗ ಕೈಗೊಂಡಿದ್ದಾರೆ. ತಮ್ಮ ಸಂಚಾರದ ಅವಧಿಯಲ್ಲಿ ತಾವು ಎಲ್ಲಿರುತ್ತಾರೋ ಅಲ್ಲಿಯೇ ಯಾಗ ನಡೆಸುವಂತೆ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ, ಮಲ್ಪೆ ಸಮೀಪದ ತೊಟ್ಟಂ (Malpe Near Thottam) ಕಡಲ ತೀರದಲ್ಲಿ ಮಹಾಯಾಗ ನಡೆಸಲಾಗುತ್ತಿದೆ. ಇದನ್ನು ನಡೆಸಲು ಸೂಕ್ತ ಸ್ಥಾನವನ್ನು ಹುಡುಕಿ ಅವಿಭಜಿತ ಜಿಲ್ಲೆಗಳ ಅನೇಕ ಸ್ಥಳಗಳಿಗೆ ಅಘೋರಿಗಳು ಭೇಟಿ ಕೊಟ್ಟಿದ್ದರು. ಅಂತಿಮವಾಗಿ ಪಟ್ಟಂಪ ಪರಿಸರದ ಕಡಲ ತೀರದ ಒಂದು ಫಾರ್ಮ್ ಹೌಸ್ (Farmhouse) ಸ್ಥಳವನ್ನು ಯಾಗಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ನಭೋ ಮಂಡಲದಲ್ಲಿ ಚಂದ್ರಗ್ರಹಣದ ವಿಸ್ಮಯ: ಯಾರಿಗೆ ಶುಭ? ಅಶುಭ?

ಒಂಭತ್ತು ದಿನಗಳು ಅಹೋರಾತ್ರಿ ಆಚರಣೆ:
ಸ್ಥಳೀಯ ಜನರು ಹಾಗೂ ಮುಖಂಡರ ಯಾವುದೇ ಸಂಪರ್ಕವಿಲ್ಲದೆ ಸೀಮಿತ ವ್ಯಕ್ತಿಗಳ (Limited People's) ಸಹಕಾರದೊಂದಿಗೆ ಅತ್ಯಂತ ಗೌಪ್ಯವಾಗಿ ಯಾಗ ನಡೆಸಲಾಗುತ್ತಿದೆ. ಸತತ ೯ ದಿನಗಳ ಕಾಲ ಅಹೋರಾತ್ರಿ ಯಾಗ ಮುಂದುವರಿಯಲಿದೆ. ಏಕಕಾಲದಲ್ಲಿ ಎರಡು ಗ್ರಹಣಗಳು ಬಂದ ಸಂದರ್ಭದಲ್ಲಿ, ಪ್ರಾಕೃತಿಕ ಅನಾಹುತಗಳು (Natural disaster) ಸಂಭವಿಸುವ ಅಪಾಯ ಹೆಚ್ಚು ಎಂದು ಹೇಳಲಾಗುತ್ತದೆ. ಅದಕ್ಕೆ ಪೂರಕವೋ ಎಂಬಂತೆ ವಿಶ್ವದ ನಾನಾ ಭಾಗಗಳಲ್ಲಿ ಗ್ರಹಣದ (Eclipse) ನಂತರ ಭೂಕಂಪಗಳು ಕೂಡ ಸಂಭವಿಸಿವೆ. ಆದರೆ, ದೇಶದಲ್ಲಿ ಯಾವುದೇ ದೊಡ್ಡ ಹಾನಿ ಸಂಭವಿಸಬಾರದು ಎಂಬ ಉದ್ದೇಶದಿಂದ ಅಘೋರಿಗಳು ಕಡಲ ತೀರದಲ್ಲಿ ಈಗ ಯಾಗ ಮಡೆಸುತ್ತಿದ್ದಾರೆ. 


ದೇಶದ ವಿವಿಧೆಡೆ ಯಾಗ :
ದೇಶದ ಅನೇಕ ಭಾಗಗಳಲ್ಲಿ ಅಘೋರಿಗಳು ಯಾಗ ನಿರತರಾಗಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ (Reciprocity) ಇಲ್ಲದೆ, ನಿಸ್ವಾರ್ಥ (Selfless) ಭಾವದಿಂದ ಉಡುಪಿ ಕಡಲತಡಿಯಲ್ಲಿ ಅಘೋರಿಗಳು ನಿರತರಾಗಿದ್ದಾರೆ. ಪ್ರಕೃತಿಯಲ್ಲಿ ದೊರಕುವ ಅಮೃತಬಳ್ಳಿ, ಗರಿಕೆ (curry) ಮುಂತಾದ ಸಸ್ಯಗಳ ಜತೆಗೆ, ಲೀಟರ್ ಗಟ್ಟಲೆ ಶುದ್ಧ ತುಪ್ಪವನ್ನು ಯಾಗಕ್ಕೆ ಬಳಸಲಾಗುತ್ತಿದೆ. ಶಿವನನ್ನು ಅದಮ್ಯ ಭಕ್ತಿಯಿಂದ ಪೂಜಿಸುವ ವರ್ಗವಾದ ಅಘೋರಿಗಳು ಜನಸಾಮಾನ್ಯರ ಕಣ್ಣಿಗೆ ಬೀಳುವುದು ಬಹಳ ಅಪರೂಪ. ಜನ ಓಡಾಡಲು ಹೆದರುವ ನಿರ್ಜನ (Manless) ಸ್ಮಶಾನದಲ್ಲೇ ದಿನ ಕಳೆಯುವ ಇವರು ಈಗ ಯಾಗ ಸಾಧನೆಯನ್ನು ಮಾಡುತ್ತಿದ್ದಾರೆ.

ನರಮಾಂಸ ತಿನ್ನುವ ಅಘೋರಿಗಳು ಈಗಲೂ ಇರುತ್ತಾರಾ?

ಲೋಕ ಸುಭೀಕ್ಷೆ ಮೂಲ ಉದ್ದೇಶ:
ಚಂದ್ರಗ್ರಹಣ (Moon Eclips) ಮುಗಿಯುತ್ತಿದ್ದಂತೆ ಆರಂಭವಾಗಿರುವ ಈ ಯಾಗವು ನ.17ರಂದು ಪೂರ್ಣಗೊಳ್ಳಲಿದೆ. ಹಿಮಾಲಯದಿಂದ (Himalaya)ದಕ್ಷಿಣ ಭಾರತಕ್ಕೆ (Southern India)ಅಗಮಿಸಿದ ಅಘೋರಿಗಳು ಇವರಾಗಿದ್ದಾರೆ. ಖಂಡಗ್ರಸ್ತ ಸೂರ್ಯ ಗ್ರಹಣ, ರಕ್ತಚಂದನ ಚಂದ್ರ ಗ್ರಹಣದಿಂದ ಲೋಕಕ್ಕೆ ಅತಿವೃಷ್ಟಿ (Excess Rain), ಅನಾವೃಷ್ಟಿ ಮತ್ತು ವಿಪತ್ತು ಸಂಭವಿಸದೆ ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಪ್ರಾರ್ಥಿಸಿ ಯಾಗ ನಡೆಸುತ್ತಿದ್ದೇವೆ ಎಂದಷ್ಟೇ ಯಾಗ ನಿರತ ಅಘೋರಿಗಳು ತಿಳಿಸಿದ್ದಾರೆ. ಪ್ರತಿ ಒಂದುವರೆ ಸಾವಿರ ಮಂದಿ ನಾಗ ಸಾಧುಗಳಿಗೆ, ಓರ್ವ ಅಘೋರಿ ಮುಖ್ಯಸ್ಥನಾಗಿರುತ್ತಾರೆ. ಇಂತಹ ನಾಲ್ವರು ಅಗೋರಿಗಳು ಉಡುಪಿಯಲ್ಲಿ ಯಾಗ ನಿರತರಾಗಿದ್ದಾರೆ. ಯಾವುದೇ ಪ್ರಚಾರವಿಲ್ಲದೆ , ಅಪೇಕ್ಷೆ ಇಲ್ಲದೆ ನಡೆಸುವ ಯಾಗಗಳು, ಈ ಜಗತ್ತಿನ ನೆಮ್ಮದಿಗೆ ಕಾರಣವಾಗಿದೆ ಎಂದು ಭಕ್ತರು ನಂಬಿದ್ದಾರೆ.

Latest Videos
Follow Us:
Download App:
  • android
  • ios