Asianet Suvarna News Asianet Suvarna News

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ; ಅವಕಾಶ ಕೋರಿ ನಾಳೆ ನಾಗರೀಕ ಒಕ್ಕೂಟದಿಂದ ಹೈಕೋರ್ಟ್‌ಗೆ ಅರ್ಜಿ

ಹಲವು ವಿವಾದಗಳಿಂದ ಸುದ್ದಿಯಾಗಿದ್ದ ಚಾಮರಾಜಪೇಟೆ ಆಟದ ಮೈದಾನ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಚಾಮರಾಜಪೇಟೆ ನಾಗರೀಕ ಒಕ್ಕೂಟ ನಾಳೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. 

Civic union president ramegowda reacts about ganeshotsav at chamarajpet playground rav
Author
First Published Sep 8, 2024, 10:21 AM IST | Last Updated Sep 8, 2024, 10:21 AM IST

ಚಾಮರಾಜಪೇಟೆ (ಸೆ.8): ಹಲವು ವಿವಾದಗಳಿಂದ ಸುದ್ದಿಯಾಗಿದ್ದ ಚಾಮರಾಜಪೇಟೆ ಆಟದ ಮೈದಾನ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಚಾಮರಾಜಪೇಟೆ ನಾಗರೀಕ ಒಕ್ಕೂಟ ನಾಳೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. 

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಚಾಮರಾಜಪೇಟೆ ‌ನಾಗರೀಕರ‌ ಒಕ್ಕೂಟದ ಅಧ್ಯಕ್ಷ ರಾಮೇಗೌಡ, ಸಾಕಷ್ಟು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಚಾಮರಾಜಪೇಟೆ ‌ಆಟದ ಮೈದಾನ, ಅದು ಸರ್ಕಾರಿ ಸ್ವತ್ತು. ಕಂದಾಯ ಇಲಾಖೆಯ ಹೆಸರಿನಲ್ಲಿ ಆಟದ ಮೈದಾನ ಇದೆ. ಸಾಕಷ್ಟು ಹೋರಾಟದ ಮಾಡಿದ ಫಲವಾಗಿ ಗಣರಾಜ್ಯೋತ್ಸವ, ಸ್ವಾತಂತ್ರ್ಯುತ್ಸವ ದಿನಾಚರಣೆ ಮೈದಾನದಲ್ಲಿ ಆಚರಿಸಲಾಗುತ್ತಿದೆ. ಇದೀಗ ಗಣೇಶ ಹಬ್ಬದ ಸಂಭ್ರಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಅವಕಾಶ ಮಾಡಿಕೊಡುವಂತೆ ನಾವು ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಲಿದ್ದೇವೆ ಎಂದರು.

ಕಾರವಾರ: ಗಣೇಶನ ಪೂಜೆ ವೇಳೆ ದೇವರಿಗಿಟ್ಟ ಹಣಕ್ಕಾಗಿ ಸಹೋದರರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ!

ನಾವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಪ್ರಕರಣ ಕೋರ್ಟ್‌ನಲ್ಲಿದೆ ಅಂತಾ ಹೇಳಿದ್ದಾರೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿದೆ. ಅದೇ ರೀತಿ ಬೆಂಗಳೂರಿನ ಚಾಮರಾಜಪೇಟೆ ಮೈದಾನ ದಲ್ಲೂ ಅನುಮತಿ ಕೊಡಬೇಕು. ಮುಸ್ಲಿಂ ಸಮುದಾಯ ವರ್ಷದಲ್ಲಿ ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡ್ತಾರೆ. ಅದಕ್ಕೆ ‌ನಾವು ಸಹಕಾರ‌ ಕೊಡುತ್ತಾ ಬಂದಿದ್ದೇವೆ. ಅದೇ ರೀತಿ ನಮಗೂ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಬೇಕು. ಮೈದಾನ ಸಿಗದೆ ಒಕ್ಕೂಟದ ವತಿಯಿಂದ ರಸ್ತೆಯಲ್ಲಿ ಗಣೇಶೋತ್ಸವ  ಮಾಡ್ತಾ ಇದ್ದೇವೆ. ಆದ್ರೆ ಈ ಬಾರಿ ಆ ರೀತಿ ಮಾಡೋದು ಬೇಡ. ನಾವು ಗಣೇಶೋತ್ಸವ ಮಾಡಿದ್ರೆ ಚಾಮರಾಜಪೇಟೆ ಮೈದಾನದಲ್ಲೇ ಮಾಡಬೇಕು ಅನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ನಮಗೆ ಅನುಮತಿ ಸಿಗುತ್ತೆ ಕೋರ್ಟ್ ಮೇಲೆ ವಿಶ್ವಾಸವಿದೆ. ಈ ವಾರದಲ್ಲೇ ಅನುಮತಿ ಸಿಕ್ಕರೆ ಗಣೇಶೋತ್ಸವ ಮಾಡೇ ಮಾಡುತ್ತೇವೆ ಎಂದರು.

Latest Videos
Follow Us:
Download App:
  • android
  • ios