Asianet Suvarna News Asianet Suvarna News

ಲೋಕಸಭಾ ಚುನಾವಣೆ ಹಿನ್ನೆಲೆ ಫೇಕ್‌ನ್ಯೂಸ್ ಹೆಚ್ಚಳ ಸಾಧ್ಯತೆ; ವರ್ಲ್ಡ್ ಎಕನಾಮಿಕ್ ಫೋರಂ ಕೊಟ್ಟ ಎಚ್ಚರಿಕೆ ಏನು?

ಇನ್ನೇನು ಎರಡು ತಿಂಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಅಪಪ್ರಚಾರದ ಸಂದೇಶಗಳು ಹರಿದಾಡುವುದು ಹೆಚ್ಚು. ಹೀಗಿರುವಾಗ ಜನತೆ ಮುನ್ನೆಚ್ಚರಿಕೆ ವಹಿಸಿ, ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಮಾಹಿತಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹರಿದಾಡಬಹುದು ಎಂದು ವರ್ಲ್ಡ್ ಎಕನಾಮಿಕ್ ಫೋರಮ್ ಎಚ್ಚರಿಕೆ ನೀಡಿದೆ. 

Loksabha election 2024 increase fake news Whats warning given by the World Economic Forum rav
Author
First Published Feb 10, 2024, 9:05 PM IST

ಬೆಂಗಳೂರು (ಫೆ.10): ಇತ್ತೀಚಿನ ವರ್ಷಗಳಲ್ಲಿ ಜನರ ಜೀವನದ ಮೇಲೆ ಸೋಷಿಯಲ್ ಮೀಡಿಯಾಗಳು ಉಂಟುಮಾಡುತ್ತಿರುವ ಪ್ರಭಾವ ಸಾಕಷ್ಟು. ಇನ್ನೇನು ಎರಡು ತಿಂಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಅಪಪ್ರಚಾರದ ಸಂದೇಶಗಳು ಹರಿದಾಡುವುದು ಹೆಚ್ಚು. ಹೀಗಿರುವಾಗ ಜನತೆ ಮುನ್ನೆಚ್ಚರಿಕೆ ವಹಿಸಿ, ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಮಾಹಿತಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹರಿದಾಡಬಹುದು ಎಂದು ವರ್ಲ್ಡ್ ಎಕನಾಮಿಕ್ ಫೋರಮ್ ಎಚ್ಚರಿಕೆ ನೀಡಿದೆ. 

ಕಳೆದ ಮೂರು ದಶಕಗಳಿಂದ ದೇಶಾದ್ಯಂತ ವಿವಿಧ ಪಕ್ಷಗಳಿಗೆ ಚುನಾವಣಾ ಸಮೀಕ್ಷೆಗಳನ್ನು ನಡೆಸಿಕೊಂಡು ಬಂದಿರುವ ಸಿ-ಫೋರ್‌ನ ಸಿಇಒ ಪ್ರೇಮ್ ಪ್ಯಾಲೆಟಿ, ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಾಮಾನ್ಯವಾಗಿ ನಕಲಿ ಸುದ್ದಿಗಳನ್ನು ಹರಡಲು ಬಳಸಲಾಗುತ್ತಿದೆ ಅದರಲ್ಲೂ ರಾಜಕೀಯ ವಿಷಯಗಳಿಗೆ ಹೆಚ್ಚು ದುರ್ಬಳಕೆಯಾಗುತ್ತಿದೆ ಎನ್ನುತ್ತಾರೆ. 

 

ಸುಳ್ಳುಸುದ್ದಿ, ದ್ವೇಷದ ಹಾವಳಿ ಜಾಲತಾಣ ಬಳಕೆ ಶೇ.50ರಷ್ಟು ಇಳಿಕೆ

ಕೆಲವು ಪಕ್ಷಗಳು ಬೂತ್ ಮಟ್ಟದ ನಿರ್ವಹಣೆಯಲ್ಲಿ ಪರಿಣತಿ ಪಡೆದಿವೆ. ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸುವ ನಕಲಿ ಸುದ್ದಿಗಳನ್ನು ಹರಡುವ ಮೂಲಕ ಪಕ್ಷಗಳು ಭಾರತದ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಬಳಸಿಕೊಳ್ಳುತ್ತವೆ. ಸುಳ್ಳು ಸುದ್ದಿಗಳನ್ನು ಎದುರಿಸಲು, ವಿಶೇಷವಾಗಿ ರಾಜಕೀಯ ವಿಷಯದಲ್ಲಿ ಜನರನ್ನು ತಪ್ಪು ದಾರಿಗೆಳೆಯುವಂತಹ ಸುದ್ದಿಗಳನ್ನು ಮಟ್ಟಹಾಕಲು ಭಾರತೀಯ ಕಾನೂನು ಚೌಕಟ್ಟು ಸಾಕಷ್ಟು ದೃಢವಾಗಿಲ್ಲ ಎಂದು ಹೇಳುತ್ತಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ನಕಲಿ ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವುದರ ಅಪಾಯವು ಕಳೆದ ಹತ್ತು ವರ್ಷಗಳಿಂದ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಸುಪ್ರೀಂ ಕೋರ್ಟ್ ಮತ್ತು ಇತರ ಸಂಸ್ಥೆಗಳು ಸಹ ಈ ಅಪಾಯವನ್ನು ಸೂಚಿಸಿವೆ. ಕರ್ನಾಟಕ ಸರ್ಕಾರವು ಈ ಸಮಸ್ಯೆ ಬಗ್ಗೆ ಗಂಭೀರವಾಗಿ ಚಿಂತಿಸಿದೆ. ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿಯ ಮೂಲಕ ಇದನ್ನು ನಿಭಾಯಿಸಲು ಸತ್ಯ ತಪಾಸಣೆ ಮತ್ತು ವಿಶ್ಲೇಷಣಾ ತಂಡಗಳನ್ನು ನೇಮಿಸಿದೆ. ಈ ಘಟಕಕ್ಕೆ ಐಪಿಎಸ್ ಅಧಿಕಾರಿ ಮತ್ತು ಕಾನೂನು ತಂಡವನ್ನು ನೇಮಿಸಲಾಗಿದ್ದು, ಇನ್ನು ಹದಿನೈದು ದಿನಗಳಲ್ಲಿ ಕಾರ್ಯಾರಂಭವಾಗಲಿದೆ ಎಂದು ತಿಳಿಸಿದ್ದಾರೆ. 

ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಮತ್ತು ಕರ್ನಾಟಕದ ಮಾಜಿ ಡಿಜಿ ಮತ್ತು ಐಜಿಪಿ ಅಜಯ್ ಕುಮಾರ್ ಸಿಂಗ್, ಸುಳ್ಳು ಪ್ರಚಾರ ಮತ್ತು ತಪ್ಪು ಮಾಹಿತಿಗಳು ಬಹಳ ಬೇಗನೆ ಹರಡುತ್ತವೆ. ಇದಕ್ಕೆ ಸುಶಿಕ್ಷಿತರೇ ಹೆಚ್ಚು ಬಲಿಯಾಗುತ್ತಿರುವುದು ಖೇದಕರ ಸಂಗತಿ ಎಂದರು. 

ಕೆಲವೊಮ್ಮೆ, ಜನರು ತಮ್ಮ ಜೀವನದ ಅನುಭವಗಳನ್ನು ಮತ್ತು ಅವರ ಎಲ್ಲಾ ಜ್ಞಾನ ಮತ್ತು ಮಾಹಿತಿಯನ್ನು ಬದಿಗಿಟ್ಟು ಸುಳ್ಳು ವಿಷಯಗಳನ್ನು ನಂಬುತ್ತಾರೆ. ಜನರ ಮನಸ್ಸನ್ನು ಎಷ್ಟು ಬೇಗನೆ ಮರುಳು ಮಾಡಲಾಗುತ್ತಿದೆ ಎಂದರೆ ಅದು ಸಮಾಜಪರ ಚಿಂತನೆ, ಸಮಾನತೆಯ ಆಧುನಿಕ ಸಮಾಜ ಮತ್ತು ಇಡೀ ರಾಷ್ಟ್ರಕ್ಕೆ ಅಪಾಯಕಾರಿ. ಸೋಮಾರಿಗಳ ದೊಡ್ಡ ಸಮೂಹವನ್ನು ರಚಿಸುವುದೇ ತಪ್ಪು ಮಾಹಿತಿ ಹರಡುವುದರ ಗುರಿಯಾಗಿದೆ. ಇದನ್ನು ವಿರೋಧಿಸಿ ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕು ಎನ್ನುತ್ತಾರೆ. 

 

ಕೇವಲ 2 ದಿನದ ರಜೆಗಾಗಿ ಇಂಥಾ ಕಿತಾಪತಿನಾ? ಟ್ರೈನಿ ಪಿಎಸ್‌ಐ ಅಮಾನತು

ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಇದನ್ನು ಒಂದು ಪ್ರಮುಖ ಪಕ್ಷ -- ಎಲ್ಲರಿಗೂ ಗೊತ್ತಿರುವುದೇ, ಇದನ್ನು ಕೈಗೋರಿಕೋದ್ಯಮ ರೀತಿಯಲ್ಲಿ ಸಂಘಟಿತ ಪ್ರಮಾಣದಲ್ಲಿ ಮಾಡುತ್ತಿದೆ. ಇದು ವಿಶ್ವದ ಅತಿದೊಡ್ಡ ನಕಲಿ ಸುದ್ದಿ ಕಾರ್ಖಾನೆಯಾಗಿದೆ. ಇದನ್ನು ನಿಯಂತ್ರಿಸುವುದು ಸುಲಭವಲ್ಲ ಏಕೆಂದರೆ ನಿಯಂತ್ರಣ ಅಥವಾ ಪ್ರಾಯೋಜಕತ್ವ ನಕಲಿ ಸುದ್ದಿಗಳ ಬೆದರಿಕೆಗಿಂತ ಕೆಟ್ಟದಾಗಿದೆ. ಕೃತಕ ಬುದ್ಧಿಮತ್ತೆಯ ಬೆಳವಣಿಗೆಯಿಂದ ಡೀಪ್ ಫೇಕ್ ಗಳಂತಹ ವಿಷಯಗಳು ಮತ್ತಷ್ಟು ಅಪಾಯಕಾರಿಯಾಗಿರುತ್ತದೆ ಎಂದರು
 

Follow Us:
Download App:
  • android
  • ios