Asianet Suvarna News Asianet Suvarna News

ಸುಳ್ಳುಸುದ್ದಿ, ದ್ವೇಷದ ಹಾವಳಿ ಜಾಲತಾಣ ಬಳಕೆ ಶೇ.50ರಷ್ಟು ಇಳಿಕೆ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು, ದ್ವೇಷ ಹಬ್ಬಿಸುವ ಬಳಕೆದಾರರು ಮತ್ತು ಬಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ 2025ರ ವೇಳೆಗೆ ಸಾಮಾಜಿಕ ಜಾಲತಾಣಗಳ ಬಳಕೆ ಶೇ.50ರಷ್ಟು ಕುಸಿಯಬಹುದು ಎಂದು ಸಮೀಕ್ಷೆಯೊಂದು ತಿಳಿಸಿದೆ.

The use of social media may decline by 50 percent by 2025 due to the increasing number of fake news, hateful users and bots survey akb
Author
First Published Dec 25, 2023, 7:48 AM IST

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು, ದ್ವೇಷ ಹಬ್ಬಿಸುವ ಬಳಕೆದಾರರು ಮತ್ತು ಬಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ 2025ರ ವೇಳೆಗೆ ಸಾಮಾಜಿಕ ಜಾಲತಾಣಗಳ ಬಳಕೆ ಶೇ.50ರಷ್ಟು ಕುಸಿಯಬಹುದು ಎಂದು ಸಮೀಕ್ಷೆಯೊಂದು ತಿಳಿಸಿದೆ. ಗಾರ್ಟನರ್‌ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಕಳೆದ 5 ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಜಾಲತಾಣಗಳು ಸಾಕಷ್ಟು ಬದಲಾವಣೆ ಕಂಡಿವೆ. ಹೀಗಾಗಿ ಶೇ.53ರಷ್ಟು ಜನರು 2025ರ ಹೊತ್ತಿಗೆ ಜಾಲತಾಣವನ್ನು ಸಂಪೂರ್ಣವಾಗಿ ತ್ಯಜಿಸಬಹುದು ಅಥವಾ ತಮ್ಮ ವ್ಯವಹಾರವನ್ನು ಮಿತಗೊಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಕೃತಕ ಬುದ್ದಿಮತ್ತೆಯ ಬಳಕೆ ಹೆಚ್ಚಾಗಿದ್ದು, ಇದು ಬಳಕೆದಾರರ ಅನುಭವಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು 10ರಲ್ಲಿ 7ಕ್ಕಿಂತ ಹೆಚ್ಚು ಗ್ರಾಹಕರು ಒಪ್ಪಿದ್ದಾರೆ. ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಹೂಡಿಕೆ ಮಾಡಲು ಸಾಮಾಜಿಕ ಜಾಲತಾಣಗಳು ಪ್ರಮುಖವಾಗಿದೆ. ಆದರೆ ಬಳಕೆದಾರರು ಕಡಿಮೆಯಾಗುವುದು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. 5 ವರ್ಷಗಳ ಹಿಂದಕ್ಕೆ ಹೋಲಿಸಿದರೆ ತಮ್ಮ ಬದುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ತೆರೆದಿಡುತ್ತಿರುವವರ ಪ್ರಮಾಣ ಕುಸಿಯುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಮಂಗಳೂರು: ಹಣ ದ್ವಿಗುಣಗೊಳಿಸುವ ಆ್ಯಪ್‌ನಿಂದ 21 ಲಕ್ಷ ರೂ. ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು!

ಶಾರುಖ್‌ರ ಡಂಕಿ ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನ

ನವದೆಹಲಿ: ಶಾರುಖ್‌ ಖಾನ್‌ ನಟನೆಯ ಡಂಕಿ ಚಿತ್ರ ಬಿಡುಗಡೆಯಾಗಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ, ಈ ಚಿತ್ರವನ್ನು ಭಾನುವಾರ ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಪ್ರದರ್ಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಹಲವು ಅಧಿಕಾರಿಗಳು ವೀಕ್ಷಿಸಿದರು. ಡಂಕಿ ಅಕ್ರಮ ವಲಸೆ ಹಾಗೂ ದೇಶದ ಬಗೆಗಿನ ಪ್ರೀತಿಯನ್ನು ಹೊಂದಿರುವ ವಿಶೇಷ ಕಥಾ ಹಂದರ ಹೊಂದಿರುವ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಶಾರುಖ್‌ ಖಾನ್‌ರ ಜೊತೆಗೆ ತಾಪ್ಸಿ ಪನ್ನೂ, ವಿಕ್ಕಿ ಕೌಶಲ್, ಬೊಮ್ಮನ್‌ ಇರಾನಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯಾದ 3 ದಿನದಲ್ಲಿ 157 ಕೋಟಿ ರು. ಬಾಚಿದೆ.

ಸೋಷಿಯಲ್ ಮೀಡಿಯಾ ಬಿಡಿ… ಯಾಕೆ ನಿಮ್ಮ ಜೀವನವನ್ನು ಪ್ರೈವೆಟ್ ಆಗಿಡಬೇಕು ತಿಳಿಯಿರಿ!

Follow Us:
Download App:
  • android
  • ios