Asianet Suvarna News Asianet Suvarna News

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 90ಕ್ಕೂ ಹೆಚ್ಚುಕಡೆ ಲೋಕಾ ದಾಳಿ; ನಿದ್ದೆ ಮಂಪರಿನಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಶಾಕ್!

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸುವ ಮೂಲಕ ಚಳಿಬಿಡಿಸಿರುವ ಲೋಕಾಯುಕ್ತ ಅಧಿಕಾರಿಗಳು. ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು.  ಬೆಂಗಳೂರಿನಲ್ಲಿ ಒಟ್ಟು 11 ಕಡೆ ದಾಳಿ:

Lokayukta raids in many districts across the state including Bangalore rav
Author
First Published Oct 30, 2023, 8:00 AM IST

ಬೆಂಗಳೂರು (ಅ.30): ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಬಂದ ಹಿನ್ನೆಲೆ ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸುಮಾರು 17 ಕಡೆ ಭ್ರಷ್ಟ  ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ  ಲೋಕಾಯುಕ್ತ ಪೊಲೀಸರು ದೊಡ್ಡಮಟ್ಟದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸುವ ಮೂಲಕ ಚಳಿಬಿಡಿಸಿರುವ ಲೋಕಾಯುಕ್ತ ಅಧಿಕಾರಿಗಳು.

ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ, ಮಂಡ್ಯ ಸೇರಿದಂತೆ ಸೇರಿದಂತೆ ಹಲವು ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು. ರಾಜ್ಯಾದ್ಯಂತ ಏಕಾಕಾಲಕ್ಕೆ ನಡೆದಿರುವ ಬೃಹತ್ ದಾಳಿ. ಬೃಹತ್ ಕಾರ್ಯಾಚರಣೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳಿಂದ ನಡೆದಿರುವ ದಾಳಿ.

ಬೆಂಗಳೂರಲ್ಲೇ 11 ಕಡೆ ದಾಳಿ:

ಬೆಂಗಳೂರು ಒಂದರಲ್ಲೇ ಒಟ್ಟು 11 ಕಡೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು. ಕೆಆರ್‌ ಪುರದಲ್ಲಿನ ಎಆರ್‌ಒ ಎಆರ್ ಓ ಚಂದ್ರಪ್ಪ ಬಿರಜ್ಜನವರ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು. ಎಆರ್‌ಒಗೆ ಸಂಬಂಧಪಟ್ಟ ಮೂರು ಕಡೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು. ಬಿಬಿಎಂಪಿ ಹೆಗ್ಗನಹಳ್ಳಿ ವಾರ್ಡ್ ನ ಆರ್.ಆರ್.ನಗರ ವಲಯಾಧಿಕಾರಿಯಾಗಿರುವ ಚಂದ್ರಪ್ಪ. ಕೆ.ಆರ್.ಪುರಂ ನಿವಾಸದಲ್ಲಿ ದಾಳಿ ನಡೆಸಿ ಪೊಲೀಸರಿಂದ ಮುಂದುವರಿದ ಶೋಧಕಾರ್ಯ.

ಈ ಹಿಂದೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದ ಎಆರ್ ಓ ಚಂದ್ರಪ್ಪ ಲೋಕಾಯುಕ್ತ ಟ್ರ್ಯಾಪ್ ಗೆ ಒಳಗಾಗಿದ್ದ. ಅದರ ಮುಂದುವರಿದ ಭಾಗವಾಗಿ ಲೋಕಾಯುಕ್ತರು ದಾಳಿ ಮಾಡಿ ಶೋಧಕಾರ್ಯ ನಡೆಸಿರುವ ಅಧಿಕಾರಿಗಳು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಚಂದ್ರಪ್ಪ. ಕೆ.ಆರ್.ಪುರಂನಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದು ಇದರಲ್ಲಿ ನಾಲ್ಕು ಮನೆ ಬಾಡಿಗೆ ಕೊಟ್ಟಿರುವ ಚಂದ್ರಪ್ಪ. 2 ಮನೆ 5 ಸಾವಿರಕ್ಕೆ ಬಾಡಿಗೆ ,ಇನ್ನು ಎರಡು ಮನೆ 8 ಸಾವಿರಕ್ಕೆ ಬಾಡಿಗೆ ನೀಡಿದ್ದ ಚಂದ್ರಪ್ಪ. ದಾಖಲೆ ಪತ್ರಗಳಿಗಾಗಿ ಬಾಡಿಗೆ ಕೊಟ್ಟಿರೋ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ಮುಂದುವರಿಸಿರೋ ಲೋಕಾಯುಕ್ತ ಪೊಲೀಸರು.

ಚಿಕ್ಕಮಗಳೂರು: ಆರ್‌ಟಿಒ ಅಟೆಂಡರ್ ಲೋಕಾಯುಕ್ತ ಬಲೆಗೆ 

ಇತ್ತ ಕೈಗಾರಿಕೆ ಮತ್ತು ಸುರಕ್ಷತಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಮನೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ. ಬೆಂಗಳೂರು ಹಾಗೂ ಕೊಳ್ಳೆಗಾಲ ಸೇರಿದಂತೆ ಶ್ರೀನಿವಾಸಗೆ ಸಂಬಂಧಿಸಿದ ಒಟ್ಟು ಮೂರು ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು. ಬೆಂಗಳೂರಿನ ಉಪಕಾರ್ ಲೇಔಟ್ ,ಆಂಧ್ರಹಳ್ಳಿ ,ಕೊಳ್ಳೆಗಾಲ ಮನೆಯಲ್ಲಿ ಶೋಧ. ಸದ್ಯ ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ್/

ಚಿತ್ರದುರ್ಗದ ಇಬ್ಬರು ಭ್ರಷ್ಟರಿಗೆ ಶಾಕ್:

ಚಿತ್ರದುರ್ಗದಲ್ಲಿ ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು. ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ನಡೆದಿರುವ ದಾಳಿ. ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿರುವ ಲೋಕಾಯುಕ್ತ ಪೊಲೀಸರು.

ಹಿರಿಯೂರು ಪಟ್ಟಣದ ಚಂದ್ರಾ ಲೇಔಟ್ ನಲ್ಲಿರುವ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಮನೆ. ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ.

ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಆಗಿರುವ ಕೃಷ್ಣಮೂರ್ತಿ. ಹಿರಿಯೂರು ಪಟ್ಟಣದ ಕುವೆಂಪು ನಗರದದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಶೋಧಿಸುತ್ತಿರುವ ಲೋಕಾಯುಕ್ತ ಪೊಲೀಸರು.

ಎಸಿಎಫ್ ನಾಗೇಂದ್ರ ನಾಯ್ಕ್ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಸುಮಾರು 400 ಗ್ರಾಂ ಚಿನ್ನ, ಬೆಳ್ಳಿ ಆಭರಣಗಳು, ಒಂದೂವರೆ ಲಕ್ಷ ರೂ. ನಗದು ಹಣ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು. ಮನೆಯಲ್ಲಿ ಪರಿಶೀಲನೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು.

ಬೆಳ್ಳಂಬೆಳಗ್ಗೆ ಬೆವೆತುಹೋದ ಭ್ರಷ್ಟರು:

ಬೆಳಗಾವಿ ಜಿಲ್ಲೆಯ ಇಬ್ಬರು ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಿದ್ದೆ ಮಂಪರಿನಲ್ಲಿದ್ದ ಇಬ್ಬರು ಲೋಕಾಯುಕ್ತ ಪೊಲೀಸರನ್ನು ಕಂಡು ಶಾಕ್ ಆಗಿದ್ದಾರೆ. 

ಬೆಳಗಾವಿಯ ಪಂಚಾಯತ್ ರಾಜ ಇಲಾಖೆ ಎಇಇ ಎಂ.ಎಸ.ಬಿರಾದಾರ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಡಿಎಸ್ಪಿ ಜೆ.ರಘು ತಂಡದಿಂದ ನಡೆಸಿರುವ ದಾಳಿ. ವಿಶ್ವೇಶ್ವರಯ್ಯ ನಗರದ ಶ್ರದ್ಧಾ ಅಪಾರ್ಟಮೆಂಟ್‌ನಲ್ಲಿ ಇರೋ  ನಿವಾಸ ಬೆಳಗಾವಿ ನಿವಾಸ, ಕಿತ್ತೂರು, ಖಾನಾಪುರದಲ್ಲಿ ಇರೋ ನಿವಾಸದ ಮೇಲೂ ಏಕಕಾಲಕ್ಕೆ ದಾಳಿ ನಡೆಸಿರುವ ಪೊಲೀಸರು. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ನಡೆದಿರುವ ದಾಳಿ. ಒಟ್ಟೂ ಮೂರು ತಂಡಗಳಾಗಿ ನಡೆಸಿರುವ ದಾಳಿ. ಅತ್ತ ಕಲಬುರಗಿ ಜಿಲ್ಲೆಯ ಟೌನ್ ಪ್ಲ್ಯಾನರ್ ಅಪ್ಪಾಸಾಹೇಬ್ ಕಾಂಬಳೆ ಮನೆ ಮೇಲೂ ಕಲಬುರಗಿ ಲೋಕಾಯುಕ್ತ ಅಧಿಕಾರಿಗಳಿಂದ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು. ರಾಮತೀರ್ಥ ನಗರದ ನಿವಾಸ, ಆಟೋ ನಗರದಲ್ಲಿ ಇರೋ ಕಾರ್ಖಾನೆ ಮೇಲೆ ದಾಳಿ. ಏಕಾಏಕಿ ನಡೆದಿರುವ ದಾಳಿ ಇಬ್ಬರು ಭ್ರಷ್ಟ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. 

ಹಾಸನದ ಜೂನಿಯರ್ ಇಂಜಿನಿಯರ್ ನಿವಾಸದ ಮೇಲೆ ದಾಳಿ:

ಹಾಸನದ ಕೆಪಿಟಿಸಿಎಲ್ ಜ್ಯೂನಿಯರ್ ಇಂಜಿನಿಯರ್ ಆಗಿರುವ ನಾರಾಯಣ್ ಮನೆ ಮೇಲೂ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು. ಬೊಮ್ಮನಾಯಕನಹಳ್ಳಿಯಲ್ಲಿರುವ ನಿವಾಸ ಹಾಗೂ ಗೊರೂರಿನ ಕಛೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿರುವ ಲೋಕಾಯುಕ್ತ ಪೊಲೀಸರು.

ಕಲಬುರಗಿಯಲ್ಲಿ ಎರಡು ಕಡೆ ಲೋಕಾಯುಕ್ತ ದಾಳಿ:

ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಮನೆ ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ. ಕಲಬುರಗಿ ಮಾಕಾ ಲೇಔಟ್‌ನಲ್ಲಿರುವ ನಿವಾಸ. ಇತ್ತ ದೇವದುರ್ಗದ KBJNL ಇಇ ತಿಪ್ಪಣ್ಣ ಅನ್ನದಾನಿ ಮನೆ ಮೇಲೂ ದಾಳಿ. ಕಲಬುರಗಿಯ ಭಾಗ್ಯವಂತಿ ನಗರದದಲ್ಲಿರುವ ತಿಪ್ಪಣ್ಣ ನಿವಾಸ.

ಲೋಕಾಯುಕ್ತ ಎಸ್ಪಿ ಎಸ್.ಎಸ್.ಕರ್ನೂಲ್ ನೇತೃತ್ವದಲ್ಲಿ ನಡೆದಿರುವ ದಾಳಿ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆಯ ಆರೋಪ ಹಿನ್ನಲೆ ಅಧಿಕಾರಿಗಳ ಮನೆ ತಲಾಶಗಿಳಿದ ಲೋಕಾಯುಕ್ತ ಅಧಿಕಾರಿಗಳು.

KBJNL ಇಇ ತಿಪ್ಪಣ್ಣ ಮನೆಯಲ್ಲಿ 20 ತೊಲೆ ಬಂಗಾರ ಪತ್ತೆ!

 ತಿಪ್ಪಣ್ಣ ಅನ್ನದಾನಿಗೆ ಸಂಬಂಧಿಸಿದ ಮೂರು ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು. ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮದಲ್ಲೂ ದಾಳಿ. ಕೊಲ್ಲೂರಿನಲ್ಲಿ  ಖಾಸಗಿ ಕಾಂಪ್ಲೆಂಕ್ಸ್ ಹೊಂದಿರುವ ತಿಪ್ಪಣ್ಣ ಅನ್ನದಾನಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಿ ಗುಡಿಯ ಕಚೇರಿ ಮೇಲೂ  ದಾಳಿ ದಾಖಲೆ ವಶಕ್ಕೆ ಪಡೆದಿರುವ ಅಧಿಕಾರಿಗಳು.

ಕೆಬಿಜೆಎನ್ಎಲ್ ಇಇ ತಿಪ್ಪಣ್ಣ ಅನ್ನದಾನಿ ನಿವಾಸ ಕಲಬುರಗಿಯ ಭಾಗ್ಯವಂತಿ ನಗರದಲ್ಲಿರುವ ನಿವಾಸದ ಮನೆ ಶೋಧಕಾರ್ಯ ವೇಳೆ ಸುಮಾರು 20 ತೊಲೆ ಬಂಗಾರ ಪತ್ತೆಯಾಗಿದೆ. ಬೆಡ್‌ ರೂಂ ಸೇರಿದಂತೆ ಹಲವೆಡೆ ಎರಡು ಲಕ್ಷಕ್ಕೂ ನಗದು ಕ್ಯಾಶ್ ಪತ್ತೆ.  ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿರುವ ಪೊಲೀಸರು.

ಕಲಬುರಗಿ ಟೌನ್ ಪ್ಲಾನರ್ ಲೋಕಬಲೆಗೆ:

ಕಲಬುರಗಿ ಜಿಲ್ಲೆಯ ಟೌನ್ ಪ್ಲ್ಯಾನರ್ ಅಧಿಕಾರಿ ಅಪ್ಪಾಸಾಹೇಬ್ ಕಾಂಬಳೆ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ. ಇಂದು ಬೆಳಗ್ಗೆ ರಾಮತೀರ್ಥ ನಗರದ ನಿವಾಸ, ಆಟೋ ನಗರದಲ್ಲಿರುವ ಕಾರ್ಖಾನೆ ಮೇಲೆ ದಾಳಿ. ಈ ವೇಳೆ 6 ಲಕ್ಷರೂ ನಗದು,, ಆಸ್ತಿ ಪತ್ರ, ಚಿನ್ನಾಭರಣ ಪತ್ತೆಯಾಗಿದೆ. ಬೆಳಗಾವಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ನಿರಂಜನ್ ಪಾಟೀಲ್ ನೇತೃತ್ವದಲ್ಲಿ ನಡೆದಿರುವ ದಾಳಿ ಸದ್ಯ ದಾಖಲೆ ಶೋಧದಲ್ಲಿ ತೊಡಗಿರುವ ಲೋಕಾಯುಕ್ತ ಪೊಲೀಸರು.

ರಾಯಚೂರು ನಾಲ್ಕು ಕಡೆ ದಾಳಿ

ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ ದಾಳಿ ಇತ್ತ ರಾಯಚೂರಿನಲ್ಲಿ ನಿರ್ಮಿತಿ ಕೇಂದ್ರ, ಕ್ಯಾಷೋಟೆಕ್ ಯೋಜನಾ ನಿರ್ದೇಶಕ ಶರಣಬಸವ ಪಟ್ಟೇದ್ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ರಾಯಚೂರು ಲೋಕಾಯುಕ್ತ ಎಸ್ಪಿ ಡಾ. ರಾಮ್. ಎಲ್‌. ಅರಸಿದ್ದಿ ನೇತೃತ್ವದಲ್ಲಿ ನಡೆದಿರುವ ದಾಳಿ. ನಗರದ ಗಂಗಾಪರಮೇಶ್ವರಿ ಕಾಲೋನಿಯಲ್ಲಿರುವ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಿರುವ ಅಧಿಕಾರಿಗಳು. ಮನೆ, ಕಚೇರಿ, ಸಂಬಂಧಿಕರ ಮನೆ ಏಕಕಾಲಕ್ಕೆ ನಾಲ್ಕು ಕಡೆ ದಾಳಿ ನಡೆಸಿರುವ ಅಧಿಕಾರಿಗಳು. ಲಿಂಗಸುಗೂರಿನಲ್ಲಿನ ಜಮೀನು ಸೇರಿ ಆಸ್ತಿಗಳ ಪರೀಕ್ಷೆಗೆ ಹೊರಟ ಒಂದು ತಂಡ. ರಾಯಚೂರು ನಗರದ ಮನೆ, ಶಕ್ತಿನಗರದ ಕ್ಯಾಷೋಟೆಕ್ ಕಚೇರಿ, ಶಕ್ತಿ ನಗರದ ಮನೆ ಹಾಗೂ ಲಿಂಗಸೂಗೂರಿನ ಜಮೀನುಗಳ ತಪಾಸಣೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು.

ಬೀಗ ತೆಗೆಯದ ಭ್ರಷ್ಟ ಅಧಿಕಾರಿ ಮನೆ ಸೀಜ್‌, ಪುತ್ರನ ಕೈಯಲ್ಲಿ ಕೀ ಕೊಟ್ಟು ಕಳುಹಿಸಿದ ಬಳಿಕ ಲೋಕಾಯುಕ್ತ ಶೋಧ

ಯಾವ ಯಾವ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ?

1) ತಿಪ್ಪಣ್ಣಗೌಡ ಸ/ಓ ಸೋಮಣ್ಣಗೌಡ ಅನ್ನದಾನಿ ಕಾರ್ಯನಿರ್ವಾಹಕ ಅಭಿಯಂತರರು,
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ನಾರಾಯಣಪುರ ಬಲದಂಡೆ ಕಾಲುವೆ ಡಿವಿ-6, ಚಿಕ್ಕಹೊನ್ನಿ ಕ್ಯಾಂಪ್, ದೇವದುರ್ಗ.

02) ಬಸವರಾಜ ಸ/ಓ ಶ್ರೀಶೈಲ ಡಾಂಗೆ ವಲಯ ಅರಣ್ಯಾಧಿಕಾರಿ, ಬೀದರ್

03) ಮಹಾಂತೇಶ ಸ/ಓ ಸದಾನಂದ ನ್ಯಾಮತಿ ವಲಯ ಅರಣ್ಯಾಧಿಕಾರಿ, ಹಾವೇರಿ ಉಪ ವಿಭಾಗ, ಹಾವೇರಿ

04) ಪರಮೇಶಪ್ಪ ಸ/ಓ ಹನುಮಂತಪ್ಪ ಪೆಲ್ನಾವರ ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ವಿಭಾಗ, ಕೃಷಿ ಘಟಕ, ಹಾವೇರಿ

05) ಎಂ.ಪಿ. ನಾಗೇಂದ್ರ ನಾಯ್ಕ್ ಸ/ಓ ಪಾಪನಾಯಕ್, ಎಸಿಎಫ್, ಸಾಮಾಜಿಕ ಅರಣ್ಯ ಕಛೇರಿ, ಚಿತ್ರದುರ್ಗ

06) ಬಾಲರಾಜು N.P S/o ಪುಟ್ಟಸ್ವಾಮಿ ಮುಖ್ಯ ಇಂಜಿನಿಯರ್, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು

07) ಕೆ.ಮಂಜುನಾಥ್ ಸ/ಓ ಕೆ.ಬಸಣ್ಣ ಕಂದಾಯ ನಿರೀಕ್ಷಕರು, ಬಳ್ಳಾರಿ

08) ಶರಣಬಸಪ್ಪ ಪಟ್ಟೇಡ್ ನಿರ್ದೇಶಕರು, ಯೋಜನೆ, ಕ್ಯಾಶ್ಯೂಟೆಕ್ ನಿರ್ಮಿತಿ ಕೇಂದ್ರ, ಶಕ್ತಿ ನಗರ, ರಾಯಚೂರು

09) ಎಂ.ನಾಗೇಂದ್ರಪ್ಪ ಸ/ಓ ಮಾರಯ್ಯ, ಸಹಾಯಕ ಇಂಜಿನಿಯರ್, ಪಂಚಾಯತ್ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿರಾ, ತುಮಕೂರು

10) ವಿ.ಕೃಷ್ಣಮೂರ್ತಿ ಸ/ಓ ದಿವಂಗತ ವೆಂಕಟಪ್ಪ ಸಹಾಯಕ ನಿರ್ದೇಶಕ, ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ

11) ಅಪ್ಪಾಸಾಹೇಬ ಸಿದ್ಲಿಂಗ್ ಕಾಂಬಳೆ ಜಂಟಿ ನಿರ್ದೇಶಕರು, ನಗರ ಯೋಜನೆ, ಗುಲ್ಬರ್ಗ

12) ಚಂದ್ರಪ್ಪ ಕೆ.ವಿ ARO, ಹೆಗ್ಗನಹಳ್ಳಿ, BBMP, ಬೆಂಗಳೂರು

13 ಹೆಚ್.ರಾಜೇಶ್ ಸ/ಓ ಹಮ್ಮಣ್ಣ ನಾಯಕ್, ಬೇಲೇಕೇರಿ. ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ. ಉಡುಪಿ

14)ನಾರಾಯಣ ಹೆಚ್ ಇ ಎಸ್/ಓ ಈರೇಗೌಡ ಜೂನಿಯರ್ ಇಂಜಿನಿಯರ್, ಕೆಪಿಟಿಸಿಎಲ್, ಗೊರೂರು, ಹಾಸನ

15)ಮಹಾದೇವ S/oಸಣ್ಣಪ್ಪ ಬೀರದಾರ ಪಾಟೀಲ್. ಎಇಇ, ಪಂಚಾಯತ್ರಾಜ್ ಉಪವಿಭಾಗ, ಬೆಳಗಾವಿ

16) ಶಶಿಕುಮಾರ್ ಟಿ ಎಂ ಎಸ್/ಒ ಮಾದಯ್ಯ ಟಿ ಸಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಟೌನ್ ಪ್ಲಾನಿಂಗ್, ಪ್ರಸ್ತುತ ಕೆಐಎಡಿಬಿ ಬೆಂಗಳೂರು,

17)ಶ್ರೀನಿವಾಸ್ ಎಸ್.ಆರ್ ಎಸ್/ಓ ರಾಮಣ್ಣ ಡಿ. ಬಾಯ್ಲರ್ ಫಾರ್ ಉಪನಿರ್ದೇಶಕರು, ದಾವಣಗೆರೆ.

Follow Us:
Download App:
  • android
  • ios