ಚಿಕ್ಕಮಗಳೂರು: ಆರ್‌ಟಿಒ ಅಟೆಂಡರ್ ಲೋಕಾಯುಕ್ತ ಬಲೆಗೆ
ಬಾಡಿಗೆ ಬೈಕ್‌ಗಳಿಗೆ ಪರವಾನಗಿ ಕೊಡಿಸಲು 3 ಸಾವಿರ ರುಪಾಯಿ ಲಂಚ ಪಡೆದ ಚಿಕ್ಕಮಗಳೂರಿನ ಆರ್‌ಟಿಒ ಕಚೇರಿಯ ಅಟೆಂಡರ್ ಲತಾ ರು ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು (ಸೆ.5) : ಬಾಡಿಗೆ ಬೈಕ್‌ಗಳಿಗೆ ಪರವಾನಗಿ ಕೊಡಿಸಲು 3 ಸಾವಿರ ರುಪಾಯಿ ಲಂಚ ಪಡೆದ ಚಿಕ್ಕಮಗಳೂರಿನ ಆರ್‌ಟಿಒ ಕಚೇರಿಯ ಅಟೆಂಡರ್ ಲತಾ ರು ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರ್‌ಟಿಒ ಮಧುರಾ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಎಚ್.ಎನ್. ಪ್ರಕಾಶ್ ನಗರದ ಆರ್.ಜಿ. ರಸ್ತೆಯಲ್ಲಿ ರೆಂಟೆಡ್ ಬೈಕ್‌ಗಳನ್ನು ನೀಡುವ ಸಂಸ್ಥೆ ನಡೆಸುತ್ತಿದ್ದಾರೆ. ತಮ್ಮ ಸಂಸ್ಥೆಗೆ ಸೇರಿರುವ 5 ಬೈಕ್‌ಗಳು ರಾಜ್ಯಾದ್ಯಂತ ಸಂಚರಿಸಲು ಪರವಾನಗಿ ಬೇಕಾಗಿದ್ದು, ಈ ಸಂಬಂಧ ಅವರು ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಪ್ರತಿ ಅರ್ಜಿಗೆ 500 ರು.ಗಳಂತೆ 2500 ರುಪಾಯಿ ಶುಲ್ಕ ಪಾವತಿ ಮಾಡಿದ್ದರು.
ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಸುಲಿಗೆ, ನಕಲಿ ಲೋಕಾಯುಕ್ತ ಅರೆಸ್ಟ್
ಆದರೆ, ಆರ್‌ಟಿಒ ಸಹಿ ಮಾಡಿಸಲು ಪ್ರತಿ ಅರ್ಜಿಗೆ 1000 ರು.ನಂತೆ ಒಟ್ಟು 5000 ರುಪಾಯಿಯನ್ನು ಲತಾ ಅವರು ಕೇಳಿದ್ದು, ಈ ಹಣವನ್ನು ಆರ್‌ಟಿಒ ಮಧುರಾ ಅವರಿಗೆ ನೀಡಬೇಕಾಗುತ್ತದೆ ಎಂದು ಹೇಳಿರುವುದು ಮೊಬೈಲ್‌ನಲ್ಲಿ ರೆಕಾಡ್ ಮಾಡಿ ಪ್ರಕಾಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ಹಿಂದೆ 2000 ರುಪಾಯಿ ನೀಡಿದ್ದು, ಇನ್ನುಳಿದ 3000 ರು. ನೀಡುವಾಗ ಲೋಕಾಯುಕ್ತ ಪೊಲೀಸರು ಲತಾ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರ್‌ಟಿಒ ಮಧುರಾ ಭಾಗಿಯಾಗಿರುವುದು ಕಂಡು ಬಂದಿದ್ದರಿಂದ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಲತಾ ಅವರನ್ನು ಬಂಧಿಸಲಾಗಿದ್ದು, ಮಧುರಾ ಅವರನ್ನು ವಿಚಾರಣೆ ಒಳಪಡಿಸಲಾಗಿದೆ.
ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ: ಲಂಚ ಸ್ವೀಕರಿಸುವಾಗಲೇ ಲೋಕಾ ಬಲೆಗೆ ಬಿದ್ದ ಡಿಡಿಪಿಯು ಸಿಬ್ಬಂದಿ