Asianet Suvarna News Asianet Suvarna News

ಬೀಗ ತೆಗೆಯದ ಭ್ರಷ್ಟ ಅಧಿಕಾರಿ ಮನೆ ಸೀಜ್‌, ಪುತ್ರನ ಕೈಯಲ್ಲಿ ಕೀ ಕೊಟ್ಟು ಕಳುಹಿಸಿದ ಬಳಿಕ ಲೋಕಾಯುಕ್ತ ಶೋಧ

ಮನೆಯ ಬೀಗ ತೆಗೆಯದೆ ಲೋಕಾಯುಕ್ತ ಅಧಿಕಾರಿಗಳನ್ನು ಆಟವಾಡಿಸಿದ ನಿವಾರಣಾಧಿಕಾರಿ ಡಾ.ಭೂವನಹಳ್ಳಿ ನಾಗರಾಜ್‌, ಪುತ್ರನ ಕೈಯಲ್ಲಿ ಮನೆಯ ಬೀಗ ಕೊಟ್ಟು ಕಳುಹಿಸಿದ್ದು ಈಗ ದಾಳಿ  ಮುಂದುವರಿಸಿದ್ದಾರೆ.

Lokayukta raids  Tumakuru Bhuvanahalli Nagaraj residency gow
Author
First Published Aug 18, 2023, 12:10 PM IST

ತುಮಕೂರು (ಆ.18): ಮನೆಯ ಬೀಗ ತೆಗೆಯದೆ ಲೋಕಾಯುಕ್ತ ಅಧಿಕಾರಿಗಳನ್ನು ಆಟವಾಡಿಸಿದ ಜಿಲ್ಲಾ ಪಂಚಾಯತ್‌ನ ಸಾರ್ವಜನಿಕ ಕುಂದುಕೊರತೆ ನಿವಾರಣಾಧಿಕಾರಿ ಡಾ.ಭೂವನಹಳ್ಳಿ ನಾಗರಾಜ್‌ ಅವರ ಆದರ್ಶ ನಗರದ ಮನೆಯನ್ನು ಲೋಕಾಯುಕ್ತ ಅಧಿಕಾರಿಗಳು ಸೀಜ್‌ ಮಾಡಿದ್ದರು. ಇದೀಗ ಇಂದು ಬೂವನಹಳ್ಳಿ ನಾಗರಾಜು ಸಂಪರ್ಕಕ್ಕೆ ಸಿಕ್ಕ ಹಿನ್ನೆಲೆ ಪುತ್ರನ ಕೈಯಲ್ಲಿ ಮನೆಯ ಬೀಗ ಕೊಟ್ಟು ಕಳುಹಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತಹಸೀಲ್ದಾರ್‌ ಅಜಿತ್ ರೈಗೆ ಬೇಲ್‌!

ಹೀಗಾಗಿ ಪುತ್ರನ ಎದುರು ಸೀಜ್ ಮಾಡಿದ್ದ ಮನೆಯ ಬೀಗ ತೆಗೆದು ಲೋಕಾಯುಕ್ತ ಅಧಿಕಾರಿಗಳ ತಂಡ  ದಾಳಿ  ಮುಂದುವರಿಸಿದೆ. ತುಮಕೂರಿನ ಆದರ್ಶನಗರದಲ್ಲಿರುವ ಭವ್ಯ ಬಂಗಲೆ ಹೊಂದಿರುವ ಬೂವನಹಳ್ಳಿ ನಾಗರಾಜು ಸದ್ಯ ತುಮಕೂರು ಜಿಲ್ಲಾ ಪಂಚಾಯತ್ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯಾಗಿದ್ದಾರೆ. ಲೋಕಾಯುಕ್ತ ಎಸ್ ಪಿ ಅಶೋಕ್ ನೇತೃತ್ವದಲ್ಲಿ ದಾಳಿ ಮುಂದುವರಿದಿದೆ. ಓರ್ವ ಎಸ್ ಪಿ, ಓರ್ವ ಡಿವೈಎಸ್ ಪಿ, ಹಾಗೂ ಮೂವರು ಇನ್ ಸ್ಪೆಕ್ಟರ್ ಗಳ ನೇತೃತ್ವದಲ್ಲಿ ದಾಳಿ ನಡೆದಿದೆ.

 

ಕೊಡಗು ಅಪರ ಜಿಲ್ಲಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: 3.53 ಕೋಟಿ ಮೌಲ್ಯದ ನಗದು, ಆಸ್ತಿ ಪತ್ತೆ!

ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಡಾ.ಭೂವನಹಳ್ಳಿ ನಾಗರಾಜ್‌ ಅವರ ಮನೆಯ ತಪಾಸಣೆ ಕೈಗೊಳ್ಳಲು ಗುರುವಾರ ಬೆಳಗ್ಗೆ ಬೆಂಗಳೂರಿನ ಲೋಕಾಯುಕ್ತ ಡಿವೈಎಸ್ಪಿ ಪ್ರದೀಪ್‌ ಕುಮಾರ್‌ ನೇತೃತ್ವದ ತಂಡ ಆಗಮಿಸಿತ್ತು. ಆದರೆ, ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಎಲ್ಲಿಗೋ ಹೋಗಿದ್ದು, ಅವರ ಆಗಮನಕ್ಕಾಗಿ ಲೋಕಾ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದ ಮನೆ ಮುಂದೆ ಕಾದು ಕುಳಿತಿದ್ದರು. ಈ ಮಧ್ಯೆ, ಮೊಬೈಲ್‌ ಮೂಲಕ ಅವರ ಮನೆಯವರನ್ನು ಸಂಪರ್ಕಿಸುವ ಯತ್ನ ಮಾಡಿದರಾದರೂ ಸಂಪರ್ಕಕ್ಕೆ ಅವರಾರ‍ಯರು ಸಿಗಲಿಲ್ಲ. ಸಂಜೆಯಾದರೂ ನಾಗರಾಜು ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮನೆಯನ್ನು ಸೀಜ್‌ ಮಾಡಲಾಯಿತು.

Follow Us:
Download App:
  • android
  • ios