Asianet Suvarna News Asianet Suvarna News

ಬೆಳ್ಳಂಬೆಳಗ್ಗೆ ಲೋಕಾಯುಕ್ತರ ಶಾಕ್: ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ 

Lokayukta Raid on Government Officials Houses in Karnataka grg
Author
First Published May 31, 2023, 8:39 AM IST

ಹಾವೇರಿ/ತುಮಕೂರು/ಶಿವಮೊಗ್ಗ(ಮೇ.31): ಇಂದು(ಬುಧವಾರ) ಬೆಳ್ಳಂಬೆಳಗ್ಗೆ ಹಾವೇರಿ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. 

ವಾಗೀಶ ಶೆಟ್ಟರ್ ಎಂಬ ಇಂಜಿನಿಯರ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ರಾಣೇಬೆನ್ನೂರು ನಗರದ ವಾಗೀಶ ಶೆಟ್ಟರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. 

ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ದಾವಣಗೆರೆ ಸಬ್ ರಿಜಿಸ್ಟರ್ ದಸ್ತು ಬರಹಗಾರ

ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಇನ್ನು ತುಮಕೂರಿನಲ್ಲೂ ಕೂಡ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಕೆ.ಐ.ಎ.ಡಿ.ಬಿ ಅಧಿಕಾರಿ ನರಸಿಂಹಮೂರ್ತಿ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ನಗರದ ಆರ್.ಟಿ. ನಗರದಲ್ಲಿರುವ ನರಸಿಂಹಮೂರ್ತಿ ಮನೆ ಮೇಲೆ ಲೋಕಾಯುಕ್ತ ಡಿಎಸ್ ಪಿ ಗಳಾದ ಮಂಜುನಾಥ್ ಹಾಗೂ ಹರೀಶ್ ತಂಡದಿಂದ ರೇಡ್ ಮಾಡಲಾಗಿದೆ. ದಾಳಿ ವೇಳೆ ದಾಖಲೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಲೋಕಾಯುಕ್ತ ರೈಡ್

ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಶಿವಮೊಗ್ಗ ಭದ್ರಾವತಿ ಮತ್ತು ಶಿಕಾರಿಪುರದಲ್ಲಿ ಒಟ್ಟು 8 ಕಡೆಗಳಲ್ಲಿ  ಲೋಕಾಯುಕ್ತ ದಾಳಿ ನಡೆದಿದೆ. ಶಿವಮೊಗ್ಗದಲ್ಲಿ ಶರಾವತಿ ನಗರದ ಚರ್ಚ್ ಹತ್ತಿರುವಿರುವ ಅಪ್ಪರ್ ತುಂಗ ಇಲಾಖೆಯ ಇಂಜಿನಿಯರ್  ಪ್ರಶಾಂತ್ ಮನೆ ಮತ್ತು ಭದ್ರಾವತಿಯಲ್ಲಿರುವ ಇವರ ತಂದೆಯ ಮನೆಯ ಮೇಲೆ ಹಾಗೂ ಶಿಕಾರಿಪುರದ ಪಂಚಾಯತ್ ರಾಜ್ ಇಂಜಿಯರ್ ಶಂಕರ್ ನಾಯ್ಕ್ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಭಾರೀ ಅಕ್ರಮ ಸಂಪತ್ತು ಪತ್ತೆ: ಲೋಕಾ ಬಲೆಗೆ ಬಿದ್ದ ಇಬ್ಬರ ಬಳಿ 15 ಸೈಟ್‌, 14 ಫ್ಲಾಟ್‌

ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ವಾಸುದೇವ್ ಹಾಗೂ ಶಿವಮೊಗ್ಗ ಲೋಕ ಡಿವೈಎಸ್ಪಿ ಉಮೇಶ್ ಈಶ್ವರ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪ್ರಶಾಂತ್‌ಗೆ ಸೇರಿದ ಶಿವಮೊಗ್ಗದ ಎರಡು ಮನೆಗಳು ಭದ್ರಾವತಿಯ ಫಾರ್ಮ್ ಹೌಸ್ ಹಾಗೂ ಕಚೇರಿಗಳಲ್ಲಿ ಲೋಕಾಯುಕ್ತರಿಂದ ಪರಿಶೀಲನೆ ನಡೆಸಲಾಗುತ್ತಿದೆ. 

ಅಧಿಕ ಹಣ ಗಳಿಕೆ ಆರೋಪದ ಅಡಿಯಲ್ಲಿ ಈ ದಾಳಿ ನಡೆದಿದೆ. ಪ್ರಶಾಂತ್ ಅವರ ಕಚೇರಿ, ಅಪಾರ್ಟ್ ಮೆಂಟ್ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿರುವ ಪ್ರಶಾಂತ್ ಅವರ ಮನೆ, ಸಂಬಂಧಿಕರು ಫಾರಂ ಹೌಸ್, ತಂದೆಯವರ ಮನೆ ಸೇರಿದಂತೆ ಐದು ಕಡೆ ಮತ್ತು ಶಂಕರ್ ನಾಯ್ಕ್ ಅವರ ಮನೆ,, ಫಾರಂ‌ ಹೌಸ್ ಮತ್ತು ಕಚೇರಿ ಸೇರಿದಂತೆ ಮೂರು ಕಡೆಯಲ್ಲಿ ದಾಳಿ ನಡೆಯುತ್ತಿದೆ.

ಶಿವಮೊಗ್ಗದಲ್ಲಿ ಲೋಕಾ ಬಲೆಗೆ ಬಿದ್ದ ಮತ್ತೊಬ್ಬ ಭ್ರಷ್ಟ

ಶಿವಮೊಗ್ಗದ ಜಿಲ್ಲೆಯ ಶಿಕಾರಿಪುರದಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಪಂಚಾಯತ್ ರಾಜ್ ಜೂನಿಯರ್ ಇಂಜಿನಿಯರ್ ಶಂಕರ ನಾಯ್ಕ ಎಂಬುವರು ಲೋಕಾ ಬಲೆಗೆ ಬಿದ್ದಿದ್ದಾರೆ. ಶಂಕರ ನಾಯ್ಕಗೆ ಸೇರಿದ ಶಿಕಾರಿಪುರದ ನಿವಾಸದ ಮೇಲೆ ಲೋಕ ಅಧಿಕಾರಿಗಳ ರೇಡ್ ಮಾಡಿದ್ದಾರೆ. ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ವಾಸುದೇವ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 

Follow Us:
Download App:
  • android
  • ios