ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ದಾವಣಗೆರೆ ಸಬ್ ರಿಜಿಸ್ಟರ್ ಕಚೇರಿಯ ದಸ್ತು ಬರಹಗಾರ.  ಹರಿಹರದ ಮಂಜುನಾಥ್ ಎಂಬುವವರ ಬಳಿ ಲಂಚದ ಬೇಡಿಕೆ ಇಟ್ಟಿದ್ದ ಪರಮೇಶ್ವರ್.

ದಾವಣಗೆರೆ (ಮೇ.21) : ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ದಾವಣಗೆರೆ ಸಬ್ ರಿಜಿಸ್ಟರ್ ಕಚೇರಿಯ ದಸ್ತು ಬರಹಗಾರ. 

ಹರಿಹರದ ಮಂಜುನಾಥ್ ಎಂಬುವವರ ಬಳಿ ಲಂಚದ ಬೇಡಿಕೆ ಇಟ್ಟಿದ್ದ ಪರಮೇಶ್ವರ್. ಮಂಜುನಾಥ ಎಂಬುವವರು ಮನೆ ಖರೀದಿ ಮಾಡಿದ್ದರು. ಮನೆ ಖರೀದಿ ಮಾಡಿದ ಸೇಲ್ ಡೀಡ್ ನೊಂದಣಿ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಪರಮೇಶ್ವರ ಎಂಬಿ. ಮಂಜುನಾಥ ಎಂಬುವವರಿಂದ 20 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವ ಅಧಿಕಾರಿ.

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ತಿಮಿಂಗಲ: ಗಂಗಾಧರಯ್ಯನ ಇತಿಹಾಸವೇ ಬೆಚ್ಚಿ ಬೀಳಿಸುತ್ತೆ!

ಪರಮೇಶ್ವರ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಂಜುನಾಥ. ಮಂಜುನಾಥರ ದೂರಿನ ಮೇರೆಗೆ ದಾಳಿ ನಡೆಸಿದ್ದ ಲೋಕಾಯುಕ್ತರು. ನಿನ್ನೆ ರಾತ್ರಿಯೇ ಸಬ್‌ ರಿಜಿಸ್ಟರ್ ಕಚೇರಿ ಬಳಿ 13 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ. ಅರೋಪಿಯಿಂದ 40 ಸಾವಿರ ನಗದು ಸೇರಿದಂತೆ ವಿವಿಧ ದಾಖಲೆಗಳ ವಶಪಡಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು.

ಲೋಕಾಯುಕ್ತ ಎಸ್ ಪಿ ಎಂಎಸ್ ಕೌಲಾಪುರೆ, ಇನ್ಸ್ಪೆಕ್ಟರ್ ರಾಷ್ಟ್ರಪತಿ ಎಚ್ ಎಸ್, ಅಂಜನೇಯ ನೇತೃತ್ವದಲ್ಲಿ ದಾಳಿ ನಡೆಸಿದ್ದರು.