Asianet Suvarna News Asianet Suvarna News

ಬಾಗಲಕೋಟೆ: ಒಳಬೇಗುದಿ ಮಧ್ಯೆ ಒಗ್ಗಟ್ಟಿನ ಮಂತ್ರ;ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ

ಲೋಕಸಭಾ ಚುನಾವಣೆಗೆ ಸಿದ್ದತೆ ನಡೆದಿರೋ ಬೆನ್ನಲ್ಲೆ ರಾಜ್ಯದ 28 ಲೋಕಸಭಾ ಮತಕ್ಷೇತ್ರಗಳಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸಭೆ ನಡೆಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದು, ಇವುಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ.

Lok Sabha Elections issue Bagalkot BJP Leaders Meet today rav
Author
First Published Sep 8, 2023, 12:18 PM IST

ವರದಿ:- ಮಲ್ಲಿಕಾರ್ಜುನ ಹೊಸಮನಿ,, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಸೆ.8) :- ಲೋಕಸಭಾ ಚುನಾವಣೆಗೆ ಸಿದ್ದತೆ ನಡೆದಿರೋ ಬೆನ್ನಲ್ಲೆ ರಾಜ್ಯದ 28 ಲೋಕಸಭಾ ಮತಕ್ಷೇತ್ರಗಳಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸಭೆ ನಡೆಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದು, ಇವುಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಪಕ್ಷದ ಆಂತರಿಕ ಭಿನ್ನಮತ, ಒಳಬೇಗುದಿಗೆ ಬ್ರೇಕ್​ ಹಾಕಲು  ಮುಂದಾಗಿದ್ದು, ಶತಾಯಗತಾಯ ಈ ಬಾರಿ ಬಿಜೆಪಿಯನ್ನ ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಅಂದಹಾಗೆ ಪಕ್ಷದ ಸಭೆಗಳಿಗೆ ಹಾಜರಾಗುತ್ತಿರೋ ಬಿಜೆಪಿ ಮುಖಂಡರು, ಜಿಲ್ಲೆಯ ಸಮಸ್ಯೆಗಳ ರಾಜ್ಯ ನಾಯಕರು ಚರ್ಚೆ ನಡೆಸುತ್ತಿದ್ದಾರೆ. 

ಅಯೋಗ್ಯರ ಬಗ್ಗೆ ಹೆಚ್ಚು ಮಾತಾಡಬಾರದು: ನಟ ಪ್ರಕಾಶ್‌ ರಾಜ್‌ ವಿರುದ್ಧ ಹರಿಹಾಯ್ದ ಈಶ್ವರಪ್ಪ

ಹೌದು. ದೇಶಾದ್ಯಂತ ಈಗ ಎಲ್ಲಿ ನೋಡಿದ್ರೂ ಸಾಕು ಲೋಕಸಭಾ ಚುನಾವಣೆ(Loksabha ellection 2024)ಯ ಮಾತು ಕೇಳಿ ಬರುತ್ತಿರೋ ಬೆನ್ನಲ್ಲೆ ಬಿಜೆಪಿ ನಾಯಕರು ರಾಜ್ಯಾದ್ಯಂತ ಸಂಚರಿಸುವ ಮೂಲಕ 28 ಲೋಕಸಭಾ ಮತಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಗೆ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ನೇತೃತ್ವದ ತಂಡ ಆಗಮಿಸಿದೆ.

ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಮತಕ್ಷೇತ್ರಗಳು ಇದ್ದು, ಅದ್ರಲ್ಲಿ ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದ್ದು, ಇನ್ನುಳಿದ 5 ಮತಕ್ಷೇತ್ರಗಳಲ್ಲಿ ಬಹುತೇಕ ಆಂತರಿಕ ಬೇಗುದಿ, ಅಸಮಾಧಾನ, ವೈಯಕ್ತಿಕ ವೈಮಸ್ಸಿನ ಕಾರಣದಿಂದ ಬಿಜೆಪಿ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡ ಕೆ.ಎಸ್​.ಈಶ್ವರಪ್ಪ(KS Eshwarappa) ಅವರ ನೇತೃತ್ವದಲ್ಲಿ ನವನಗರದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಪಕ್ಷದ ನಾಯಕರಲ್ಲಿರೋ ಭಿನ್ನಮತ ಶಮನ ಮಾಡುವ ಕಸರತ್ತುಗಳನ್ನೂ ಸಹ ನಡೆಸಲಾಯಿತು.


 ಸಭೆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ, ನಮ್ಮಲ್ಲಿ ಆಂತರಿಕ ಭಿನ್ನಮತ ಇಲ್ಲವೆಂದು ನಾನು ಹೇಳೋದಿಲ್ಲ, ಮನೆ ಅಂದಮೇಲೆ ವೈಮನಸ್ಸು ಇದ್ದೇ ಇರುತ್ತೆ. ಅದನ್ನ ನಾವೇ ಸರಿಪಡಿಸಿಕೊಳ್ಳುತ್ತೇವೆ, ಮೇಲಾಗಿ ನಮ್ಮ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರಿಗೆ ಲೋಕಸಭೆಯಲ್ಲಿ ಗೆಲುವು ಕಂಡು ತೋರಿಸುತ್ತೇವೆ ಎಂದು ಹೇಳಿದರು. 
                               
ಅಂತರಿಕ ಬೇಗುದಿ ಮಧ್ಯೆ; ಒಗ್ಗಟ್ಟಿನ ಮಂತ್ರ !

ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಿಂದ ಸತತ 4 ಬಾರಿ ಗೆಲುವು ಕಂಡಿರೋ ಸಂಸದ ಪಿ.ಸಿ.ಗದ್ದಿಗೌಡರ ಮತ್ತೊಮ್ಮೆ ಸ್ಪರ್ಧೆ ಮಾಡಬಹುದು ಅನ್ನೋ ಲೆಕ್ಕಾಚಾರ ಒಂದು ಕಡೆಯಾದ್ರೆ, ಮತ್ತೊಂದೆಡೆ ಈ ಬಾರಿ ಸ್ಪರ್ಧೆ ಮಾಡಲು ಬಿಜೆಪಿಯಲ್ಲಿ ಕೆಲವು ನಾಯಕರು ಟಿಕೆಟ್ ಕೇಳಲು ಮುಂದಾಗಿದ್ದಾರೆ. ಈ ನಡುವೆ ವಿಧಾನಸಭಾ ಮತಕ್ಷೇತ್ರದಲ್ಲಿ ಇರುವ ವೈಮನಸ್ಸನ್ನ ಹೋಗಲಾಡಿಸದ ಹೊರತು ಬಿಜೆಪಿಗೆ ಗೆಲವು ಅಷ್ಟು ಸುಲಭದ ಮಾತಲ್ಲ. ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿ ಅವಲೋಕನಾ ಸಭೆಯ ವೇದಿಕೆಯಲ್ಲಿಯೂ ಜಿಲ್ಲೆಯ ನಾಯಕರಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಇದು ರಾಜ್ಯ ನಾಯಕರಿಗೂ ತಲೆನೋವು ತಂದಿದೆ. 

ಆದ್ರೆ ಇದೇ ವೈಮನಸ್ಸು ಮುಂದುವರಿದಲ್ಲಿ ಬಿಜೆಪಿಗೆ ಗೆಲುವು ಸುಲಭವಲ್ಲ. ಇನ್ನು ಕೆಲವರು ಜಿಲ್ಲೆಯ ಬಿಜೆಪಿ ಮುಖಂಡರು ವೈಮನಸ್ಸು ಹೊಂದಿದ್ದರೂ ಸಹ ಪ್ರಧಾನಿ ಮೋದಿ(Narendra modi) ಅವರ ನೇತೃತ್ವದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದ್ದಾರೆ. ಇದೇ ತಂತ್ರ ಮುಂದುವರಿದಲ್ಲಿ ಬಿಜೆಪಿ ಗೆಲುವು ಕಾಣಬಹುದು. ಈ ಹಿನ್ನೆಲೆಯಲ್ಲಿ ಸಂಘಟನಾ ಸಭೆ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತನಗೌಡ ಪಾಟೀಲ ಪ್ರತಿಕ್ರಿಯಿಸಿದ್ದು, ವೈಯಕ್ತಿಕ ಅಸಮಾಧಾನ ಇರೋದು ನಿಜ, ಆದರೆ ಯಾರೂ ಸಹ ಪಕ್ಷಕ್ಕೆ ವಿರೋಧ ಮಾಡುವವರಿಲ್ಲ, ಎಲ್ಲರನ್ನೂ ಒಗ್ಗೂಡಿಸಿ, ಪಕ್ಷ ಸಂಘಟಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಗೆಲ್ಲಿಸುತ್ತೇವೆ ಎಂದರು. 

ಪ್ರಕಾಶ್‌ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನೆ ಎನ್ನುವುದಕ್ಕೆ ಗ್ಯಾರಂಟಿ ಏನಿದೆ? ಕೆ.ಎಸ್‌. ಈಶ್ವರಪ್ಪ ವಾಗ್ದಾಳಿ
 
ಒಟ್ಟಿನಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರ(Bagalkote Loksabha election)ದಲ್ಲಿ ಬಿಜೆಪಿ ಶತಾಯಗತಾಯ ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿದ್ದು, ಪಕ್ಷದ ಆಂತರಿಕ ಬೇಗುದಿ ಶಮನಕ್ಕೆ ಮುಂದಾಗಿದೆ. ಇಷ್ಟಕ್ಕೂ ಮುಂದಿನ ದಿನಗಳಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಯಾವ ರೀತಿ ಪಕ್ಷದ ಒಗ್ಗಟ್ಟಿನಿಂದ ಮುನ್ನಡೆಯುತ್ತಾರೆ ಅಂತ ಕಾದು ನೋಡಬೇಕಿದೆ.

Follow Us:
Download App:
  • android
  • ios