ಈಶ್ವರಪ್ಪಗೆ ಬರೀ 30 ಸಾವಿರ ಮತ; ಭಾರೀ ಸೋಲು, ಠೇವಣಿ ನಷ್ಟ!
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡೆದ್ದು, ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ, ಬಿಜೆಪಿ ಅಭ್ಯರ್ಥಿ ಬಿ. ವೈ.ರಾಘವೇಂದ್ರ ಅವರ ವಿರುದ್ಧ ಸ್ಪರ್ಧಿಸಿ ಆತಂಕ ಮೂಡಿಸಿದ್ದ ಕೆ. ಎಸ್.ಈಶ್ವರಪ್ಪ ಅವರು ಚುನಾವಣೆಯಲ್ಲಿ ನಿರೀಕ್ಷಿತ ಮತ ಪಡೆಯದೆ ಠೇವಣಿ ಕಳೆದುಕೊಳ್ಳುವ ಮೂಲಕ ಹೀನಾಯ ಸೋಲು ಅನುಭವಿಸಿದ್ದಾರೆ.
ಶಿವಮೊಗ್ಗ (ಜೂ.5) : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡೆದ್ದು, ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ, ಬಿಜೆಪಿ ಅಭ್ಯರ್ಥಿ ಬಿ. ವೈ.ರಾಘವೇಂದ್ರ ಅವರ ವಿರುದ್ಧ ಸ್ಪರ್ಧಿಸಿ ಆತಂಕ ಮೂಡಿಸಿದ್ದ ಕೆ. ಎಸ್.ಈಶ್ವರಪ್ಪ ಅವರು ಚುನಾವಣೆಯಲ್ಲಿ ನಿರೀಕ್ಷಿತ ಮತ ಪಡೆಯದೆ ಠೇವಣಿ ಕಳೆದುಕೊಳ್ಳುವ ಮೂಲಕ ಹೀನಾಯ ಸೋಲು ಅನುಭವಿಸಿದ್ದಾರೆ.
ರಾಘವೇಂದ್ರ 778721 ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ, ಈಶ್ವರಪ್ಪ ಪರ ಕೇವಲ 30050 ಮತಗಳು ಚಲಾವಣೆಯಾಗಿವೆ.
ಹಾವೇರಿಯಲ್ಲಿ ತಮ್ಮ ಪುತ್ರ ಕೆ.ಇ. ಕಾಂತೇಶ್‌ಗೆ ಟಿಕೆಟ್ ನೀಡದಿರುವ ಪಕ್ಷದ ನಿಲುವು ಖಂಡಿಸಿ, ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪ ಕುಟುಂಬದ ಕೈಯಿಂದ ಮುಕ್ತಗೊಳಿಸುವ ಪಣ ತೊಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಕಮಾಲ್; ಕಲ್ಯಾಣ ಕರ್ನಾಟಕ
ಈಶ್ವರಪ್ಪ ಸ್ಪರ್ಧಿಸಲು ನಿರ್ಧರಿಸಿದ ಬಳಿಕ ಮಿಂಚಿನ ರೀತಿಯಲ್ಲಿ ಇಡೀ ಕ್ಷೇತ್ರದಾದ್ಯಂತ ಓಡಾಡಿ ಸಭೆಗಳನ್ನು ಆಯೋಜಿಸಿದಾಗ ನಿರೀಕ್ಷೆ ಮೀರಿ ಜನ ಸೇರಿದ್ದರು. ಇವರನ್ನು ಕಣದಿಂದ ಹಿಂದಕ್ಕೆ ಸರಿಸಲು ಪಕ್ಷದ ನಾಯಕರು ಹಲವು ರೀತಿಯಲ್ಲಿ ಯತ್ನ ನಡೆಸಿದ್ದರು. ಇದ್ಯಾವುದಕ್ಕೂ ಜಗ್ಗದೇ ಈಶ್ವರಪ್ಪ ತಾವು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ, ಚುನಾವಣೆಯಲ್ಲಿ ಮತ್ತೇ ನಾನು ಗೆದ್ದು ಬಿಜೆಪಿ ಸೇರುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದರು.
ಮತ್ತೊಮ್ಮೆ ಸೋತ ಗೀತಾ ಶಿವರಾಜ್ ಕುಮಾರ್, ದೊಡ್ಮನೆ ಸೊಸೆಗೆ ಒಲಿಯದ ಎಂಪಿ ಪಟ್ಟ!
ಶಿವಮೊಗ್ಗ, ಶಿಕಾರಿಪುರ, ಸೊರಬ, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆಯುವ ನಿರೀಕ್ಷೆಯನ್ನು ಈಶ್ವರಪ್ಪ ಹೊಂದಿದ್ದರು. ಆದರೆ ಈ ಲೆಕ್ಕಾಚಾರಗಳು ಸಂಪೂರ್ಣವಾಗಿ ತಳೆಕೆಳಗಾಗಿದ್ದು ಅವರಿಗೆ ತೀವ್ರ ಮುಖಭಂಗವಾಗಿದೆ.