ನನ್ನ ಆರಾಧ್ಯ ದೈವ ನಡೆದಾಡುವ ದೇವರು ಸಿದ್ದಗಂಗೆ ಶಿವಕುಮಾರ ಗದ್ದುಗೆ ಆಶೀರ್ವಾದ ಪಡೆದಿದ್ದೇನೆ. ನಿನ್ನೆ ಆದಿಚುಂಚನಗಿರಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೆ, ಇಂದು ಸಿದ್ದಗಂಗಾ ಸ್ವಾಮೀಜಿ ಗದ್ದುಗೆ ದರ್ಶನ ಪಡೆದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ತಿಳಿಸಿದರು.

ತುಮಕೂರು (ಮಾ.15): ನನ್ನ ಆರಾಧ್ಯ ದೈವ ನಡೆದಾಡುವ ದೇವರು ಸಿದ್ದಗಂಗೆ ಶಿವಕುಮಾರ ಗದ್ದುಗೆ ಆಶೀರ್ವಾದ ಪಡೆದಿದ್ದೇನೆ. ನಿನ್ನೆ ಆದಿಚುಂಚನಗಿರಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೆ, ಇಂದು ಸಿದ್ದಗಂಗಾ ಸ್ವಾಮೀಜಿ ಗದ್ದುಗೆ ದರ್ಶನ ಪಡೆದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ತಿಳಿಸಿದರು.

Add Asianetnews Kannada as a Preferred SourcegooglePreferred

ಇಂದು ಸಿದ್ದಗಂಗಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ಸಾಂಕೇತಿಕವಾಗಿ ಚೆನ್ನಬಸವೇಶ್ವರ ದೇವಸ್ಥಾನದ ದರ್ಶನ ಪಡೆದಿದ್ದೇವೆ. ನಮ್ಮ ಹಿರಿಯ ನಾಯಕರಾದ ಬಿಸಿ ನಾಗೇಶ್ ಮನೆಗೆ ಭೇಟಿ ನೀಡುತ್ತೇನೆ. ಇಂದು ಸಂಜೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಹೋಗುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ನಾನು ಹೋಗುತ್ತೇನೆ ಎಂದರು. 

ತುಮಕೂರು ಟಿಕೆಟ್‌ ಕೊಡಿಸುವಂತೆ ಹೆಚ್‌ಡಿಕೆ ಭೇಟಿ ಮಾಡಿ ಮಾತುಕತೆ ನಡೆಸಿದ ಸೋಮಣ್ಣ

ಇನ್ನು ಮಾಜಿ ಸಚಿವ ಮಾಧುಸ್ವಾಮಿ ಜೊತೆಗೆ ನಾನು ನಿನ್ನೆಯೇ ದೂರವಾಣಿ ಮೂಲಕ ಅವರೊಂದಿಗೆ ಮಾತನಾಡಿದ್ದೇನೆ ಆದರೆ ಅವರ ಸ್ವಲ್ಪ ಬೇಜಾರಾಗಿ ಮಾತಾಡ್ತಿದ್ರು. ನಾನು ನಾಳೆ ಮನೆಗೆ ಬರ್ತಿದಿನಿ ಅಣ್ಣ ಅಂದೆ. ಆದರೆ ನೀನು ಬರಬೇಡ ಅಂದ್ರು. ಆಯ್ತು ಅಣ್ಣ ಮನೆಯಲ್ಲಿ ತಂಗಿ ಇರ್ತಾಳೆ ಮಾತಾಡಿಸಿಕೊಂಡು ಹೋಗ್ತೇನೆ ಅಂದೆ. ಆದ್ರೂ ಅವರು, ಬೇಡ ಗುರು ನನ್ನ ಮಾತು ಕೇಳು ಅಂದ್ರು. ಆಯ್ತಣ್ಣ ನಾಲ್ಕು ದಿನ ಕಳೀಲಿ ನಿನ್ನಲ್ಲಿರುವ ದುಗುಡವು ಕಡಿಮೆಯಾಗಲಿ ಆಮೇಲೆ ಬರ್ತಿನಿ ಅಂದೆ.

ಲೋಕಸಭಾ ಚುನಾವಣೆ 2024: ತುಮಕೂರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೋಮಣ್ಣ ಮಿಂಚಿನ ಸಂಚಾರ