ಬಿಜೆಪಿಗೆ ಯಾರೇ ಸೇರ್ಪಡೆಗೊಂಡರೂ 'ವಾಷಿಂಗ್ ಪೌಡರ್ ನಿರ್ಮಾ' ಆಗ್ಬಿಡ್ತಾರೆ: ಸಚಿವ ಸಂತೋಷ್ ಲಾಡ್ ವ್ಯಂಗ್ಯ
ಜನಾರ್ದನ ರೆಡ್ಡಿ ಮೇಲೆ ಬಿಜೆಪಿಯವ್ರೇ ಭ್ರಷ್ಟಾಚಾರ ಆರೋಪ ಮಾಡಿದ್ರು. ಈಗ ಪಕ್ಷಕ್ಕೆ ಕರೆದುಕೊಂಡಿದ್ದಾರೆ. ಯಾರೇ ಆಗಲಿ ಬಿಜೆಪಿಗೆ ಸೇರ್ಪಡೆಗೊಂಡರೆ ಶುದ್ಧರಾಗುತ್ತಾರೆ. ವಾಷಿಂಗ್ ಪೌಡರ್ ನಿರ್ಮಾ ಆಗಿಬಿಡುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯ.
ಹುಬ್ಬಳ್ಳಿ (ಮಾ.25): ನರೇಂದ್ರ ಮೋದಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ ಅಂತಾ ಹೇಳ್ತಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿಯನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.
ಹುಬ್ಬಳ್ಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮೇಲೆ ಬಿಜೆಪಿಯವ್ರೇ ಭ್ರಷ್ಟಾಚಾರ ಆರೋಪ ಮಾಡಿದ್ರು. ಈಗ ಪಕ್ಷಕ್ಕೆ ಕರೆದುಕೊಂಡಿದ್ದಾರೆ. ಯಾರೇ ಆಗಲಿ ಬಿಜೆಪಿಗೆ ಸೇರ್ಪಡೆಗೊಂಡರೆ ಶುದ್ಧರಾಗುತ್ತಾರೆ. ವಾಷಿಂಗ್ ಪೌಡರ್ ನಿರ್ಮಾ ಆಗುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೀಟುಗಳು ಕಡಿಮೆ ಬರುವ ಸರ್ವೇ ರಿಪೋರ್ಟ್ ಬಂದಿದೆ. ಹೀಗಾಗಿ ಬಿಜೆಪಿಯವರು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಶೇ.37 ರಷ್ಟು ಮತಗಳು ಬಂದಿದ್ದವು. ಇದೀಗ ಶೇ.29 ರಷ್ಟು ಮಾತ್ರ ಮತಗಳು ಬರಬಹುದು. ಅಂದರೆ ದೇಶಾದ್ಯಂತ ಬಿಜೆಪಿಗೆ 200 ಸೀಟುಗಳು ಮಾತ್ರ ಬರಲಿವೆ. ಹೀಗಾಗಿ ಯಾರೇ ಬಂದರೂ ಅವರು ಭ್ರಷ್ಟರಾ? ಶುದ್ಧಹಸ್ತರಾ ಎಂದು ನೋಡದೇ ಪಕ್ಷಕ್ಕೆ ಕರೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕನಕಪುರದಲ್ಲಿ ಧಮ್ಕಿ, ಬೆದರಿಕೆ ಹೆಚ್ಚು ದಿನ ಇರೊಲ್ಲ: ಡಿಕೆ ಬ್ರದರ್ಸ್‌ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್
ಈ ಲೋಕಸಭಾ ಚುನಾವಣೆ ಕಳೆದ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಮೇಲೆ ನಡೆಯಬೇಕು. ಅದು ಬಿಟ್ಟು ಇದೀಗ ಆರೋಪ-ಪ್ರತ್ಯಾರೋಪಗಳ ಮೇಲೆ ನಡೆಯುವಂತಾಗಿದೆ, ಇದು ದುರ್ದೈವ ಎಂದ ಸಚಿವ ಸಂತೋಷ್ ಲಾಡ್, ವಿಶ್ವಗುರು ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರ ಕಾಲದಲ್ಲೇ ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಹೋಗಿವೆ. ಖಾಸಗಿ ಕಂಪನಿಗೆ ಜಾಹೀರಾತು ಕೊಡುವ ಮೋದಿಯವರು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್‌ಗೆ ಜಾಹಿರಾತು ನೀಡಲಿಲ್ಲ. ಉಚಿತವಾಗಿ ಸೇವೆ ನೀಡುವ ಜಿಯೋ ಇಂದು ಲಾಭದ ಹಾದಿಯಲ್ಲಿದ್ದರೇ ಬಿಎಸ್‌ಎನ್‌ಲ್ ಯಾಕೆ ನಷ್ಟದಲ್ಲಿದೆ? ಇದಕ್ಕೆ ನರೇಂದ್ರ ಮೋದಿ ಉತ್ತರಿಸಲಿ ಎಂದು ಆಗ್ರಹಿಸಿದರು.
'ಮೋದಿ ಯುವ ಪಡೆಯ ಕಪಾಳಕ್ಕೆ ಹೊಡೆಯುವ ಶಕ್ತಿ 'ಕೈ'ಗೆ ಇದೆಯೇ?': ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಜೋಶಿ ತಿರುಗೇಟು
ಇನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ಪ್ರಸ್ತಾಪಿಸಿದ ಸಚಿವ ಸಂತೋಷ್ ಲಾಡ್, ನಾನು ಯಾವತ್ತೂ ನರೇಂದ್ರ ಮೋದಿಯವರ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಪ್ರಲ್ಹಾದ್ ಜೋಶಿಯವರ ಜೊತೆ ಒಂದೇ ಫ್ಲೈಟ್‌ನಲ್ಲಿ ಹಲವು ಬಾರಿ ಪ್ರಯಾಣ ಮಾಡಿದ್ದೇನೆ. ನಮ್ಮ ನಡುವೆ ನಡೆದ ಸಂವಾದದ ಬಗ್ಗೆ ಪ್ರಲ್ಹಾದ್ ಜೋಶಿಯವರು ತಿರುಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.