ಬೆಂಗಳೂರು(ಏ.11): ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದ ಲಾಕ್‌ಡೌನ್ ಇದೇ ಏಪ್ರಿಲ್ 14ಕ್ಕೆ ಅಂತ್ಯವಾಗಲಿದ್ದು, ಇದನ್ನು ಮುಂದುವರಿಸಬೇಕಾ? ಬೇಡ್ವಾ? ಎನ್ನುವ ಬಗ್ಗೆ  ಮೋದಿ ಇಂದು (ಶನಿವಾರ) ಎಲ್ಲಾ ರಾಜ್ಯಗಳ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು, ಈ ವೇಳೆ ಮೋದಿ ಅವರು ಮಾಸ್ಕ್ ಹಾಕಿಕೊಂಡಿರುವುದು ವಿಶೇಷವಾಗಿತ್ತು.

"

ಯಾಕಂದ್ರೆ ಈ ಹಿಂದೆ ಎರಡು ಬಾರಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿದಾಗ ಮಾಜಿಕ ಅಂತರ ಪಾಲಿಸಿದ್ರು ಹೊರತು ಮಾಸ್ಕ್ ಧರಿಸಿರಲಿಲ್ಲ. ಆದ್ರೆ, ಇಂದಿನ ವಿಡಿಯೋ ಕಾನ್ಫರೆನ್ಸ್‌ ಮಾಸ್ಕ್ ಧರಿಸಿ ಸಿಎಂಗಳ ಜತೆ ಸಭೆ ನಡೆಸಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು. 

ಮೊದಲ ಬಾರಿ ಹೋಂ ಮೇಡ್ ಮಾಸ್ಕ್ ಧರಿಸಿದ ಮೋದಿ, ಮಹತ್ವದ ಸಂದೇಶ ರವಾನೆ!

ಕೊರೋನಾ ಸೋಂಕಿನ ನಿಯಂತ್ರಣ ಮತ್ತಿತರ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ವಿಡಿಯೋ ಸಂವಾದದಲ್ಲಿ ಹಂಚಿಕೊಂಡಿದ್ದಾರೆ.

"

ಹಾಗಾದ್ರೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ನಡುವೆ ಏನೆಲ್ಲಾ ಮಾತುಕತೆಗಳು ನಡೆದವು? ಮೋದಿ ಮುಂದೆ ಯಡಿಯೂಪ್ಪ ಹೇಳಿದ್ದೇನು? ಬಿಎಸ್‌ವೈಗೆ ಪ್ರಧಾನಿ ಕೊಟ್ಟ ಸಲಹೆಗಳೇನು ಎನ್ನುವ ಮಾಹಿತಿ ನಿಮ್ಮ ಸುವರ್ಣ ನ್ಯೂಸ್‌.ಕಾಂ ಗೆ ಲಭ್ಯವಾಗಿದೆ. ಸುಮಾರು 4ರಿಂದ 5 ನಿಮಿಷ ನಡೆದ ಮಾತುಕತೆಯ ವಿವರ ಈ ಕೆಳಗಿನಂತಿದೆ ನೋಡಿ.

ಮೋದಿಗೆ ಯಡಿಯೂರಪ್ಪ ಹೇಳಿದ್ದೇನು..?

* ಏ.14ರ ನಂತರ ಕರ್ನಾಟದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡ್ಬೇಕೋ, ಬೇಡವೋ ಎನ್ನುವ ಬಗ್ಗೆ ಡಾ. ದೇವಿ ಶೆಟ್ಟಿ ಅವರು ತಯಾರಿಸಿ ಕೊಟ್ಟಿದ್ದ ವರದಿ ಬಗ್ಗೆ ಸಿಎಂ ಬಿಎಸ್‌ವೈ ಅವರು ಮೋದಿಗೆ ತಿಳಿಸಿದರು.

ಟಾಸ್ಕ್ ಫೋರ್ಟ್‌ ತಂಡದಿಂದ ಸಿಎಂಗೆ ವರದಿ: ಲಾಕ್‌ಡೌನ್ ತೆರವು ಮಾಡ್ಬೇಕಾ? ಬೇಡ್ವಾ?

*  ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಮೊನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡು ನಿರ್ಣಯವನ್ನು ಮೋದಿಗೆ ತಿಳಿಸಿದರು.

* ಇನ್ನು ಚಿಕಿತ್ಸೆ ಪಡೆಯಲು ನಿರಾಕರಿಸುವವರ ಮತ್ತು ವಿನಾಕಾರಣ ವೈದ್ಯರ ಜೊತೆ ಅನುಚಿವ ವರ್ತನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ರಾಜ್ಯ ಸರ್ಕಾರದ ನಿರ್ಧಾವನ್ನು ಮೋದಿಗೆ ಮನವರಿಕೆ ಮಾಡಿಕೊಟ್ಟರು.

* ಏಪ್ರಿಲ್ 14ರ ನಂತರ ಲಾಕ್‌ಡೌನ್ ವಿಸ್ತರಣೆಗೆ ನಮ್ಮ ಸಹಮತ ಇದೆ. ಇದಕ್ಕೆ ಬೇಕಾದ ಮುಂಜಾತ್ರತಾ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎನ್ನುವ ಬಗ್ಗೆ ಪ್ರಧಾನಿಗೆ ವಿವರಿಸಿದರು. ಇನ್ನು ಡೇಂಜರ್ ಜೋನ್ ಪ್ರದೇಶಗಳನ್ನು ಸೀಲ್‌ ಡೌನ್ ಮಾಡುವ ಬಗ್ಗೆಯೂ ಹೇಳಿದರು.

* ಒಟ್ಟಿನಲ್ಲಿ ನೀವು (ಪ್ರಧಾನಿ ನರೇಂದ್ರ ಮೋದಿ) ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಹಮತ ಇದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಯಡಿಯೂರಪ್ಪಗೆ ಮೋದಿ ಕೊಟ್ಟ ಸಲಹೆಗಳೇನು..?

* ರಾಜ್ಯ ಬಜೆಟ್ ಘೋಷಣೆಯ ಅನುದಾನವನ್ನು ತಡೆ ಹಿಡಿದು ಕೊರೋನಾ ವಿರುದ್ಧದ ಹೋರಾಟ್ಕೆ ಹಣವನ್ನು ಬಳಸಿಕೊಳ್ಳವಯಂತೆ ಮೋದಿ ಅವರು ಬಿಎಸ್‌ವೈ ಸಲಹೆ ಕೊಟ್ಟಿದ್ದಾರೆ.

* ರಾಜ್ಯದಲ್ಲಿ ಮುಂದಿನ 6 ತಿಂಗಳು ಕೊರೋನಾ ಸೋಂಕಿತರ ಚಿಕಿತ್ಸೆಗೆ ವೆಂಟಿಲೇಟರ್ಸ್ ಲಭ್ಯವಿರಬೇಕು ಎಂದು ಸೂಚಿಸಿದರು.

* ರಾಜ್ಯದ ಜನಸಂಖ್ಯೆ ಅನುಗುಣವಾಗಿ ಶೇಕಡ 5ರಷ್ಟು ವೆಂಟಿಲೇಟರ್ ಲಭ್ಯವಿರುವಂತೆ ನೋಡಿಕೊಳ್ಳಿ.
* ಕೊರೋನಾ ವೈರಸ್ ಸೋಂಕು ಹರಡುವಿಕೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ

ಇಷ್ಟು ಮೋದಿ ಹಾಗೂ ಬಿಎಸ್‌ವೈ ನಡುವೆ ನಡೆದ ವಿಡಿಯೋ ಕಾನ್ಫೋರೆನ್ಸ್ ಸಂವಾದವಾಗಿದ್ದು, ಒಟ್ಟಿನಲ್ಲಿ ಬಿಎಸ್ ಯಡಿಯೂರಪ್ಪ ಅವರು ಮೋದಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ.  

ದೇಶವನ್ನುದ್ದೇಶಿಸಿ ಮೋದಿ ಮಾತು
"
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಸಂಜೆ 7 ಗಂಟೆ ನಂತರ ಯಾವುದೇ ಸಮಯದಲ್ಲಿ ಲಾಕ್‌ಡೌನ್ ವಿಸ್ತರಿಸಬೇಕೋ ಬೇಡ ಎನ್ನುವ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ.ಇದರಿಂದ ಯಾವುದಕ್ಕೂ ನಮ್ಮ ಜನತೆ ಮಾನಸಿಕವಾಗಿ ಸಿದ್ಧರಿರಬೇಕು.