ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಜೂ.1ರಿಂದ ಮದ್ಯ ನಿಷೇಧ, 5 ದಿನ ಎಣ್ಣೆ ಸಿಗಲ್ಲ!
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜೆಲ್ಲಿಗಳಲ್ಲಿ ಜೂನ್ 1 ರಿಂದ 5 ದಿನ ಮದ್ಯ ಮಾರಾಟ ನಿಷೇಧ. ನಾಳೆ ಸಂಜೆಯಿಂದ ಸಂಪೂರ್ಣ ನಿಷೇಧವಾಗಲಿದ್ದು, ಜೂನ್ 6ರವರೆಗೆ ಮದ್ಯ ಮಾರಾಟಕ್ಕೆ ಬೇಕ್ ಹಾಕಲಾಗಿದೆ.
ಬೆಂಗಳೂರು(ಮೇ.30) ವಾರಾಂತ್ಯ ಸಮೀಪಿಸುತ್ತಿದ್ದಂತೆ ಎಣ್ಣೆ ಪ್ರೀಯರಿಗೆ ಶಾಕ್ ಎದುರಾಗಿದೆ. ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೂನ್ 1 ರಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ. 5 ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ವಿಧಾನ ಪರಿಷತ್ ಚುನಾವಣೆ, ಲೋಕಸಭಾ ಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ನಾಳೆ ಸಂಜೆಯಿಂದ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳಲಿದೆ.
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಜೊತೆಗೆ ಲೋಕಸಭಾ ಚುನಾವಣೆ ಫಲಿತಾಂಶವೂ ಪ್ರಕಟಗೊಳ್ಳಲಿದೆ. ಹೀಗಾಗಿ ಒಟ್ಟು 5 ದಿನಗಳ ಕಾಲ ಮದ್ಯ ನಿಷೇಧ ಮಾಡಲಾಗಿದೆ. ಈ ಕುರಿತು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಜೂನ್ 3 ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಜೂನ್ 4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಇನ್ನು ಜೂನ್ 6 ರಂದು ವಿಧಾನ ಪರಿಷತ್ ಚುನಾವಣೆ ಮತ ಏಣಿಕೆ ನಡೆಯಲಿದೆ. ಹೀಗಾಗಿ ಜೂನ್ 1 ರಿಂದ ಜೂನ್ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೂನ್ 1 ರಿಂದ ಜೂನ್ 6ರ ವರೆಗೆ ಬಾರ್, ವೈನ್ ಶಾಪ್, ರೆಸ್ಟೋರೆಂಟ್,ಕ್ಲಬ್, ಹೊಟೆಲ್, ಅಂಗಡಿಗಳಲ್ಲಿ ಮದ್ಯ ಮಾರಾಟ, ಶೇಖರಣೆ ನಿಷೇಧಿಸಲಾಗಿದೆ.
ಪಾನಿ ಬದಲು ಆಲ್ಕೋಹಾಲ್…ಮದ್ಯಪ್ರೇಮಿಗಳ ಬಾಯಲ್ಲಿ ನೀರು ಬರಿಸೋ ಪಾನಿ ಪುರಿ ಇದು!
ಜೂನ್ 3ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಚುನಾವಣೆಗೂ 48 ಗಂಟೆ ಮನ್ನ ಅಂದರೆ ಜೂನ್ 1ರಿಂದಲೇ ಮದ್ಯ ಮಾರಾಟ ನಿಷೇಧಗೊಳ್ಳಲಿದೆ. ಇನ್ನು ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಕಾರಣದಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೂನ್ ರಾತ್ರಿ 12 ಗಂಟೆ ವರೆದೆ ಮದ್ಯ ಮಾರಾಟ ನಿಷೇಧಗೊಳ್ಳಲಿದೆ.
ಜೂನ್ 5 ರಂದು ಮದ್ಯ ಮಾರಾಟಕ್ಕೆ ಅವಕಾಶವಿದೆ. ಜೂನ್ 5 ರಂದು ಬೆಳಗ್ಗೆಯಿಂದ ನಿಗಧಿತ ಅವಧಿ ರಾತ್ರಿ ವರೆಗೆ ಮದ್ಯ ಮಾರಾಟ ನಡೆಯಲಿದೆ. ಜೂನ್ 6ರಂದು ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ನಡೆಯಲಿದೆ. ಹೀಗಾಗಿ ಜೂನ್ ರಂದು ಮತ್ತೆ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಜೂನ್6ರ ಮದ್ಯ ರಾತ್ರಿ 12 ಗಂಟೆ ತನಗ ನಿಷೇಧ ಮುಂದುವರಿಯಲಿದೆ. ಒಟ್ಟು 5 ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮದ್ಯ ಮಾರಾಟ ನಿಷೇಧಗೊಳ್ಳಲಿದೆ.
ಜೂನ್ ತಿಂಗಳ ಆರಂಭದಲ್ಲೇ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳುತ್ತಿದೆ. ಇತ್ತ ಎಣ್ಣೆ ಪ್ರೀಯರು ಈಗಾಗಲೇ ಮದ್ಯದ ಅಂಗಡಿಗಳಲ್ಲಿ ಮುಗಿ ಬೀಳುತ್ತಿದ್ದಾರೆ. ನಾಳೆ ಒಂದೇ ದಿನವಿದ್ದು, ಮತ್ತೆ 5 ದಿನ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳಲಿರುವ ಹಿನ್ನಲೆಯಲ್ಲಿ ಇದೀಗ ಎಣ್ಣೆ ಪ್ರಿಯರು ಮದ್ಯದ ಅಂಗಡಿಗಳಿಗೆ ಧಾವಿಸುತ್ತಿದ್ದಾರೆ.
ಕರಾವಳಿಯಲ್ಲಿ ‘ಮದ್ಯ’ದ ಜಾಗ ಆಕ್ರಮಿಸಿದ ತಣ್ಣನೆ ಬಿಯರ್!