ಇಂದಿನಿಂದ ಬಡವರು ಕುಡಿಯುವ ಮದ್ಯದ ದರ ಏರಿಕೆ‌; ಯಾವ ಬ್ರಾಂಡ್ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

ಇಂದಿನಿಂದ ಮದ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಬಡವರ ನೆಚ್ಚಿನ‌ ಕೆಲ ಬ್ರಾಂಡ್ ಗಳ ದರ ಏರಿಕೆ ಮಾಡಲಾಗಿದ್ದು, ಮದ್ಯ ಮತ್ತಷ್ಟು ತುಟ್ಟಿಯಾಗಲಿದೆ. ಕ್ವಾಟರ್ ಗೆ 20 ರಿಂದ 30 ರೂಪಾಯಿ ಏರಿಸಿದ ಮದ್ಯ ಉತ್ವಾದನ‌‌‌ ಕಂಪನಿಗಳು.

Liquor price increase from today Here are more details at Bengaluru rav

ಬೆಂಗಳೂರು (ಜ.2): ಇಂದಿನಿಂದ ಮದ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಬಡವರ ನೆಚ್ಚಿನ‌ ಕೆಲ ಬ್ರಾಂಡ್ ಗಳ ದರ ಏರಿಕೆ ಮಾಡಲಾಗಿದ್ದು, ಮದ್ಯ ಮತ್ತಷ್ಟು ತುಟ್ಟಿಯಾಗಲಿದೆ.

ಕ್ವಾಟರ್ ಗೆ 20 ರಿಂದ 30 ರೂಪಾಯಿ ಏರಿಸಿದ ಮದ್ಯ ಉತ್ವಾದನ‌‌‌ ಕಂಪನಿಗಳು.  ರಾಜ್ಯಾದ್ಯಂತ ಓಟಿ, ಬಿಪಿ, 8 ಪಿಎಂ ದರ ಏಕಾಏಕಿ ಹೆಚ್ಚಳ. ಶೇ. 20 ರಷ್ಟು ದರ ಹೆಚ್ಚಳದಿಂದಾಗಿ ಶಾಕ್ ಆದ ಮದ್ಯ ಪ್ರಿಯರು. ಬೆಲೆ ಏರಿಕೆ ಕುರಿತಂತೆ ಈಗಾಗಲೇ ಬಾರ್ ಮಾಲೀಕರಿಗೆ ಸಂದೇಶ ಕಳುಹಿಸಿರುವ ಮದ್ಯ ತಯಾರಿಕೆ ಕಂಪನಿಗಳು. 

ಮದ್ಯದ ಬೆಲೆ ಹೆಚ್ಚಳ ಮಾಡುವುದಿಲ್ಲ ಎಂದಿದ್ದ ಸರ್ಕಾರ ಇದೀಗ ಏಕಾಏಕಿ ಹೆಚ್ಚಳ ಮಾಡಿರುವುದರಿಂದ  ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಉತ್ಪಾದನ ವೆಚ್ಚ ಅಧಿಕವಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಅಂತಿರೋ ಮದ್ಯ ಉತ್ವನ್ನ ಕಂಪನಿಗಳು. ಈ‌ ಬ್ರಾಂಡ್‌ ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆಯಂತೆ‌ 

ರಾಜ್ಯಾದ್ಯಂತ ಎರಡೇ ದಿನದಲ್ಲಿ ₹417 ಕೋಟಿ ಮದ್ಯ ಬಿಕರಿ!

ಯಾವವ ಬ್ರಾಂಡ್, ಎಷ್ಟು ಹೆಚ್ಚಳ?

1. ಓಟಿ  180 ಎಂಎಲ್
ಸದ್ಯದ ದರ :   90 ರೂಪಾಯಿ
ಜನವರಿ 1ರಿಂದ  111 ರೂಪಾಯಿ

2. ಬಿಪಿ 180 ಎಂಎಲ್
ಸದ್ಯದ ದರ:  110 ರೂಪಾಯಿ
ಜನವರಿಯಿಂದ 145 ರೂಪಾಯಿ

3. 8PM (180 ಎಂಎಲ್)
ನಿನ್ನೆಯ ದರ : 90 ರೂಪಾಯಿ
ಇಂದಿನ ದರ : 111 ರೂಪಾಯಿ

Latest Videos
Follow Us:
Download App:
  • android
  • ios