Asianet Suvarna News Asianet Suvarna News

40 Percentage ಬಿಜೆಪಿ ಸರ್ಕಾರ ವಜಾಕ್ಕೆ ಗೌರ್ನರ್‌ಗೆ ಪತ್ರ ಬರೆವೆ: ಸಿದ್ದು

*   ಪ್ರಧಾನಿಗೆ ಪತ್ರ ಬರೆದ ರಾಜ್ಯ ಗುತ್ತಿಗೆದಾರರ ಸಂಘ
*   ಪ್ರತಿ ಕಾಮಗಾರಿ ಟೆಂಡರ್‌ ಪಡೆಯಲು ಶೇ.40 ಪರ್ಸೆಂಟೇಜ್‌ ಕೊಡಬೇಕು ಅಂತ ಆರೋಪ
*   ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್‌ ಎಂಬುದರ ಬಗ್ಗೆ ಉಲ್ಲೇಖ

Letter To the Governor for Dismiss the 40 Percentage BJP Government Says Siddaramaiah grg
Author
Bengaluru, First Published Nov 20, 2021, 8:03 AM IST
  • Facebook
  • Twitter
  • Whatsapp

ಮೈಸೂರು(ನ.20):  ಪ್ರತಿ ಕಾಮಗಾರಿ ಟೆಂಡರ್‌ಗೆ ಶೇ.40 ಪರ್ಸೆಂಟೇಜ್‌(40 Percentage) ಪಡೆಯುವ ರಾಜ್ಯ ಸರ್ಕಾರವನ್ನು(Government of Karnataka) ವಜಾ ಮಾಡುವಂತೆ ರಾಜ್ಯಪಾಲರಿಗೆ(Governor) ಪತ್ರ ಬರೆಯುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ(Prime Minister) ಪತ್ರ ಬರೆದಿದ್ದಾರೆ. ಪ್ರತಿ ಕಾಮಗಾರಿ ಟೆಂಡರ್‌ ಪಡೆಯಲು ಶೇ.40 ಪರ್ಸೆಂಟೇಜ್‌ ಕೊಡಬೇಕು ಅಂತ ಆರೋಪಿಸಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್‌ ಎಂಬುದನ್ನೂ ವಿವರಿಸಿದ್ದಾರೆ ಎಂದರು.

ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್‌ ಎಂಬುದನ್ನು ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಹೇಳಿದ್ದಾರೆ. ಈ ಆರೋಪಗಳನ್ನ ನಾನು ಮಾಡಿದ್ದರೆ ಪ್ರತಿ ಪಕ್ಷದವರು ಎನ್ನಬಹುದಿತ್ತು. ಆದರೆ, ಟೆಂಡರ್‌(Tender) ಪಡೆಯುವವರೆ ಶೇ.40 ಪರ್ಸೆಂಟ್‌ ಆರೋಪ ಮಾಡಿರುವುದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರೆಯಬಾರದು ಎಂದು ಹೇಳಿದರು.

ಬಿಜೆಪಿ ಟಿಕೆಟ್‌ಗಾಗಿ ಮೂವರ ನಡುವೆ ತೀವ್ರ ಪೈಪೋಟಿ : ಯಾರಿಗೆ ಮಣೆ..?

ಪ್ರಧಾನಿ ಮೋದಿಯವರು(Narendra Modi) ’ನಾ ಕಾವೂಂಗಾ ನಾ ಕಾನೇದೂಂಗಾ’ ಅನ್ನುತ್ತಿದ್ದರು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಕಮಿಷನ್‌ ಪಡೆಯುವ ಸರ್ಕಾರವನ್ನ ನಾನು ಜೀವಮಾನದಲ್ಲಿ ನೋಡಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದರು.

ನಿರ್ನಾಮದ ಹಂತದಲ್ಲಿ ಕಾಂಗ್ರೆಸ್‌: ಜಗದೀಶ್‌ ಶೆಟ್ಟರ್‌

ಚನ್ನಪಟ್ಟಣ:  ಶತಮಾನದ ಪಕ್ಷ ಎಂದು ಬೀಗುವ ಕಾಂಗ್ರೆಸ್‌ ಇಂದು ನಿರ್ನಾಮವಾಗುವ ಹಂತ ತಲುಪಿದೆ. ಆ ಪಕ್ಷದ ಪ್ರಬಲ ನಾಯಕರು ಕ್ಷೇತ್ರ ಬದಲಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌(Jagadish Shettar) ಟಾಂಗ್‌ ನೀಡಿದರು.

ತಾಲೂಕಿನ ಹೊಂಗನೂರಿನ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಜನಸ್ವರಾಜ್‌(JanSwaraj) ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ರಾಜ್ಯದಲ್ಲೂ(Karnataka) ಕಾಂಗ್ರೆಸ್‌ ಅವನತಿಯತ್ತ ಸಾಗುತ್ತಿದೆ ಎಂದು ಭವಿಷ್ಯ ನುಡಿದರು.

ಶತಮಾನದ ಪಕ್ಷ ಎಂದು ತನ್ನ ಬೆನ್ನನ್ನು ತಟ್ಟಿಕೊಳ್ಳುವ ಕಾಂಗ್ರೆಸ್‌(Congress) ಅನ್ನು ಇಂದು ದೇಶದಲ್ಲಿ ಹುಡುಕುವಂತಾಗಿದೆ. ಒಂದೆರೆಡು ರಾಜ್ಯದಲ್ಲಿ ಅ​ಕಾರದಲ್ಲಿದ್ದರೂ ಅದು ಅವರಿವರ ಕಾಲುನ್ನು ಹಿಡಿದುಕೊಂಡು ಅಧಿ​ಕಾರ ನಡೆಸುವಂತಾಗಿದೆ. ಯಾವ ರಾಜ್ಯದಲ್ಲೂ ಕಾಂಗ್ರೆಸ್‌ಗೆ ಬಹುಮತ ದೊರೆಯದಂತಾಗಿರುವುದೇ ಆ ಪಕ್ಷದ ದುರಾಡಳಿತಕ್ಕೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.

ಹಾನಗಲ್‌ ಗೆಲುವು ದೊಡ್ಡದಲ್ಲ:

ಬಹುತೇಕ ಎಲ್ಲ ಉಪಚುನಾವಣೆಗಳಲ್ಲೂ ಬಿಜೆಪಿ(BJP) ಅಭ್ಯರ್ಥಿಗಳು ಗೆದ್ದಿದ್ದಾರೆ. ಬರೀ ಹಾನಗಲ್‌ನಲ್ಲಿ ಗೆದ್ದದ್ದನ್ನೇ ದೊಡ್ಡ ಸಾಧನೆ ಎಂಬಂತೆ ಕಾಂಗ್ರೆಸ್‌ನವರು ಬಿಂಬಿಸಿಕೊಳ್ಳುತ್ತಿದ್ದಾರೆ. ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದದ್ದನ್ನೇ ದೊಡ್ಡದು ಎಂದುಕೊಳ್ಳುವುದು ಎಷ್ಟು ಸರಿ ಎಂದು ಕಾಂಗ್ರೆಸ್‌ನವರು ಅರ್ಥಮಾಡಿಕೊಳ್ಳಬೇಕು ಎಂದು ತಿವಿದರು.

ಕೃಷಿ ಕಾಯ್ದೆ ಹಿಂಪಡೆದಿದ್ದು ಸ್ವಾಗತಾರ್ಹ: 

ಕೇಂದ್ರ ಸರಕಾರ(Central Government) 3 ಕೃಷಿ ಕಾಯಿದೆಗಳನ್ನು ಹಿಂಪಡೆದಿದ್ದನ್ನು ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್‌ನವರಿಗೆ ರೈತರ ಕುರಿತು ಎಳ್ಳಷ್ಟು ಕಾಳಜಿ ಇಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಟೀಕೆ ಮಾಡಲು ಸರಕು ಸಿಗದ ಕಾರಣ, ಸಣ್ಣಪುಟ್ಟ ವಿಚಾರಗಳನ್ನೇ ದೊಡ್ಡದು ಮಾಡುವುದನ್ನು ಕಾಂಗ್ರೆಸ್‌ನವರು ಅಭ್ಯಾಸ ಮಾಡಿಕೊಂಡಿದ್ದಾರೆ. ಕೋರೋನಾ ಹೊಡೆತ, ಆರ್ಥಿಕ ಹಿಂಜರಿತದಿಂದ ಕಂಗಾಲಾಗಿರುವ ದೇಶದ ಜನರಿಗೆ ಕೇಂದ್ರ ಸರಕಾರದಿಂದ ಶೀಘ್ರವೇ ಸಹಿ ಸುದ್ದಿಯೊಂದು ದೊರೆಯಲಿದೆ ಎಂದು ತಿಳಿಸಿದರು.

ವ್ಯಾಕ್ಸಿನ್‌ ಸಾಧನೆ: 

ಕೊರೊನಾ(Coronavirus) ಸಂಕಷ್ಟದಿಂದಾಗಿ ವಿಶ್ವವೇ ಕಂಗಾಲಾಗಿದ್ದ ಸಂದರ್ಭದಲ್ಲಿ ದೇಶವನ್ನು ಸಮರ್ಥವಾಗಿ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ. ಕೆಲವು ದಿಟ್ಟಕ್ರಮಗಳನ್ನು ಕೈಗೊಂಡ ಅವರು ವಾಕ್ಸಿನ್‌ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾ​ಸುವಂತಾಗಲು ಪ್ರೋತ್ಸಾಹ ನೀಡಿದರು. ದೇಶದ ಜನರಿಗೆ ವ್ಯಾಕ್ಸಿನ್‌(Vaccine) ಪೂರೈಸುವ ಜತೆಗೆ ಇತರ ದೇಶಗಳಿಗೂ ವ್ಯಾಕ್ಸಿನ್‌ ಪೂರೈಸಿದ್ದು ದೇಶದ ಐತಿಹಾಸಿಕ ಸಾಧನೆ. ಸುಮಾರು 116 ಕೋಟಿ ಜನರಿಗೆ ಲಸಿಕೆ ನೀಡುವುದು ಕಡಿಮೆ ಸಾಧನೆಯಲ್ಲ ಎಂದು ಶ್ಲಾಘಿಸಿದರು.

'ನಲಪಾಡ್‌ ಹಲ್ಲೆ ಘಟನೆ ಕ್ಷುಲ್ಲಕ ಅಲ್ಲ: 2018ರಲ್ಲೇ ಎಚ್‌ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್‌’ ಹಾಕಿದ್ದರು'

ಕೋರೊನಾ ಸಮಯದಲ್ಲಿ ಆಕ್ಸಿಜನ್‌(Oxygen) ಕೊರತೆ ಉಂಟಾಗದಂತೆ, ಬೆಡ್‌ ಕೊರತೆ ಉಂಟಾಗದಂತೆ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡ ಪ್ರಧಾನಿ, ರಾಜ್ಯ ಸರಕಾರಿಗಳ ಸಲಹೆಗಳನ್ನು ತೆಗೆದುಕೊಂಡು, ರಾಜ್ಯಗಳಿಗೆ ಮಾರ್ಗದರ್ಶನ ಮಾಡುತ್ತ ಮಹಾಮಾರಿಯ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡರು. ಅವರು ತೆಗೆದುಕೊಂಡು ಕ್ರಮಗಳಿಂದಾಗಿ ವಿಶ್ವವೇ ಭಾರತದತ್ತ ನೋಡುವಂತಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜನೌಷಧ ಮಳಿಗೆ: 

ದೇಶದ ಬಡಜನರು ದುಬಾರಿ ಔಷಧಗಳನ್ನು ಖರೀದಿಸಲು ಆಗದ ಪರಿಸ್ಥಿತಿಯನ್ನು ಅರಿತು ದೇಶಾದ್ಯಂತ ಜನೌಷಧ ಮಳಿಗೆಗಳನ್ನು ತೆರೆಯುವ ಮುಖಾಂತರ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದರಿಂದಾಗಿ ಕೋಟ್ಯಾಂತರ ಬಡಜನರ ಕೈಗೆ ಅಗತ್ಯ ಔಷಧಗಳು(Medicine) ಕಡಿಮೆ ದರಕ್ಕೆ ಸಿಗುವಂತಾಗಿದೆ ಎಂದು ತಿಳಿಸಿದರು.

ಸಿದ್ದುಗಳಿಂದಾಗಿ ಕಾಂಗ್ರೆಸ್‌ ಅವನತಿಯತ್ತ!

ಪಂಜಾಬ್‌ನಲ್ಲಿ(Punjab) ಅ​ಧಿಕಾರದಲ್ಲಿರುವ ಕಾಂಗ್ರೆಸ್‌ ಅನ್ನು ಆ ಪಕ್ಷದ ನಾಯಕ ನವಜೋತ್‌ ಸಿಂಗ್‌ ಸಿದ್ದು ನಿರ್ನಾಮ ಮಾಡಿದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಸಿದ್ದರಾಮಯ್ಯ ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ವಾಗ್ದಾಳಿ ನಡೆಸಿದರು.

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಅನ್ನು ಸಿದ್ದು ಮುಗಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಮಾಜಿ ಸಿಎಂ ಸಿದ್ದು ಮನೆಗೆ ಕಳುಹಿಸಲು ನಿಂತಿದ್ದಾರೆ. ಸಿದ್ದುಗಳಿಂದಾಗಿ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ ನಿರ್ನಾಮದ ಅಂಚಿಗೆ ಬಂದು ನಿಂತಿದೆ ಎಂದು ಟೀಕಿಸಿದರು.
 

Follow Us:
Download App:
  • android
  • ios