ದೇವದುರ್ಗ: ಹೆದರಿಸಲು ಹೋದ ಮೂವರ ಮೇಲೆ ಚಿರತೆ ದಾಳಿ!
ಹೆದರಿಸಲು ಹೋದ ಜನರ ಮೇಲೆಯೇ ಚಿರತೆ ದಾಳಿ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ನೆಡದಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ರಾಯಚೂರು (ಜು.7): ಹೆದರಿಸಲು ಹೋದ ಜನರ ಮೇಲೆಯೇ ಚಿರತೆ ದಾಳಿ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ನೆಡದಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ನಡೆದಿರುವ ಘಟನೆ. ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ಕೇಳಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಜೊತೆಗೆ ಹತ್ತಾರು ಹಳ್ಳಿಗಳಿಂದ ಸಾವಿರಾರು ಗ್ರಾಮಸ್ಥರು ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ. ಮನಸೋ ಇಚ್ಚೇ ಬೆಟ್ಟದಲ್ಲಿ ಎಲ್ಲೆಂದರಲ್ಲೇ ಗುಂಪು ಗುಂಪಾಗಿ ಹುಡುಕಾಟ ನಡೆಸಿದರು ಜನರು. ಈ ವೇಳೆ ಮೂವರ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿ ಮಾಡುತ್ತಿದ್ದಂತೆ ದಿಕ್ಕ ಪಾಲಾಗಿ ಓಡಿದ ಜನರು.
ರಾಯಚೂರು: ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ!
ಗ್ರಾಮಕ್ಕೆ ಶಾಸಕಿ ಕರೆಮ್ಮ ಭೇಟಿ:
ಮೂವರು ಮೇಲೆ ಚಿರತೆ ದಾಳಿ ನಡೆಸಿದ ಪ್ರಕರಣ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ದೇವದುರ್ಗ ಶಾಸಕ ಜಿ ಕರೆಮ್ಮ. ಬೆಟ್ಟದಲ್ಲಿ ಚಿರತೆ ಇರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಅರಣ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಅರಣ್ಯಾಧಿಕಾರಿ ಚೆನ್ನುಗೆ ದಬಾಯಿಸಿದ ಶಾಸಕಿ, ಬೆಟ್ಟದಲ್ಲಿ ಚಿರತೆ ಇರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದರೂ ಯಾಕೆ ಕಾರ್ಯಾಚರಣೆ ಮಾಡಿಲ್ಲ. ಬೆಟ್ಟದಲ್ಲಿ ಎಷ್ಟು ಚಿರತೆಗಳಿವೆ? ಬೋನ್ ಯಾವಾಗ ತಂದಿದ್ದು ಎಂದು ಪ್ರಶ್ನಿಸಿದರು ಮುಂದುವರಿದು, ಚಿರತೆ ಬೇಗ ಸೆರೆಹಿಡಿಯುವಂತೆ ದೇವದುರ್ಗ ಆರ್‌ಎಫ್‌ಒ ಗೆ ಖಡಕ್ ಸೂಚನೆ ನೀಡಿದರು.
ಕೊಡಗಿನಲ್ಲಿ ಮಿತಿಮೀರಿದ ಗಜರಾಜನ ಹಾವಳಿ: 10 ವರ್ಷದಲ್ಲಿ ಕಾಡಾನೆ ದಾಳಿಗೆ 20 ಜನರ ಸಾವು
ರಾಯಚೂರು ಭಾಗಗಳಲ್ಲಿ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಜಮೀನುಗಳಿಗೆ ಹೋಗಲು ಎದುರುವಂತಾಗಿದೆ. ರಾಯಚೂರು ದೇವದುರ್ಗ ಮಾನ್ವಿ ತಾಲೂಕಿನ ನೀರಮಾನ್ವಿ ಬೆಟ್ಟಗಳಲ್ಲಿ ಈ ಹಿಂದೆ ಚಿರತೆ ಪತ್ತೆಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಹಾಕಿ ಸೆರೆಹಿಡಿದಿದ್ದರು. ಇದೀಗ ಮತ್ತೆ ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬೆಟ್ಟದಲ್ಲಿ ಒಂದೇ ಚಿರತೆ ಇದೆಯಾ? ಇನ್ನೂ ಇವೆಯಾ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಒಂದಕ್ಕಿಂತ ಹೆಚ್ಚಿನ ಚಿರತೆಗಳಿರುವ ಸಾಧ್ಯತೆಯಿದೆ.