ಮೋದಿ ಕುರಿತು ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಕಿಡಿಗೇಡಿಗಳಿಂದ ಹಲ್ಲೆ; ಎಫ್‌ಐಆರ್ ದಾಖಲು

ಪ್ರಧಾನಿ ಮೋದಿ ಹಾಡು ಹಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮೈಸೂರು ನಜರ್‌ಬಾದ್ ಪೊಲೀಸರು ದೂರು ಆಧರಿಸಿ ಆರೋಪಿಗಳ ಪ್ರಕರಣ ದಾಖಲಿಸಿದ್ದಾರೆ.

Laxmi narayan attacked by Muslim youths for writing and singing on Narendra modi FIR booked rav

ಮೈಸೂರು (ಏ.19): ಪ್ರಧಾನಿ ಮೋದಿ ಹಾಡು ಹಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮೈಸೂರು ನಜರ್‌ಬಾದ್ ಪೊಲೀಸರು ದೂರು ಆಧರಿಸಿ ಆರೋಪಿಗಳ ಪ್ರಕರಣ ದಾಖಲಿಸಿದ್ದಾರೆ.

ಹಳ್ಳಿಕೆರೆಹುಂಡಿ ಗ್ರಾಮದ ಲಕ್ಷ್ಮೀನಾರಾಯಣ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದ ಕಿಡಿಗೇಡಿಗಳು. ಸಲೀಂ, ಜಾವೇದ್, ಪಾಷಾ ಸೇರಿದಂತೆ ಇತರೆ ಇಬ್ಬರ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರು.

ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ; ಚಿಂತಕ ಪ್ರೊ.ಮಹೇಶ ಚಂದ್ರ ಗುರು ವಿರುದ್ಧ ದೂರು ದಾಖಲು

ಮೂರನೇ ಭಾರಿ ಮೋದಿ ಅಧಿಕಾರಕ್ಕೆ ಏಕೆ ಬರಬೇಕು ಎಂಬ ವಿಚಾರದ ಮೇಲೆ ಗೀತೆ ರಚಿಸಿದ್ದ ಯುವಕ ಲಕ್ಷ್ಮೀ ನಾರಾಯಣ್. ಇದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಸಾರ್ವಜನಿಕವಾಗಿ ಬೇಡಿಕೆ ಇಡುತ್ತಿದ್ದ ವೇಳೆ ಮೈಸೂರಿನ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಯುವಕನ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ಯುವಕನ ಬಾಯಿ ಮುಚ್ಚಿ, ಕೈಗಳನ್ನು ಹಿಡಿದು ಹಲ್ಲೆ ನಡೆಸಿದ್ದಲ್ಲದೇ ತಲೆಮೇಲೆ ಬೀಯರ್ ಬಾಟಲಿ ಸುರಿದು, ಬಾಟಲಿಯಿಂದ ಕುಯ್ದಿದ್ದ ರಾಕ್ಷಸರು. ಅಲ್ಲದೆ ಯುವಕನ ಮೈಮೇಲೆ ಸಿಗರೇಟ್‌ನಿಂದ ಸುಟ್ಟಿದ್ದ ಆರೋಪಿಗಳು. ಹಲ್ಲೆ ಕುರಿತು ಪೊಲಿಸ್ ಠಾಣೆಗೆ ದೂರು ನೀಡಿದ್ದ ಯುವಕ. ಲಕ್ಷ್ಮೀ ನಾರಾಯಣ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಬಾತ್‌ರೂಂನಲ್ಲಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ ಯತ್ನ; ಸೆಕ್ಯೂರಿಟಿ ಗಾರ್ಡ್‌ಗೆ ಹಿಗ್ಗಾಮುಗ್ಗಾ ಥಳಿತ!

ಈ ರೀತಿ ಹಲ್ಲೆ ಖಂಡನೀಯ: ಯದುವೀರ್

ಮೋದಿ ಹಾಡು ರಚನೆ ಮಾಡಿದ್ದ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಗಂಭೀರ ಹಲ್ಲೆ ನಡೆಸಿರುವ ಕುರಿತು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರು ಪ್ರತಿಕ್ರಿಯಿಸಿದ್ದು,  ಚುನಾವಣೆಗಳು ಶಾಂತಿಯುತವಾಗಿ ನಡೆಯಬೇಕು. ಇಂಥ ಘಟನೆಗಳು ನಡೆದರೆ ಕಷ್ಟ ಅಗುತ್ತೆ. ಆದರ್ಶಪೂರ್ವಕವಾಗಿ ಚುನಾವಣೆಯಲ್ಲಿ ನಡೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಕಾನೂನು ಏನು ತೀರ್ಮಾನ ತೆಗೆದುಕೊಳ್ಳುತ್ತೆ ಕಾದು ನೋಡುತ್ತೇವೆ ನಂತರ ನಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

Latest Videos
Follow Us:
Download App:
  • android
  • ios