ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ; ಚಿಂತಕ ಪ್ರೊ.ಮಹೇಶ ಚಂದ್ರ ಗುರು ವಿರುದ್ಧ ದೂರು ದಾಖಲು

ಮೋದಿ ಬೆಂಬಲಿಗರನ್ನ ಕೆರಳಿಸುವಂತಹ ಹೇಳಿಕೆ ನೀಡಿ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಪ್ರೊ. ಮಹೇಶ್ ಚಂದ್ರ ಗುರು, ಇದೀಗ ಪ್ರಗತಿಪರ ಚಿಂತಕನ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರು ಎಸ್‌ಪಿ ಎನ್‌ ಸತೀಶ್‌ ದೂರು ಸಲ್ಲಿಸಿದ್ದಾರೆ.

Mandya BJP filed a complaint against  Prof Mahesh Chandra Guru his controversy stats about modi rav

ಮಂಡ್ಯ (ಏ.19): ರಾಜ್ಯದ ಪ್ರಗತಿಪರ ಚಿಂತಕರೆನಿಸಿಕೊಂಡಿರುವ ಪ್ರೊ ಮಹೇಶ್ ಚಂದ್ರ ಗುರು ಬಾಯ್ತೆರೆದರೆ ಬರೀ ವಿವಾದ ಮಾಡಿಕೊಂಡಿದ್ದೇ ಹೆಚ್ಚು. ಕೇಂದ್ರ ಸರ್ಕಾರ, ಮೋದಿ ವಿರುದ್ಧ ಹೇಳಿಕೆ ನೀಡುವುದರಲ್ಲಿ ಹೆಸರುವಾಸಿಯಾಗಿರುವ ಚಿಂತಕ ಇದೀಗ ನರೇಂದ್ರ ಮೋದಿಗೆ ಜಿಂದಾಬಾದ್‌ ಹೇಳುವವರು ಅಪ್ಪನಿಗೆ ಹುಟ್ಟಿದವರಲ್ಲ ಎಂದು ಹೇಳುವ ಮೂಲಕ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಹೌದು ಮೋದಿ ಬೆಂಬಲಿಗರನ್ನ ಕೆರಳಿಸುವಂತಹ ಹೇಳಿಕೆ ನೀಡಿ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಪ್ರೊ. ಮಹೇಶ್ ಚಂದ್ರ ಗುರು, ಇದೀಗ ಪ್ರಗತಿಪರ ಚಿಂತಕನ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರು ಎಸ್‌ಪಿ ಎನ್‌ ಸತೀಶ್‌ ದೂರು ಸಲ್ಲಿಸಿದ್ದಾರೆ.

ಹುಬ್ಬಳ್ಳಿ ನೇಹಾ ಹಿರೇಮಠ್ ಕೊಲೆ ಪ್ರಕರಣ ವೈಯಕ್ತಿಕ ಎಂಬ ಸಿಎಂ ಹೇಳಿಕೆಗೆ ಎಚ್‌ಡಿಕೆ ಕಿಡಿ

ಮಹೇಶ್ ಚಂದ್ರಗುರು ಹೇಳಿಕೆ ಖಂಡನೀಯವಾದುದು. ಅವರ ಹೇಳಿಕೆ ದೇಶದ ಪ್ರಧಾನಿ‌ ಹಾಗೂ ಕೋಟ್ಯಂತರ ಮತದಾರರಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಪ್ರೊ.ಮಹೇಶ್ ಚಂದ್ರಗುರು ಹೇಳಿಕೆಗೆ ಸಂಸದ ಆಕ್ರೋಶ:

ವಿಜಯಪುರ: ನರೇಂದ್ರ ಮೋದಿಗೆ  ಜಿಂದಾಬಾದ್ ಹೇಳುವವರು ಅಪ್ಪನಿಗೆ ಹುಟ್ಟಿದವರಲ್ಲ ಎಂಬ ಪ್ರಗತಿಪರ ಚಿಂತಕ ಮಹೇಶ ಚಂದ್ರಗುರು ಹೇಳಿಕೆಗೆ ಸಂಸದ ರಮೇಶ್ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿ ಅವರಿಗೆ ಈ ರೀತಿ ಹೇಳಿದವರಿಗೆ ಕಪಾಳಕ್ಕೆ ಹೊಡೆಯಬೇಕೆಂದು ಹೇಳಿದ್ದೇನೆ. ಇದೆಲ್ಲಾ ಥೂ.. ಬಾಳ ಕೆಳಮಟ್ಟದದ್ದು ಎಂದು ಅಸಮಾಧಾನ ಹೊರ ಹಾಕಿದರು.

 

ಇಂಡಿಯಾ ಕೂಟದ ನಾಯಕರು ಮೊಘಲರಂತೆ ವರ್ತಿಸುತ್ತಿದ್ದಾರೆ: ನರೇಂದ್ರ ಮೋದಿ

ಈ ಹಿಂದೆ ಇಂಥವೆಲ್ಲಾ ಆಗಿದ್ದವಾ? ಎಂದೂ ಆಗಿಲ್ಲಾ ಸಿಎಂ ಸಿದ್ದರಾಮಣ್ಣ ಕಾಲಕ್ಕೆ ಇವೆಲ್ಲ ಆಗುತ್ತಿವೆ. ಮೋದಿ ವಿರುದ್ಧ ಹೇಳಿಕೆ ನೀಡಿರುವ ತಲೆ ಸರಿ ಇದೆಯೋ ಇಲ್ಲವೋ ನೀವೇ ಹೇಳಿ ಮಾಧ್ಯಮದವರನ್ನ ಪ್ರಶ್ನೆಸಿದರು.

Latest Videos
Follow Us:
Download App:
  • android
  • ios