ರಾಮನಗರ: ಇ-ಸ್ವತ್ತು ತಂತ್ರಾಂಶಕ್ಕೆ ಕನ್ನ ಹಾಕಲು ಭೂಗ​ಳ್ಳ​ರ ಯತ್ನ

ಅನ​ಧಿ​ಕೃತ ಬಡಾ​ವ​ಣೆ​ಗಳ ಆಸ್ತಿಗೆ ಅಧಿ​ಕೃತ ಇ-ಖಾತಾ ನೀಡಲು ಗ್ರಾಮೀ​ಣಾ​ಭಿ​ವೃದ್ಧಿ ಮತ್ತು ಪಂಚಾ​ಯತ್‌ ರಾಜ್‌ ಇಲಾ​ಖೆಯ ಇ-ಸ್ವತ್ತು ತಂತ್ರಾಂಶಕ್ಕೆ ಕನ್ನ ಹಾಕುವ ಭೂಗಳ್ಳರ ಪ್ರಯ​ತ್ನಕ್ಕೆ ಇನ್ನೂ ಬ್ರೇಕ್‌ ಬಿದ್ದಿಲ್ಲ.

Land thieves attempt to steal e-asset software at ramanagar rav

-ಎಂ.ಅಫ್ರೋಜ್ ಖಾನ್‌

ರಾಮ​ನ​ಗರ (ಜು.16): ಅನ​ಧಿ​ಕೃತ ಬಡಾ​ವ​ಣೆ​ಗಳ ಆಸ್ತಿಗೆ ಅಧಿ​ಕೃತ ಇ-ಖಾತಾ ನೀಡಲು ಗ್ರಾಮೀ​ಣಾ​ಭಿ​ವೃದ್ಧಿ ಮತ್ತು ಪಂಚಾ​ಯತ್‌ ರಾಜ್‌ ಇಲಾ​ಖೆಯ ಇ-ಸ್ವತ್ತು ತಂತ್ರಾಂಶಕ್ಕೆ ಕನ್ನ ಹಾಕುವ ಭೂಗಳ್ಳರ ಪ್ರಯ​ತ್ನಕ್ಕೆ ಇನ್ನೂ ಬ್ರೇಕ್‌ ಬಿದ್ದಿಲ್ಲ.

ಎರಡು ವರ್ಷ​ಗಳ ಹಿಂದೆಯೇ ಇ-ಸ್ವತ್ತು ತಂತ್ರಾಂಶ​ವನ್ನು ದುರು​ಪ​ಯೋಗ ಪಡಿ​ಸಿ​ಕೊ​ಳ್ಳು​ತ್ತಿ​ರುವುದು ಬೆಳ​ಕಿಗೆ ಬಂದರೂ ಇಲಾಖೆ ಕಠಿಣ ಕ್ರಮ​ಕೈ​ಗೊ​ಳ್ಳ​ಲಿಲ್ಲ. ಇದರ ಪರಿ​ಣಾಮ ಭೂಗ​ಳ್ಳರು ಅನ​ಧಿ​ಕೃತ ಬಡಾ​ವ​ಣೆ​ಗ​ಳಿಗೆ ಅಧಿ​ಕೃ​ತ ಇ - ಖಾ​ತಾ ನೀಡುವ ದಂಧೆ ಎಗ್ಗಿ​ಲ್ಲದೆ ಸಾಗಿದೆ.

ಬೆಂ-ಮೈ ಹೈವೇನಲ್ಲಿ ಅಪಘಾತ ತಡೆಗೆ ಕ್ರಮವಹಿಸಿ: ಸಂಸದ ಸುರೇಶ್‌ ಸೂಚನೆ

ಜಿಲ್ಲಾ ಕೇಂದ್ರ ರಾಮ​ನ​ಗರದ ಸಮೀ​ಪ​ದ​ಲ್ಲಿ​ರುವ ಹರೀ​ಸಂದ್ರ ಗ್ರಾಮ ಪಂಚಾ​ಯಿ​ತಿಯ ಅಭಿ​ವೃದ್ಧಿ ಅಧಿ​ಕಾ​ರಿಯ ಇ-ಸ್ವತ್ತು ಲಾಗಿನ್‌ ಅನ್ನು ದುರ್ಬ​ಳಕೆ ಮಾಡಿಕೊ​ಳ್ಳಲು ಪ್ರಯ​ತ್ನಿ​ಸಿರುವುದು ಬೆಳ​ಕಿಗೆ ಬಂದಿದೆ. ಈ ಪ್ರಕ​ರಣ ಇ - ಸ್ವತ್ತು ತಂತ್ರಾಂಶಕ್ಕೆ ಕನ್ನ ಹಾಕಲು ವಿಫ​ಲ ಪ್ರಯ​ತ್ನ​ಗಳು ನಡೆ​ಯು​ತ್ತಿ​ರು​ವು​ದಕ್ಕೆ ಸಾಕ್ಷಿ​ಯಾ​ಗಿದೆ.

ರಾಜ​ಧಾನಿ ಬೆಂಗ​ಳೂ​ರಿಗೆ ಸನಿ​ಹ​ದ​ಲ್ಲಿ​ರುವ ರಾಮ​ನ​ಗರ ಜಿಲ್ಲೆ​ಯಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಹೀಗಾಗಿ ರಿಯಲ್‌ ಎಸ್ಟೆಟ್‌ ಉದ್ಯ​ಮಿ​ಗಳು ನಗರ ಮತ್ತು ಪಟ್ಟಣದ ಸುತ್ತ​ಮು​ತ್ತಲ ಗ್ರಾಮ ಪಂಚಾ​ಯಿ​ತಿ​ಗ​ಳಲ್ಲಿ ಭೂ ಪರಿ​ವ​ರ್ತನೆ ಮಾಡದೆ ಬಡಾ​ವಣೆಗ​ಳನ್ನು ನಿರ್ಮಾಣ ಮಾಡು​ತ್ತಿ​ದ್ದಾರೆ.

ನಿಯ​ಮ​ಗಳ ಪ್ರಕಾರ ಹೊಸ ಬಡಾವಣೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾ​ಧಿಕಾರದಿಂದ ಭೂ ಪರಿವರ್ತನೆಗೆ ಅನುಮತಿ ಪಡೆದು ಶೇ.55 ವಸತಿ ಉದ್ದೇಶಕ್ಕೆ, ಶೇ.10 ಉದ್ಯಾನವನ ಮತ್ತು ಉಳಿದ ಜಾಗವನ್ನು ರಸ್ತೆ ಸೇರಿದಂತೆ ನಾಗರಿಕ ಸೌಲಭ್ಯಕ್ಕೆ ಮೀಸಲಿಡಬೇಕು. ಆದರೆ, ನಗರ - ಪಟ್ಟಣ ಸುತ್ತ​ಮು​ತ್ತಲ ಗ್ರಾಮ ಪಂಚಾಯಿತಿಗಳಲ್ಲಿ ಭೂ ಪರಿವರ್ತನೆ ಮಾಡದೆ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ. ಈ ಸೈಟುಗಳಿಗೆ ಪಂಚಾಯಿತಿ ಮೂಲಕ ಇ-ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಇದರ ಪರಿಣಾಮ ರಿಯಲ… ಎಸ್ಟೆಚ್‌ ಉದ್ಯಮಿಗಳಿಗೆ ಹೆಚ್ಚಿನ ಬೆಲೆ ಸಿಕ್ಕಿ​ದರೆ, ಗ್ರಾಹಕರಿಗೆ ಬ್ಯಾಂಕ್‌ ಸಾಲ ಸಿಗುವುದಿಲ್ಲ.

ಇದನ್ನೇ ಬಂಡ​ವಾಳ ಮಾಡಿ​ಕೊಂಡಿ​ರುವ ಭೂಗ​ಳ್ಳರು ಇ- ಸ್ವತ್ತು ತಂತ್ರಾಂಶ​ವನ್ನು ದುರ್ಬ​ಳಕೆ ಮಾಡಿ​ಕೊ​ಳ್ಳು​ತ್ತಿ​ದ್ದಾ​ರೆ. ಅಲ್ಲದೆ, ಕೆಲ ಪಿಡಿಒ, ಗುತ್ತಿಗೆ ಕರ ವಸೂ​ಲಿ​ಗಾ​ರರು ಹಾಗೂ ಕಂಪ್ಯೂ​ಟರ್‌ ಆಪ​ರೇ​ಟರ್‌ ಗಳು ಹಣ​ದಾ​ಸೆಗೆ ಭೂಗ​ಳ್ಳ​ರೊಂದಿಗೆ ಶಾಮೀ​ಲಾ​ಗಿ​ದ್ದಾರೆ. ಒಂದು ಸೈಟಿಗೆ ಇಷ್ಟೆಂದು ಲಂಚ ಪಡೆದು ಬೇರೆ​ಯ​ವರ ಇ- ಸ್ವತ್ತು ಐಡಿ​ಯಲ್ಲಿ ಲಾಗಿನ್‌ ಆಗಿ ಇ - ಖಾತಾ ಕೊಡು​ತ್ತಿ​ದ್ದಾರೆ ಎಂಬ ಗಂಭೀರ ಆರೋ​ಪ​ಗಳು ಕೇಳಿ ಬರು​ತ್ತಲೇ ಇವೆ.

ಅಧಿ​ಕಾ​ರಿ​ಗ​ಳಿಗೆ ತಪ್ಪದ ಸಂಕಷ್ಟ:

ಇ-ಸ್ವತ್ತಿಗೆ ಲಾಗಿನ್‌ ಆಗಬೇಕಾದರೆ ಡಾಂಗಲ…, ರಹಸ್ಯ ಸಂಖ್ಯೆ ಮತ್ತು ಬೆರಳಚ್ಚು ಕೊಡಬೇಕು. ಸಾಮಾನ್ಯ ಜನರು ಲಾಗಿನ್‌ ಆಗಲು ಅಸಾಧ್ಯ. ಇದೆ​ಲ್ಲ​ದರ ಮಾಹಿತಿ ಉಳ್ಳ ಖದೀ​ಮರು ಎಲ್ಲಿಯೊ ಕುಳಿತು ಯಾವುದೊ ಗ್ರಾಮ ಪಂಚಾಯಿತಿ ಕಚೇರಿ ಇ-ಸ್ವತ್ತು ತಂತ್ರಾಂಶಕ್ಕೆ ಲಾಗಿನ್‌ ಆಗಿ ಮತ್ಯಾರಿಗೊ ಕಾನೂನು ಬಾಹಿರವಾಗಿ ಇ-ಖಾತಾ ಮಾಡಿಕೊಡುತ್ತಿ​ದ್ದಾರೆ. ಇದು ಸಂಬಂಧಪಟ್ಟತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಒ, ಎಫ್‌ಡಿಎ ಗಮನಕ್ಕೆ ಬರುತ್ತಿಲ್ಲ. ಆ​ದರೆ, ಮಾಡದ ತಪ್ಪಿಗೆ ಪ್ರಾಮಾ​ಣಿಕ ಅಧಿಕಾರಿಗಳು ಸಂಕಷ್ಟಕ್ಕೆ ಗುರಿಯಾಗುತ್ತಲೇ ಇದ್ದಾರೆ.

ಇ-ಸ್ವತ್ತು ವೆಬ…ಸೈಚ್‌ನ್ನು ರಾಷ್ಟಿ್ರಯ ಮಾಹಿತಿ ಕೇಂದ್ರ(ಎನ್‌ಐಸಿ) ನಿರ್ವಹಿಸುತ್ತಿದೆ. ಇ-ಸ್ವತ್ತು ದುರ್ಬಳಕೆ ಮಾಡಿಕೊಂಡ ಬಗ್ಗೆ ಎನ್‌ಐಸಿ ತಜ್ಞರು ಲಾಗಿನ್‌ ಐಡಿ, ಐಪಿ ವಿಳಾಸ ಪತ್ತೆ ಮಾಡಬಹುದು. ಅಧಿ​ಕಾ​ರಿ​ಗಳು ದೂರು ನೀಡಿ ಪೊಲೀ​ಸರ ತನಿ​ಖೆಗೆ ಸಹ​ಕಾರ ನೀಡಿ​ದಲ್ಲಿ ಇ-ಸ್ವತ್ತು ಅಕ್ರ​ಮದ ಹಿಂದಿ​ರುವ ದೊಡ್ಡ ಜಾಲ​ ಪತ್ತೆಯಾಗು​ವು​ದ​ರಲ್ಲಿ ಅನು​ಮಾನ ಇಲ್ಲ.

ಎರಡು ವರ್ಷದ ಹಿಂದೆಯೇ ಬೆಳ​ಕಿ​ಗೆ

2021ರ ಸೆ.17ರಿಂದ 21ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮ ಪಂಚಾ​ಯಿತಿ ಇ-ಸ್ವತ್ತನ್ನು ರಾಮ​ನ​ಗರ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕಂಪ್ಯೂಟರ್‌ ಆಪರೇಟರ್‌ ನೊಬ್ಬ ಬಿಡದಿ ಹೊಬಳಿ ಭೈರಮಂಗಲ ಗ್ರಾಮ ಪಂಚಾಯಿ​ತಿ​ಯಲ್ಲಿ ಕುಳಿತು ಪಿಡಿಒ ಮತ್ತು ಇಒ​ರ​ವರ ಇ-ಸ್ವತ್ತಿಗೆ ಲಾಗಿನ್‌ ಆಗಿ ಅಕ್ರಮವಾಗಿ 36 ಕಂದಾಯ ಸೈಟು​ಗ​ಳಿಗೆ ಇ-ಖಾತಾ ಮಾಡಿಕೊಟ್ಟಿದ್ದನು. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ಸಿಇಒ ಕೊಟ್ಟದೂರಿನ ಮೆರೆಗೆ ಈಶಾನ್ಯ ವಿಭಾಗ ಸಿಇಎನ್‌ ಪೊಲೀಸರು ಪ್ರಕ​ರ​ಣ​ದ ಆರೋ​ಪಿ​ಗ​ಳನ್ನು ಬಂಧಿ​ಸಿ​ದ್ದ​ರು. ಇದೀಗ ಹರೀ​ಸಂದ್ರ ಗ್ರಾಪಂನಲ್ಲಿ ಇ-ಸ್ವತ್ತು ದುರ್ಬ​ಳಕೆ ಪ್ರಯತ್ನ ನಡೆ​ದಿ​ರು​ವುದು ಬೆಳ​ಕಿಗೆ ಬಂದಿ​ದೆ.

ಪಿಡಿಒ ದೂರಿ​ನಲ್ಲಿ ಏನಿದೆ ?

ರಾಮ​ನ​ಗರ ತಾಲೂ​ಕಿನ ಹರೀ​ಸಂದ್ರ ಗ್ರಾಪಂ ಅಭಿ​ವೃದ್ಧಿ ಅಧಿ​ಕಾರಿ ಎಚ್‌.ಕೆ.​ದ​ಯಾ​ನಂದ ಸಾಗರ್‌ ಅವರು ಇ - ಸ್ವತ್ತು ಲಾಗಿನ್‌ ದುರ್ಬ​ಳಕೆ ಮಾಡಲು ಪ್ರಯ​ತ್ನಿ​ಸಿ​ರುವ ಕುರಿತು ಸಿಇ​ಎನ್‌ ಠಾಣೆ​ಯಲ್ಲಿ ದೂರು ದಾಖ​ಲಿ​ಸಿ​ದ್ದಾರೆ.

ಹರೀ​ಸಂದ್ರ ಗ್ರಾಪಂನಲ್ಲಿ 15 ತಿಂಗ​ಳಿಂದ ಪಿಡಿಒ ಆಗಿ ದಯಾ​ನಂದ ಸಾಗರ್‌ ಕರ್ತವ್ಯ ನಿರ್ವ​ಹಿ​ಸು​ತ್ತಿ​ದ್ದಾರೆ. ಕಳೆದ 11 ತಿಂಗ​ಳಿಂದ ವಾರ​ದಲ್ಲಿ 2 ದಿನ ಗರಿಷ್ಠ ಇ - ಸ್ವತ್ತಿಗೆ ಲಾಗಿನ್‌ ಮಿತಿ​ ವಿಫ​ಲ​ವಾ​ಗಿದೆ ಎಂಬ ಸಂದೇಶ ತೋರಿ​ಸು​ತ್ತಿತ್ತು. ನೆಟ್‌ ವರ್ಕ್ ಅಥವಾ ಸರ್ವರ್‌ ಸಮಸ್ಯೆ ಇರ​ಬೇ​ಕೆಂದು ಸುಮ್ಮ​ನಾ​ಗಿ​ದ್ದರು.

ಅನಾ​ಮ​ಧೇಯ ವ್ಯಕ್ತಿ​ಗಳು ಲಾಗಿನ್‌ ಐಡಿ ದುರ್ಬ​ಳಕೆ ಮಾಡಿ​ಕೊ​ಳ್ಳಲು ಪ್ರಯ​ತ್ನಿ​ಸುತ್ತಿ​ರುವ ಅನುಮಾನ ಬಂದ ಹಿನ್ನ​ಲೆ​ಯಲ್ಲಿ ಮೇಲಾ​ಧಿ​ಕಾ​ರಿ​ಗಳ ಗಮ​ನಕ್ಕೆ ತಂದಿ​ದ್ದಾರೆ. ಬೆಂಗ​ಳೂ​ರಿನ ಎನ್‌ ಐಸಿ ಮುಖ್ಯ​ ಕ​ಚೇ​ರಿ​ಯಲ್ಲಿ ಪರಿ​ಶೀ​ಲನೆ ಮಾಡಿ​ಸ​ಲಾ​ಗಿದೆ.

ದಲಿತರಿಗೆ ಮಾರಕವಾಗಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿಯ ಸೆಕ್ಷನ್‌ 7ಡಿ ರದ್ದು ಸ್ವಾಗತಾರ್ಹ: ಮತ್ತೀಕೆರೆ ಹನುಮಂತಯ್ಯ

ಆಗ ಹಲ​ವಾರು ಬಾರಿ ಬೇರೆ ಐಟಿ ಅಡ್ರೆಸ್‌ ಗಳ ಮೂಲಕ ತಮ್ಮ ಐಡಿಗೆ ಲಾಗಿನ್‌ ಆಗಿ ವಿಫ​ಲ​ವಾ​ಗಿ​ರು​ವುದು ಕಂಡು ಬಂದಿದೆ. ಈ ಹಿನ್ನೆ​ಲೆ​ಯಲ್ಲಿ ದಯಾ​ನಂದ ಸಾಗರ್‌ ಇ - ಸ್ವತ್ತು ಖಾತೆ ನೀಡಲು ತಮಗೆ ನೀಡಿದ್ದ ಐಡಿ​ಯನ್ನು ಭೂಗ​ಳ್ಳರು ದುರ್ಬ​ಳಕೆ ಮಾಡಿ​ಕೊಂಡು ಇ - ಸ್ವತ್ತು ಮಾಡಿ​ರುವ ಅನು​ಮಾ​ನ​ವಿದ್ದು, ಅಂತಹ ಭೂಗ​ಳ್ಳ​ರನ್ನು ಪತ್ತೆ ಮಾಡಿ ಕ್ರಮ​ಕೈ​ಗೊ​ಳ್ಳು​ವಂತೆ ದೂರಿ​ನಲ್ಲಿ ತಿಳಿ​ಸಿ​ದ್ದಾರೆ.
 

Latest Videos
Follow Us:
Download App:
  • android
  • ios