ದಲಿತರ ಪಾಲಿಗೆ ಮಾರಕವಾಗಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಸೆಕ್ಷನ್‌ 7ಡಿ ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ ಎಂದು ತಾಪಂ ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ತಿಳಿಸಿದ್ದಾರೆ.

ಚನ್ನಪಟ್ಟಣ (ಜು.10) ದಲಿತರ ಪಾಲಿಗೆ ಮಾರಕವಾಗಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಸೆಕ್ಷನ್‌ 7ಡಿ ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ ಎಂದು ತಾಪಂ ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ನೀಡಿರುವ ಅವರು, ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಸೆಕ್ಷನ್‌ 7ಡಿ ದಲಿತರ ಪಾಲಿಗೆ ಮಾರಕವಾಗಿತ್ತು. ಇದನ್ನು ರದ್ದುಗೊಳಿಸಬೇಕು ಎಂಬುದು ದಲಿತ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದು, ಇದನ್ನು ರದ್ದುಗೊಳಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿರುವುದು ಸಂತಸ ಮೂಡಿಸಿದೆ ಎಂದಿದ್ದಾರೆ.

ಪರಿಶಿಷ್ಟರಿಗೆ ಮೀಸಲಿಟ್ಟಹಣವನ್ನು ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಂದು ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಹೇಳುತ್ತದೆ. ಆದರೆ ಅದೇ ಕಾಯ್ದೆಯಲ್ಲಿನ ಸೆಕ್ಷನ್‌ 7(ಡಿ) ಇತರೆ ಸಾಮಾನ್ಯ ಯೋಜನೆಗಳಿಗೆ ಪರಿಶಿಷ್ಟರ ಹಣವನ್ನು ಬಳಸಲು ಅವಕಾಶ ಒದಗಿಸಿತ್ತು. ರಸ್ತೆ, ನೀರಾವರಿಯಂತಹ ಜನರಲ್‌ ಕಾರ್ಯಕ್ರಮಗಳಿಗೂ ಪರಿಶಿಷ್ಟರ ಅನುದಾನ ಹರಿದು ಹೋಗುತ್ತಿತ್ತು. ಹೆಸರಿಗೆ ಮಾತ್ರ ಪರಿಶಿಷ್ಟರಿಗೆ ಹಣ ಮೀಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಕೊಟ್ಟ ವಾಗ್ದಾನದಂತೆ ಸಿದ್ದರಾಮಯ್ಯ ಸರ್ಕಾರ ನಡೆಯಲಿ: ಶ್ರೀಕುಮಾರ

2011ರ ಜನಗಣತಿಯ ಅನ್ವಯ ಪರಿಶಿಷ್ಟಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಾಗಬೇಕು ಎಂಬ ನಿಟ್ಟಿನಲ್ಲಿ ಕಾಯ್ದೆಯನ್ನು 2013ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ತಂದಿತ್ತು. ಅದರ ಅನ್ವಯ ಪ್ರತಿ ಇಲಾಖೆಯೂ ಶೇ. 24.1ರಷ್ಟುಅನುದಾನವನ್ನು ಪರಿಶಿಷ್ಟರಿಗೆ ಮೀಸಲಿಡಬೇಕು. ಆದರೆ ಅದೇ ಕಾಯ್ದೆಯ ಸೆಕ್ಷನ್‌ 7ಡಿ ಪರಿಶಿಷ್ಟರಲ್ಲದವರೂ ಫಲಾನುಭವಿಗಳಾಗುವ ಯೋಜನೆಗಳಿಗೆ ಅನುದಾನ ದುರ್ಬಳಕೆಯಾಗಲು ಅವಕಾಶ ನೀಡಿತ್ತು. ಈ ಸೆಕ್ಷನ್‌ ರದ್ದುಗೊಳಿಸಿ ದಲಿತರ ಹಣ ದುರ್ಬಳಕೆಯಾಗುವುದನ್ನು ತಡೆಯಬೇಕೆಂದು ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಆಗ್ರಹಿಸುತ್ತಿದ್ದವು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಕಡಿತ ಮಾಡುವುದರ ಜೊತೆಗೆ ಸೆಕ್ಷನ್‌ 7ಡಿಯ ದುರುಪಯೋಗ ಹೆಚ್ಚಾಯಿತು. ಇದೀಗ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಹೆಚ್ಚುವರಿಯಾಗಿ ರೂ.4079 ಕೋಟಿಗಳನ್ನು ನೀಡುವ ಮುಖಾಂತರ 34,079 ಕೋಟಿಗೆ ಅನುದಾನ ಏರಿಕೆ ಮಾಡಿದ್ದಾರೆ. ಜತೆಗೆ ಅನ್ನದಾತರಿಗೆ ನೆರವಾಗುವ ನಿಟ್ಟಿನಲ್ಲಿ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಕೃಷಿ ಸಾಲ ನೀಡಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 377 ಕೋಟಿ ಕಾರ್ಪಸ್ ಫಂಡ್ ಪೊಲಿಟಿಕ್ಸ್, ಏನಿದು ಗಲಾಟೆ?