Asianet Suvarna News Asianet Suvarna News

ಕೆಎಸ್ಸಾರ್ಟಿಸಿ ‘ಗುಜರಿ ಟಾಯ್ಲೆಟ್‌’, ಮೊಬೈಲ್‌ ಫೀವರ್‌ ಕ್ಲಿನಿಕ್‌ಗೆ ಪ್ರಶಸ್ತಿಯ ಗರಿ

ಕೆಎಸ್‌ಆರ್‌ಟಿಸಿ ಗುಜರಿ ಬಸ್‌ ಬಳಸಿಕೊಂಡು ನಿರ್ಮಿಸಿದ್ದ ‘ಸ್ತ್ರೀ ಶೌಚಾಲಯ’ ಮತ್ತು ‘ಮೊಬೈಲ್‌ ಫೀವರ್‌ ಕ್ಲಿನಿಕ್‌’ಗೆ ‘ಸಮಾಜದ ಅಭಿವೃದ್ಧಿಗಾಗಿ ಸಾಮಾಜಿಕ ಕಳಕಳಿ’ ವರ್ಗದಲ್ಲಿ ‘ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆಗಳ ಅತ್ಯುತ್ತಮ ಪ್ರಶಸ್ತಿ’ ಲಭಿಸಿದೆ.

KSRTC Wins award for converting old buses to Toilet hls
Author
Bengaluru, First Published Oct 15, 2020, 11:40 AM IST

ಬೆಂಗಳೂರು (ಅ. 15): ಕೆಎಸ್‌ಆರ್‌ಟಿಸಿ ಗುಜರಿ ಬಸ್‌ ಬಳಸಿಕೊಂಡು ನಿರ್ಮಿಸಿದ್ದ ‘ಸ್ತ್ರೀ ಶೌಚಾಲಯ’ ಮತ್ತು ‘ಮೊಬೈಲ್‌ ಫೀವರ್‌ ಕ್ಲಿನಿಕ್‌’ಗೆ ‘ಸಮಾಜದ ಅಭಿವೃದ್ಧಿಗಾಗಿ ಸಾಮಾಜಿಕ ಕಳಕಳಿ’ ವರ್ಗದಲ್ಲಿ ‘ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆಗಳ ಅತ್ಯುತ್ತಮ ಪ್ರಶಸ್ತಿ’ ಲಭಿಸಿದೆ.

ವಲ್ಡ್‌ರ್‍ ಎಚ್‌ಆರ್‌ಡಿ ಕಾಂಗ್ರೆಸ್‌  ಮುಂಬೈನಲ್ಲಿ ಹಮ್ಮಿಕೊಂಡಿದ್ದ ವರ್ಚುವಲ್‌ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಮಾತನಾಡಿ, ಕೊರೋನಾ ಪರಿಸ್ಥಿತಿಯಲ್ಲಿ ವಾರಿಯರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ನಿಗಮದ ಸಿಬ್ಬಂದಿಗೆ ಈ ಪ್ರಶಸ್ತಿ ಅರ್ಪಿಸುವುದಾಗಿ ತಿಳಿಸಿದರು. ಅಂತೆಯೆ ಸ್ತ್ರೀ ಶೌಚಾಲಯ ಮತ್ತು ಮೊಬೈಲ್‌ ಫೀವರ್‌ ಕ್ಲಿನಿಕ್‌ಗೆ ತಗುಲಿದ ವೆಚ್ಚ, ಅದರ ಉಪಯೋಗ ಸೇರಿದಂತೆ ಇತರೆ ಮಾಹಿತಿ ವಿನಿಮಯ ಮಾಡಿಕೊಂಡರು.

KSRTC ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ ನ್ಯೂಸ್

ಕೊರಿಯರ್‌ನಲ್ಲಿ ಬಂದ ಫಲಕ: ಕೊರೋನಾ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮುಂಬೈ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಹೀಗಾಗಿ ಆಯೋಜಕರು ಕಾರ್ಯಕ್ರಮಕ್ಕೂ ಮುನ್ನವೇ ಕೊರಿಯರ್‌ ಮೂಲಕ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ನಿಗಮಕ್ಕೆ ತಲುಪಿಸಿದ್ದರು.

Follow Us:
Download App:
  • android
  • ios