ಬಸ್‌ ಚಾಲಕರ ಕಷ್ಟಗಳನ್ನ ಸರ್ಕಾರಕ್ಕೆ ತಿಳಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ್ ಸುಬ್ಬರಾವ್. 

ಬೆಂಗಳೂರು(ಜೂ.15): ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಅವರು ಪತ್ರ ಬರೆದಿದ್ದಾರೆ. 

Add Asianetnews Kannada as a Preferred SourcegooglePreferred

ಬಸ್‌ ಚಾಲಕರ ಕಷ್ಟಗಳನ್ನ ಸರ್ಕಾರಕ್ಕೆ ತಿಳಿಸಲು ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರವನ್ನ ಬರೆದಿದ್ದಾರೆ. 

Congress guarantee: ‘ಉಚಿತ ಟಿಕೆಟ್‌’ ಕೊಡದಿದ್ದರೆ ಕಂಡಕ್ಟರ್‌ ಮೇಲೆ ಶಿಸ್ತುಕ್ರಮ!

ಅನಂತ್ ಸುಬ್ಬರಾವ್ ಸಿಎಂಗೆ ಬರೆದಿರುವ ಪತ್ರದಲ್ಲಿ ಏನಿದೆ?

1. ಉಚಿತ ಯೋಜನೆಯಿಂದ ಪ್ರಯಾಣಿಸುತ್ತಿರುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿದೆ. ಈ ಹಿನ್ನಲೆಯಲ್ಲಿ ನಿಗಮಗಳ ವಾಹನಗಳ ಸಂಖ್ಯೆಯನ್ನು ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿಸಬೇಕು. 

2. ಕೆಲವು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಮಹಿಳೆಯರು ಈ ವಾಹನಗಳನ್ನು ಬಿಟ್ಟು ನಮ್ಮ ಸಂಸ್ಥೆಯ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಆದ ಕಾರಣ ಖಾಸಗಿ ಬಸ್‌ಗಳಲ್ಲಿ ಸಂಚರಿಸುತ್ತಿರುವ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಅಲ್ಲಿ ಕೆಲಸ ಮಾಡುವ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಮತ್ತಿತರ ಸಿಬ್ಬಂದಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಖಾಸಗಿ ವಾಹನಗಳಿಗೆ ಬಂಡವಾಳ ಹೂಡಿರುವ ಮಾಲೀಕರೂ ಕೂಡ ಸಂಕಷ್ಟದಲ್ಲಿದ್ದಾರೆ. 

3. ಶಕ್ತಿ ಯೋಜನೆಯಿಂದ ಉಂಟಾಗಿರುವ ಬಸ್‌ಗಳ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಸಾರಿಗೆ ನಿಗಮಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ವಾಹನಗಳ ಕೊರತೆ ಇರುವುದರಿಂದ ಬೇರುಮಟ್ಟದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಿಸಲು ಇಕಟ್ಟಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. 

ಕೋಲಾರ: ಕಾಂಗ್ರೆಸ್ ಗ್ಯಾರಂಟಿಯಿಂದಾಗಿ ಖಾಸಗಿ ಬಸ್ ಮಾಲೀಕರಿಗೆ ಆತಂಕ..!

4. ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಶ್ರೀನಿವಾಸಮೂರ್ತಿ ಏಕಸದಸ್ಯ ಸಮಿತಿಯು ತನ್ನ ವರದಿ ಮತ್ತು ಶಿಫಾರಸುಗಳಲ್ಲಿ ಕೆಎಸ್‌ಆರ್‌ಟಿಸಿಯ ಒಂದೇ ಒಂದು ಬಸ್ ಹೋಗದಿರುವಂತಹ 2500ಕ್ಕೂ ಹೆಚ್ಚು ಹಳ್ಳಿಗಳನ್ನು ಗುರುತಿಸಿದ್ದಾರೆ. ಈ ಹಳ್ಳಿಗಳಿಗೂ ನಮ್ಮ ನಿಗಮಗಳು ಬಸ್‌ ವ್ಯವಸ್ಥೆ ಮಾಡಬೇಕೆಂದು ಶಿಫಾರಸು ಮಾಡಿದ್ದಾರೆ. ನೀವು ಕಳೆದ ಬಾರಿ ಸಿಎಂ ಆಗಿದ್ದಾಗ ರಾಜ್ಯದ ಜನತೆಗೆ ಹೆಚ್ಚಿನ ಹಾಗೂ ಸಮರ್ಪಕ ಸಾರಿಗೆ ಸೇವಕರನ್ನು ಸಾರಿಗೆ ನಿಗಮಗಳ ಮೂಲಕ ಒದಗಿಸಲು Comprehensive Area Scheme ತಂದಿದ್ದರೆ. ಇದರ ಪ್ರಕಾರ ಯಾವುದೇ ವಿಧವಾದ ಸಾರಿಗೆ ಸೇವೆಗಳನ್ನು ಒದಗಿಸುವ ಹಕ್ಕು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಮಾತ್ರ ಮೀಸಲಾಗಿರುತ್ತದೆ. ನಂತರ ಬಂದ ಸರ್ಕಾರ ಈ ಅಧಿಸೂಚನೆಗೆ ಹಲವು ಮಾರ್ಚ್ 29 ರಂದು ಹೊರಡಿಸಿದ ಅಧಿಸೂಚನೆ ಹೊರಡಿಸಿದೆ. ತಾವು ತಂದಿದ್ದ ಅಧಿಸೂಚನೆಯ ಅಂಶ ಮತ್ತು ಉದ್ದೇಶವನ್ನು ಗಾಳಿಗೆ ತೂರಿ ನಿಗಮಗಳಿಗೆ ಆದಾಯ ಬರುತ್ತಿದ್ದ 41 ಮಾರ್ಗಗಳನ್ನು ಖಾಸಗಿಯವರಿಗೆ ಒಪ್ಪಿಸುವ ವ್ಯವಸ್ಥೆ ಮಾಡಿತು. ನಂತ್ರ ನಗರ ಪ್ರದೇಶಗಳಲ್ಲೂ 20 ಕಿಲೋಮೀಟರ್ ವರೆಗೆ ಖಾಸಗಿ ವಾಹನಗಳಿಗೆ ಅನುಮತಿ ನೀಡಿತು. ಈಗ ತಾವು ಹೊರಡಿಸಿದ್ದ ಅಧಿಸೂಚನೆಯನ್ನು ಜಾರಿ ಮಾಡುವ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು.

ಖಾಸಗಿ ಸಾರಿಗೆ ಬಸ್‌ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮ ತೀಘ್ರವಾಗಿ ಆಗಬೇಕು. 1975ರಲ್ಲಿ ದೇವರಾಜ ಅರಸ್ ರವರು ಕಾಂಟ್ರಾಕ್ಟ್ ಕ್ಯಾರೇಜಸ್ ಆಬಾಲಿಷನ್ ಆಕ್ಟ್ 1976 ತಂದಿದ್ರು. ಇದು ಕೆಎಸ್‌ಆರ್‌ಟಿಸಿ ದೊಡ್ಡದಾಗಿ ಬೆಳೆದು ರಾಜ್ಯದ ಜನರಿಗೆ ಬಹಳ ಉತ್ತಮವಾದ ಸೇವೆ ಕೊಡಲು ಸಾಧ್ಯವಾಯಿತು. ಸಾರಿಗೆ ನಿಗಮಗಳಲ್ಲಿ ಈಗ 16,969 ಹುದ್ದೆಗಳು (ಜನವರಿ 2022ರಂತೆ) ಖಾಲಿ ಇದೆ. ಈ ಹಿನ್ನಲೆಯಲ್ಲಿ ಹುದ್ದೆಗಳನ್ನ ಭರ್ತಿ ಮಾಡಲು ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಅನಂತ್ ಸುಬ್ಬರಾವ್ ಮನವಿ ಮಾಡಿದ್ದಾರೆ.