ಈ ವರ್ಷದ ಸೆ. 30ರೊಳಗೆ 38 ತಿಂಗಳ ಅವಧಿಯಲ್ಲಿ ನಿವೃತ್ತರಾದ ನೌಕರರ ಪಟ್ಟಿ, ಅವರಿಗೆ ಪಾವತಿಸಬೇಕಾದ ವೇತನ ಹೆಚ್ಚಳದ ಹಿಂಬಾಕಿಯ ಮೊತ್ತದ ಪಟ್ಟಿ ಸಿದ್ದಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.  

ಬೆಂಗಳೂರು(ಜೂ.29):  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನಿವೃತ್ತ ನೌಕರರ ಹಲವು ದಿನಗಳ ಬೇಡಿಕೆ ಈಡೇರಿಸಲು ನಿಗಮಗಳು ಮುಂದಾಗಿದ್ದು, ನಿವೃತ್ತ ನೌಕರರಿಗೆ ಬಾಕಿ ಇರುವ ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆದೇಶಿಸಲಾಗಿದೆ. 

Add Asianetnews Kannada as a Preferred SourcegooglePreferred

ಸಾರಿಗೆ ನೌಕರರಿಗೆ 2020ರ ಜ.1ರಿಂದ ಶೇ.15ರಷ್ಟು ವೇತನ ಪರಿಷ್ಕರಣೆ ಮಾಡಲಾಗಿದೆ. ಆದರೆ, 2023ರ ಮಾ. 1ರ ನಂತರ ವೇತನ ಪರಿಷ್ಕರಣೆ ಮೊತ್ತ ಪಾವತಿಸಬೇಕಿದೆ. ಉಳಿದಂತೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಪಾವತಿಯಾಗಿರಲಿಲ್ಲ. ಈ ಅವಧಿಯಲ್ಲಿ ನೂರಾರು ನೌಕರರು ನಿವೃತ್ತರಾಗಿದ್ದು, ಅವರಿಗೂ ಹಿಂಬಾಕಿ ಪಾವತಿಸಬೇಕಿತ್ತು. ಇದೀಗ ಹಾಲಿ ಕರ್ತವ್ಯದಲ್ಲಿರುವ ನೌಕರರನ್ನು ಹೊರತುಪಡಿಸಿ 2020ರ ಜ. 1ರಿಂದ 2023ರ ಫೆ. 28ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, 2024-25ನೇ ಸಾಲಿನ ಆರ್ಥಿಕ ವರ್ಷದ ಅಂತ್ಯದೊಳಗೆ ವೇತನ ಹೆಚ್ಚಳದ ಹಿಂಬಾಕಿ ಪಾವತಿಸುವ ಕುರಿತು ಎಲ್ಲ ನಾಲ್ಕೂ ನಿಗಮಗಳ ಪರವಾಗಿ ಕೆಎಸ್ಸಾರ್ಟಿಸಿ ಆದೇಶಿಸಿದೆ. 

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣ ದರ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಅಲ್ಲದೆ, ಈ ವರ್ಷದ ಸೆ. 30ರೊಳಗೆ 38 ತಿಂಗಳ ಅವಧಿಯಲ್ಲಿ ನಿವೃತ್ತರಾದ ನೌಕರರ ಪಟ್ಟಿ, ಅವರಿಗೆ ಪಾವತಿಸಬೇಕಾದ ವೇತನ ಹೆಚ್ಚಳದ ಹಿಂಬಾಕಿಯ ಮೊತ್ತದ ಪಟ್ಟಿ ಸಿದ್ದಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕ್ರಮದಿಂದಾಗಿ ನಿವೃತ್ತ ನೌಕರರು 2019ರ ಡಿ. 31 ರವರೆಗೆ ಪಡೆಯುತ್ತಿದ್ದ ಮೂಲ ವೇತನದಲ್ಲಿ ಶೇ. 15ರಷ್ಟು ಹೆಚ್ಚಳವಾಗಲಿದೆ. ಈ ಕ್ರಮದಿಂದಾಗಿ ನಾಲ್ಕೂ ಸಾರಿಗೆ ನಿಗಮಗಳಿಗೆ 220 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.