Asianet Suvarna News Asianet Suvarna News

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣ ದರ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದರೆ ನೀವು ಮಾತನಾಡುವುದಿಲ್ಲ. ಆದರೆ ನಾವು ಬೆಲೆ ಏರಿಸಿದರೆ ಪ್ರಶ್ನಿಸುತ್ತೀರಿ. ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ. ಕಳೆದ 10 ವರ್ಷಗಳ ಹಿಂದೆ 72 ಇದ್ದ ಪೆಟ್ರೋಲ್ ದರ ಇದೀಗ ಲೀಟರ್‌ಗೆ ₹100 ಆಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

No Proposal to Increase Bus Fare in Karnataka Says CM  Siddaramaiah grg
Author
First Published Jun 21, 2024, 6:22 AM IST

ಬಳ್ಳಾರಿ(ಜೂ.21): ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಸ್ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.  ಸಂಡೂರು ತಾಲೂಕಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಬಸ್ ದರ ಏರಿಕೆ ಮಾಡುವುದಿಲ್ಲ ಎಂದರು. 

ಗ್ಯಾರಂಟಿಗಾಗಿಯೇ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಡೀಸೆಲ್-ಪೆಟ್ರೋಲ್ ಬೆಲೆ ಏರಿಸಬೇಕಾಯಿತು ಎಂದು ಸ್ಪಷ್ಟನೆ ನೀಡಿದ ಅವರು, ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ ₹65 ಸಾವಿರ ಕೋಟಿ ನೀಡಬೇಕು. ಉಳಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಇದಕ್ಕೆಲ್ಲ ಸಂಪನ್ಮೂಲ ಸಂಗ್ರಹಿ ಸಬೇಕಲ್ಲವೇ? ಎಂದರು. 

ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಶೀಘ್ರವೇ ಬಸ್ ಪ್ರಯಾಣದರ ಹೆಚ್ಚಳ?

ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದರೆ ನೀವು ಮಾತನಾಡುವುದಿಲ್ಲ. ಆದರೆ ನಾವು ಬೆಲೆ ಏರಿಸಿದರೆ ಪ್ರಶ್ನಿಸುತ್ತೀರಿ. ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ. ಕಳೆದ 10 ವರ್ಷಗಳ ಹಿಂದೆ 72 ಇದ್ದ ಪೆಟ್ರೋಲ್ ದರ ಇದೀಗ ಲೀಟರ್‌ಗೆ ₹100 ಆಗಿದೆ ಎಂದರು.

Latest Videos
Follow Us:
Download App:
  • android
  • ios