ಆಯುಧ ಪೂಜೆಗೆ ಸರ್ಕಾರದ ಬಿಡಿಗಾಸು, ಆಕ್ರೋಶದ ಬೆನ್ನಲ್ಲೇ ಮೊತ್ತ ಹೆಚ್ಚಿಸಿದ ಕೆಎಸ್‌ಆರ್‌ಟಿಸಿ!
ಆಯುಧ ಪೂಜೆಯ ವೇಳೆ ಬಸ್‌ಗಳ ಪೂಜೆಗಾಗಿ ಕೆಎಸ್‌ಆರ್‌ಟಿಸಿ ಕೇವಲ 100 ರೂಪಾಯಿ ಬಿಡುಗಡೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ನೌಕರರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಹಳೆಯ ಆದೇಶವನ್ನು ಹಿಂಪಡೆದು, ಮೊತ್ತ ಹೆಚ್ಚಿಗೆ ಮಾಡಿ ಹೊಸ ಆದೇಶ ಹೊರಡಿಸಿದೆ.
ಬೆಂಗಳೂರು (ಅ.9): ಇಡೀ ರಾಜ್ಯದೆಲ್ಲೆಡೆ ಆಯುಧ ಪೂಜೆ ಹಾಗೂ ದಸರಾ ಸಂಭ್ರಮವಿದೆ. ಈ ನಡುವೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಪೂಜೆಗಾಗಿ ಕೇವಲ 100 ರೂಪಾಯಿಯನ್ನು ನೌಕರರಿಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲಿಯೇ ಎಚ್ಚೆತ್ತಿರುವ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಆಯುಧ ಪೂಜೆಯ ಬಾಬ್ತು ಏರಿಕೆ ಮಾಡುವ ಆದೇಶ ನೀಡಿದ್ದಾರೆ. ಆಯುಧ ಪೂಜೆಯ ವೇಳೆ ಬಸ್‌ಗಳ ಪೂಜೆಗಾಗಿ ಕೆಎಸ್‌ಆರ್‌ಟಿಸಿ ಕೇವಲ 100 ರೂಪಾಯಿ ಬಿಡುಗಡೆ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ನೌಕರರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಹಳೆಯ ಆದೇಶವನ್ನು ಹಿಂಪಡೆದು, ಮೊತ್ತ ಹೆಚ್ಚಿಗೆ ಮಾಡಿ ಹೊಸ ಆದೇಶ ಹೊರಡಿಸಿದೆ. 100 ರೂಪಾಯಿಯ ಬದಲಿಗೆ ಪ್ರತಿ ಬಸ್‌ಗೆ 250 ರೂಪಾಯಿ ಹಣವನ್ನು ನೀಡಲು ಕೆಎಸ್‌ಆರ್‌ಟಿಸಿ ತೀರ್ಮಾನ ಮಾಡಿದೆ.
ಬಸ್ ಪೂಜೆ ಹಾಗೂ ಅಲಂಕಾರಕ್ಕಾಗಿ ಕೇವಲ 100 ರೂಪಾಯಿ ನೀಡಿದ್ದರ ಬಗ್ಗೆ ಸುದ್ದಿಯಾಗುತ್ತಲೇ ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಘಟಕದಲ್ಲಿ ಸುಮಾರು 100 ರಿಂದ 500 ಬಸ್ಸುಗಳು ಇದ್ದು ಒಂದು ಬಸ್ಸಿಗೆ ರೂ. 100 ಎಂದು ಒಂದು ಘಟಕಕ್ಕೆ / ಕಾರ್ಯಾಗಾರಕ್ಕೆ ನೀಡಲಾಗುತ್ತದೆ. 2008 ರವರೆಗೂ ಪ್ರತಿ ಬಸ್‌ಗಳಿಗೆ ಸಾರಿಗೆ ಸಂಸ್ಥೆ 10 ರೂಪಾಯಿ ನೀಡುತ್ತಿತ್ತು. 2009 ರಲ್ಲಿ ಪ್ರತಿ ಬಸ್ಸಿಗೆ ರೂ 30 ಕ್ಕೆ ಏರಿಕೆ ಮಾಡಲಾಗಿತ್ತು. 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ , 2017 ರಲ್ಲಿ ಪ್ರತಿ ಬಸ್ಸಿಗೆ ರೂ.100 ಕ್ಕೆ ಏರಿಕೆ ಮಾಡಲಾಗಿತ್ತು.
ಕೇವಲ 250 ರೂಪಾಯಿಗೆ ಕೆಲಸ ಮಾಡ್ತಿದ್ದ ಹುಡುಗ 25 ಸಾವಿರ ಕೋಟಿಗೆ ಒಡೆಯನಾಗಿದ್ದು ಹೇಗೆ?
2023 ರವರೆಗೂ ಈ ಮೊತ್ತ 100 ರೂಪಾಯಿಯೇ ಆಗಿತ್ತು. ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ ಬಸ್ಸಿಗೆ ಈಗ ನೀಡಲಾಗುತ್ತಿರುವ ರೂ.100 ಅನ್ನು ರೂ.250 ಕ್ಕೆ ಹೆಚ್ಚಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶ ಹೊರಡಿಸಿದೆ.
Breaking: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ!
ಇದಕ್ಕೂ ಮುನ್ನ ನೀಡಿದ ಆದೇಶದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಪುಡಿಗಾಸು ಕೊಟ್ಟು ಸಾರಿಗೆ ನಿಗಮ ಕೈತೊಳೆದುಕೊಂಡಿತ್ತು. ಆಯುಧ ಪೂಜೆ ಸ್ಚಚ್ಚತೆ,ಅಲಂಕಾರಕ್ಕೆ ಕೇವಲ 100 ರೂಪಾಯಿ ನೀಡಿತ್ತು. ಪೂಜೆಗೆ ತಲಾ ಒಂದು ಬಸ್‌ಗೆ ಕೇವಲ 100 ರೂಪಾಯಿ ನೀಡಲಾಗಿತ್ತು. ಪ್ರತಿಯೊಂದು ಬಸ್‌ನ ಸ್ಚಚ್ಚತೆ ಅಲಂಕಾರ ಮತ್ತು ನಿರ್ವಹಣೆಗೆ ನೀಡಿದ ಹಣ ಕಡಿಮೆ ಎನ್ನುವ ಆರೋಪ ಕೇಳಿ ಬಂದಿತ್ತು. ಆಡಳಿತ ಮಂಡಳಿಯ ಜಿಪುಣತೆಗೆ ಕೆಎಸ್ಆರ್ಟಿಸಿ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಬಿಡುಗಡೆ ಮಾಡಿರುವ 100 ರೂ ನಲ್ಲಿ ಒಂದು ಬಸ್ ಗೆ ಪೂಜೆ ಮಾಡೋಕೆ ಆಗುತ್ತಾ..? ಹಬ್ಬದ ದಿನ 100ರೂಗೆ ಹೇಗೆ ಪೂಜೆ ಮಾಡೋದು ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದರು. ಕೇವಲ ಬಿಡಿಕಾಸಿನಲ್ಲಿ ಬಸ್‌ಗೆ ಪೂಜೆ ಮಾಡುವುದು ಹೇಗೆ ಅಂತ ನೌಕರರು ಅಸಮಾಧಾನ ತೋಡಿಕೊಂಡಿದ್ದರು. ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1000 ಹಾಗೂ ಪ್ರಾದೇಶಿಕ ಕಾರ್ಯಾಗಾರಕ್ಕೆ 5000 ಸಹ ಬಿಡುಗಡೆ ಮಾಡಲಾಗಿತ್ತು. ಎಲ್ಲಾ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿರುವಂತೆ ಅರ್ಥಪೂರ್ಣ ವಾಗಿ ಆಯುಧ ಪೂಜೆಯನ್ನು ಮಾಡಲು ಕೆಎಸ್ಆರ್ಟಿಸಿ ಆದೇಶ ನೀಡಿತ್ತು.