Asianet Suvarna News Asianet Suvarna News

ಬೆಂಗಳೂರು- ಮೈಸೂರು ನಡುವೆ ವಾಣಿಜ್ಯ ಸೇವೆ ಆರಂಭಿಸಿದ KSRTC ಎಲೆಕ್ಟ್ರಿಕ್ ಬಸ್: ಏನೆಲ್ಲಾ ಸೌಲಭ್ಯವಿದೆ..?

ಬೆಂಗಳೂರು ಮೈಸೂರು ನಡುವೆ ಸಂಚಾರ ಆರಂಭಿಸಿದ ಎಲೆಕ್ಟ್ರಿಕ್‌ ಬಸ್‌
ಒಂದು ಚಾರ್ಜ್‌ನಲ್ಲಿ 150 ಕಿ.ಮೀ ದೂರದ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ ಎಲೆಕ್ಟ್ರಿಕ್‌ ಬಸ್‌
ಒಂದು ಮಾರ್ಗದಲ್ಲಿ 300 ರೂ. ಪ್ರಯಾಣದ ದರ ನಿಗದಿ

KSRTC first electric bus started to economic service sat
Author
First Published Jan 16, 2023, 11:39 AM IST

ಬೆಂಗಳೂರು (ಜ.16): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್‌ಆರ್‌ಟಿಸಿ) ಅಧಿಕೃತವಾಗಿ ಬೆಂಗಳೂರು- ಮೈಸೂರು ಮಾರ್ಗದಲ್ಲಿ ಇವಿ ಪವರ್ ಪ್ಲಸ್  ಬಸ್ (ಎಲೆಕ್ಟಕ್ರಿಕ್‌) ಸಂಚಾರಕ್ಕೆ ಚಾಲನೆ ನೀಡಲಾಯಿತು. 

ಇಂದು ಬೆಳಿಗ್ಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರು-  ಮೈಸೂರು ಮಾರ್ಗದಲ್ಲಿ ಮೊದಲ  ಬಾರಿಗೆ   ಇವಿ ಪವರ್ ಪ್ಲಸ್  (EV Powre plus Bus) ಬಸ್ ಸಾರ್ವಜನಿಕ ಪ್ರಯಾಣಿಕರಿಗಾಗಿ ಸೇವೆ ಪ್ರಾರಂಭಿಸಿದೆ. ಮೆಜೆಸ್ಟಿಕ್ ಕೆಎಸ್ ಆರ್ ಟಿಸಿ ನಿಲ್ಧಾಣದ ಡಿಸಿಪಿ ಚಂದ್ರಶೇಖರ್ (DCP Chandrashekhar)  ಹಾಗೂ ವಿಭಾಗೀಯ ನಿಯಂತ್ರಣಧಿಕಾರಿ ಲಕ್ಷ್ಮಣ್ (Lakshman) ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೂಗುಚ್ಚ ನೀಡಿ ಸ್ವಾಗತಿಸಿ, ಶುಭ ಕೋರಲಾಯಿತು ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಂಪೇಗೌಡ ಬಸ್ ನಿಲ್ದಾಣ  ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಇಂದಿನಿಂದ ಮೊದಲ ಬಾರಿಗೆ KSRTC ಎಲೆಕ್ಟ್ರಿಕ್ ಬಸ್ ರಸ್ತೆಗಿಳಿದು ಸೇವೆ ನೀಡಲಿದೆ.

KSRTC Electric Bus: ತಿಂಗಳಲ್ಲಿ 7 ಜಿಲ್ಲೆಗೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್‌ ಬಸ್‌

ಮುಂದಿನ 3 ತಿಂಗಳಲ್ಲಿ 50 ಬಸ್‌ ಸಂಚಾರ: ಸುಮಾರು 150 ಕಿ.ಮೀ. ದೂರವನ್ನು ಹೊಂದಿರುವ ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರು  (Bengaluru- Mysuru) ನಡುವೆ ಎಲೆಕ್ಟ್ರಿಕ್‌ ಬಸ್‌ವೊಂದನ್ನು ಸಂಚಾರಕ್ಕೆ ಆರಂಭಿಸಲಾಗಿದೆ. ಈ ಮೂಲಕ ಇಂಧನ ರಹಿತವಾದ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಾಡುವ ದೃಷ್ಟಿಯಿಂದ ಇವಿ ಪವರ್‌ಪ್ಲಸ್‌ ಬಸ್‌ ಸಂಚಾರ ತೀವ್ರ ಅನುಕೂಲಾಗಲಿದೆ. ಇನ್ನು ಮುಂದಿನ ಮೂರು ತಿಂಗಳಲ್ಲಿ 50 ಎಲೆಕ್ಟ್ರಿಕ್ ಬಸ್ ಸಂಚಾರ ಮಾಡಲಿವೆ. ಈ ಬಸ್‌ಗಳನ್ನು ಬೆಂಗಳೂರು-ತುಮಕೂರು, ಬೆಂಗಳೂರು- ಕೋಲಾರ, ಬೆಂಗಳೂರು-ಮೈಸೂರು, ಬೆಂಗಳೂರು-ಚಿಕ್ಕಮಗಳೂರು ಮಾರ್ಗದಲ್ಲಿ ಸಂಚಾರಕ್ಕೆ ಬಳಸಲಾಗುತ್ತದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇಂದಿನಿಂದ ವಾಣಿಜ್ಯ ಸಂಚಾರ ಸೇವೆ: ಕೆಎಸ್‌ಆರ್‌ಟಿಸಿಗೆ ಕಳೆದ ಒಂದು ವಾರದ ಹಿಂದೆಯೇ ಎಲೆಕ್ಟ್ರಿಕ್‌ ಬಸ್‌ಗಳು ಡಿಪೋಗೆ ಆಗಮಿಸಿದ್ದವು. ಆದರೆ, ಕಳೆದ ಒಂದು ವಾರದಿಂದ ಡಿಪೋನಲ್ಲೇ ಪ್ರಾಯೋಗಿಕವಾಗಿ ಬಸ್‌ಗಳನ್ನು ಓಡಾಟ  ನಡೆಸಲಾಗುತ್ತಿತ್ತು. ಮೊನ್ನೆ ಎಲೆಕ್ಟ್ರಿಕ್ ಬಸ್ ಅನ್ನು ಬೆಂಗಳೂರಿನಿಂದ ರಾಮನಗರಕ್ಕೆ (Bengaluru-Ramanagara) ಪ್ರಾಯೋಗಿಕವಾಗಿ ಸಂಚಾರಕ್ಕೆ ಬಿಡಲಾಗಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಮೈಸೂರು - ಬೆಂಗಳೂರು ನಡುವೆ ಮೊದಲ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಲಾಗಿದೆ. ಇದು ಎಲೆಕ್ಟ್ರಿಕ್‌ ಬಸ್‌ನ ಮೊದಲ ವಾಣಿಜ್ಯ ಸೇವೆಯಾಗಿದೆ.

KSRTC Electric Bus: ಕೆಎಸ್ಆರ್‌ಟಿಸಿಗೆ ಎಂಟ್ರಿ ಕೊಟ್ಟ ಮೊದಲ ಎಲೆಕ್ಟ್ರಿಕ್ ಬಸ್

300 ರೂ. ಪ್ರಯಾಣದ ದರ ನಿಗದಿ:  ಎಲೆಕ್ಟ್ರಿಕ್‌ ಬಸ್‌ ಬೆಂಗಳೂರು ಮೈಸೂರು ನಡುವೆ ವೇಗದ ಸಂಚಾರಕ್ಕೆ ಬಳಸಲು ಆದ್ಯತೆ ನೀಡಲಾಗುತ್ತಿದೆ. ಮೈಸೂರು ಬೆಂಗಳೂರು ನಡುವೆ ನಾನ್ ಸ್ಟಾಪ್ (Non-stop) ಆಗಿ ಎಲೆಕ್ಟ್ರಿಕ್ ಬಸ್ ಸೇವೆ ನೀಡಲಿದೆ. ಸಾಮಾನ್ಯ ಸಾರಿಗೆಗಿಂತ ಹೆಚ್ಚು  ಹಾಗೂ ಮಲ್ಟಿ ಆ್ಯಕ್ಸಲ್ ಬಸ್ (Multi Axcel Bus) ದರಕ್ಕಿಂತ ಕಡಿಮೆ ದರ ನಿಗದಿ ಮಾಡಲಾಗುತ್ತದೆ. ಪ್ರಯಾಣ ದರ 300 ರೂ ದರ ಫಿಕ್ಸ್ ಮಡಲಾಗಿದೆ. ಆದರೆ, ಈ ಎಲೆಕ್ಟ್ರಿಕ್ ಬಸ್ ನಲ್ಲಿ ವಿದ್ಯಾರ್ಥಿಗಳ ಪಾಸ್‌ಗೆ (Student Pass) ಅನುಮತಿಯಿಲ್ಲ. 

Follow Us:
Download App:
  • android
  • ios