KSRTC Electric Bus: ಕೆಎಸ್ಆರ್‌ಟಿಸಿಗೆ ಎಂಟ್ರಿ ಕೊಟ್ಟ ಮೊದಲ ಎಲೆಕ್ಟ್ರಿಕ್ ಬಸ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನಾಳೆ ಎಲೆಕ್ಟ್ರಿಕ್ ಬಸ್ ಗಳು ಬರುತ್ತಿದ್ದು, ಪರಿಕ್ಷಾರ್ಥ ಓಡಾಟ ನಡೆಸಿ ಮುಂಬರುವ ವರ್ಷದಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.
ವರದಿ: ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಡಿ.30); ಡಿಸೇಲ್ ವಾಹನಗಳ ಪರ್ವ ಮುಗಿಯಿತು. ಇನ್ನೇನಿದ್ರೂ ಎಲೆಕ್ಟ್ರಿಕ್ ವಾಹನಗಳದ್ದೇ ಹವಾ. ಈಗಾಗಲೆ ದೇಶದ ಎಲ್ಲಾ ಸಾರಿಗೆ ನಿಗಮಗಳು ಎಲೆಕ್ಟ್ರಿಕ್ ಬಸ್‌ಗಳ ಮೊರೆ ಹೋಗಿವೆ. ನಮ್ಮಲ್ಲಿ ಈಗಾಗಲೆ ಬಿಎಂಟಿಸಿಗೆ ಎಂಟ್ರಿ ಕೊಟ್ಟಿರೋ ಎಲೆಕ್ಟ್ರಿಕ್ ಬಸ್ ಗಳು ನಾಳೆಯಿಂದ ಕೆಎಸ್ಆರ್ಟಿಸಿಗೂ ಲಗ್ಗೆ ಇಡಲಿವೆ. ಈಗಾಗಲೆ ಡಿಸೇಲ್ ಬಸ್ ಗಳಿಗೆ ಡಿಸೇಲ್ ಹಾಕಿ ಕಂಪ್ಲೀಟ್ ಬರ್ಬಾದ್ ಆಗಿರೋ ರಾಜ್ಯ ಸಾರಿಗೆ ನಿಗಮಗಳು ಎಲೆಕ್ಟ್ರಿಕ್ ಬಸ್ಸಿನತ್ತ ಮುಖ ಮಾಡಿವೆ. ಈಗಾಗಲೇ ಬೆಂಗಳೂರಿನಲ್ಲಷ್ಟೆ ಹವಾ ಸೃಷ್ಟಿಸಿರೋ ಎಲೆಕ್ಟ್ರಿಕ್ ಬಸ್ ಗಳು ಇನ್ಮುಂದೆ ಬೆಂಗಳೂರು, ಮೈಸೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲೂ ಓಡಿಸೋಕೆ KSRTC ಸಜ್ಜಾಗಿದೆ. ನಾಳೆ ಮೊದಲ ಎಲೆಕ್ಟ್ರಿಕ್ ಬಸ್ ಬರಲಿದ್ದು, ಪರೀಕ್ಷಾರ್ಥ ಸಂಚಾರ ಮಾಡಲಿದೆ. 5 ದಿನಗಳ ಕಾಲ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿ ಯಶಸ್ವಿಯಾದ ಬಳಿಕ ಬಾಕಿ ಬಸ್ ಗಳನ್ನು ರಸ್ತೆಗಿಳಿಸಿಲು ನಿಗಮ ನಿರ್ಧರಿಸಿದೆ.
ನಿಗಮಕ್ಕೆ ಬರುವ ಬಸ್ಗಳನ್ನು ಬೆಂಗಳೂರು-ಮೈಸೂರು, ತುಮಕೂರು, ಕೋಲಾರ, ಹಾಸನ ಸೇರಿ ಬೆಂಗಳೂರಿನಿಂದ 300 ಕಿ.ಮೀ ವ್ಯಾಪ್ತಿಯಲ್ಲಿನ ಎಲೆಕ್ಟ್ರಿಕ್ ಬಸ್ ಸೇವೆ ಕಲ್ಪಿಸಲು ನಿಗಮ ಉದ್ದೇಶಿಸಿದೆ. ಎಲೆಕ್ಟ್ರಿಕ್ ಬಸ್‌ಗಳು ಪರಿಸರ ಸ್ನೇಹಿಯಾಗಿದ್ದು, ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚ ಕೂಡ ಕಡಿಮೆ. ಈ ವಿದ್ಯುತ್ ಚಾಲಿತ ಬಸ್‌ಗಳಿಂದ ಶಬ್ದವೂ ಇಲ್ಲ, ಹೊಗೆಯೂ ಇರುವುದಿಲ್ಲ. ಹಾಗಾಗಿ ಇದು ಶಬ್ದಮಾಲಿನ್ಯ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. 6 ಗಂಟೆ ಜಾರ್ಜ್ ಮಾಡಿದರೆ 250 ಕಿ. ಮೀಟರ್ ಸಂಚಾರ ಮಾಡುತ್ತೆ.
BMTC ಗುಡ್ ನ್ಯೂಸ್, 921 ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ಟಾಟಾ ಮೋಟಾರ್ಸ್ ಜೊತೆ ಒಪ್ಪಂದ!
ನಾಳೆ ಮೊದಲ ಒಂದು ಬಸ್ ಎಂಟ್ರಿ ಕೊಡಲಿದ್ದು,ಬಳಿಕ ಹಂತ ಹಂತವಾಗಿ ಬಸ್ ಗಳು ಬರಲಿವೆ. ಈಗಾಗಲೇ ಬಿಎಂಟಿಸಿ NTPCL,ಅಶೋಕ ಲೈಲ್ಯಾಂಡ್ ಕಂಪನಿಯಿಂದ ಬಸ್ ಗಳಿಂದ ಖರೀದಿಸಿ ನಷ್ಟ ಅನುಭವಿಸಿದೆ. ಅದೇನೆ ಆದ್ರೂ ಪರಿಸರ ಹಾನಿ ಹಾಗೂ ಡಿಸೇಲ್ ಬಸ್ ಗಳ ಹೊರೆ ತಗ್ಗಿಸಲು KSRTC ಎಲೆಕ್ಟ್ರಿಕ್ ಬಸ್ನತ್ತ ಮುಖ ಮಾಡಿದ್ದು, ಪ್ರಯಾಣಿಕರು ಕಡಿಮೆ ವೆಚ್ಚದಲ್ಲಿ ಪ್ರಯಾಣ ಬೆಳೆಸ್ಬಹುದು.
ಮದ್ರಾಸ್ ಐಐಟಿಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಗಿಫ್ಟ್ ನೀಡಿದ ಹಳೆ ವಿದ್ಯಾರ್ಥಿಗಳು
ಆರಂಭದಲ್ಲಿ, ಡಿಸೆಂಬರ್ 26 ರಂದು ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್ ಆಗಮಿಸುವ ನಿರೀಕ್ಷೆಯಿತ್ತು. ಡಿಸೆಂಬರ್ 30 ರಂದು ಉದ್ಘಾಟನಾ ಕಾರ್ಯಕ್ರಮ ಯೋಜಿಸಲಾಗಿತ್ತು. ಆದರೆ ಸದ್ಯಕ್ಕೆ ಇದು ತಡವಾಗಲಿದೆ. ಕಾರ್ಯಾಚರಣೆಯನ್ನು ಅಧಿಕೃತವಾಗಿ ಫ್ಲ್ಯಾಗ್ ಆಫ್ ಮಾಡುವ ಮೊದಲು ಬಸ್‌ಗಳ ಪ್ರಾಯೋಗಿಕ ಚಾಲನೆ ಅತ್ಯಗತ್ಯ. ಹೀಗಾಗಿ ಬಸ್ ಬಂದರೂ, ಡಿಸೆಂಬರ್ 31 ರಂದು ಸೇವೆಯನ್ನು ಉದ್ಘಾಟಿಸಲು KSRTC ಸಮಯ ಸಾಧ್ಯವಾಗುವುದಿಲ್ಲ. ಹೀಗಾಗಿ ಪರಿಕ್ಷಾರ್ಥ ಸಂಚಾರದ ಬಳಿಕ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ.