Asianet Suvarna News Asianet Suvarna News

ಸಾರಿಗೆ ನಿಗಮದಲ್ಲಿ ಆಯುಧ ಪೂಜೆ ಸಂಭ್ರಮವೇ ಇಲ್ಲ: ಕಾರಣ?

ಪೂಜೆಗೆ ಒಂದು ಬಸ್‌ಗೆ ಕೇವಲ 100 ರೂ ನೀಡಿದೆ ಸಾರಿಗೆ ನಿಗಮ. ಆಯುಧ ಪೂಜೆ  ಸ್ಚಚ್ಚತೆ, ಅಲಂಕಾರಕ್ಕೆ ತಲಾ 100 ರೂ ನೀಡಿ ಸುಮ್ಮನಾದ ಸಾರಿಗೆ ನಿಗಮ 

KSRTC Employees Not Celebrate Ayudha Puja in Karnataka grg
Author
First Published Oct 5, 2022, 1:30 AM IST

ಬೆಂಗಳೂರು(ಅ.05): 108 ಆರೋಗ್ಯ ಕವಚ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ಸಂಬಳವೇ ಆಗಿಲ್ವಂತೆ. ಹೀಗಾಗಿ 108 ಆ್ಯಂಬುಲೆನ್ಸ್ ಗಳಿಗೆ ಆಯುಧ ಪೂಜೆ ಮಾಡಿಲ್ಲ. ನಾಡಿನಲ್ಲೆಡೆ ನಾಡಹಬ್ಬ ಸಡಗರ ಇದ್ರೂ ಕೂಡ 108 ಸಿಬ್ಬಂದಿಗಳ ಮನೆಗಳಲ್ಲಿಲ್ಲ ನಾಡ ಹಬ್ಬದ ಸಂಭಮ್ರ. ಆರೋಗ್ಯ ಕವಚದ ಅಡಿಯಲ್ಲಿ ಮೂರು ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಜಿವಿಕೆ ಕಂಪನಿಗೆ 108 ನೌಕರರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಂಬಳಕ್ಕಾಗಿ ರಾಜ್ಯ ಸರ್ಕಾರ 25 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ಜಿವಿಕೆ ಕಂಪನಿ ಸಂಬಳ ನೀಡಿಲ್ಲ ಅಂತ 108 ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೂಡಲೇ ರಾಜ್ಯ ಸರ್ಕಾರ, ಆರೋಗ್ಯ ಸಚಿವರು ಮಧ್ಯ ಪ್ರವೇಶಿಸಬೇಕು. ಎರಡು ದಿನದಲ್ಲಿ ಸಂಬಳ ಬಿಡುಗಡೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ. 

ಆಯುಧ ಪೂಜೆ ವಿಶೇಷ; ನೋಡ ಬನ್ನಿ ಮೈಸೂರು ರಾಜರ ದಸರಾ ವೈಭವ

ಸಾರಿಗೆ ನಿಗಮದಲ್ಲಿ ಆಯುಧ ಪೂಜೆ ಸಂಭ್ರಮವೇ ಇಲ್ಲ

ನಿನ್ನೆ(ಮಂಗಳವಾರ) ನಾಡಿನಾದ್ಯಂತ ಆಯುಧ ಪೂಜೆಯನ್ನ ಸಂಭ್ರಮದಿಂದ ಆಚರಿಸಲಾಗಿತ್ತು. ಆದರೆ, ಸಾರಿಗೆ ನಿಗಮದಲ್ಲಿ ಮಾತ್ರ ಆಯುಧ ಪೂಜೆ ಸಂಭ್ರಮವೇ ಇರಲಿಲ್ಲ. ಇದಕ್ಕೆಲ್ಲ ಕಾರಣ ಸಾರಿಗೆ ನಿಗಮವೇ. ಹೌದು,  ಕಳೆದ ವರ್ಷದಂತೆ ಈ ಬಾರಿಯೂ ಆಯುಧ ಪೂಜೆಗೆಂದು ಸಾರಿಗೆ ನಿಗಮ ಪುಡಿಗಾಸು ಕೊಟ್ಟು ಕೈತೊಳೆದುಕೊಂಡಿದೆ. 

ಪೂಜೆಗೆ ಒಂದು ಬಸ್‌ಗೆ ಕೇವಲ 100 ರೂ ನೀಡಿದೆ ಸಾರಿಗೆ ನಿಗಮ. ಆಯುಧ ಪೂಜೆ  ಸ್ಚಚ್ಚತೆ, ಅಲಂಕಾರಕ್ಕೆ ತಲಾ 100 ರೂ ನೀಡಿ ಸಾರಿಗೆ ನಿಗಮ ಸುಮ್ಮನಾಗಿದೆ. ಬಿಡುಗಡೆ ಮಾಡಿರುವ 100 ರೂ ನಲ್ಲಿ ಒಂದು ಬಸ್‌ಗೆ ಪೂಜೆ ಮಾಡೋಕೆ ಆಗುತ್ತಾ‌‌..?. ಹೀಗಾಗಿ ಪೂಜೆ ಮಾಡದೆ ಹಬ್ಬದ ದಿನ ಸುಮ್ಮನಾದ ಸಾರಿಗೆ ಸಿಬ್ಬಂದಿಗಳು.  ಈ ಮೂಲಕ ಬಸ್‌ಗಳನ್ನು ಅಲಂಕಾರ ಮಾಡುವ ಸಿಬ್ಬಂದಿ ಆಸೆಗೆ ಸಾರಿಗೆ ಆಡಳಿತ ಮಂಡಳಿ ತಣ್ಣೀರೆರಚಿದೆ. 

ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲೂ ಆಯುಧ ಪೂಜೆಯ ಸಡಗರ

ಹೊಸಕೋಟೆ: ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲೂ ಆಯುಧ ಪೂಜೆಯ ಸಡಗರ ಸಂಭ್ರಮ ಮನೆ ಮಾಡಿತ್ತು. ಗರುಡಾಚಾರ್ ಪಾಳ್ಯದ ಮನೆಯ ಮುಂದೆ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳಿಗೆ ಪೂಜೆ ಮಾಡಲಾಗಿದೆ. 

ಪತ್ನಿ, ಮಗ, ಸೊಸೆ ಸೇರಿದಂತೆ ಕುಟುಂಬ ಸಮೇತ ಆಯುಧ ಪೂಜೆ ಮಾಡಿದ್ದಾರೆ. ಎಂಟಿಬಿ ಪುತ್ರ ನಿತೀಶ್ ಪುರುಷೋತಮ್ ಕುಟುಂಬ ಕೂಡ ಪೂಜೆಯಲ್ಲಿ ಭಾಗಿಯಾಗಿತ್ತು. ರೊಲ್ಸ್ ರಾಯ್, ಫೆರಾರಿ, ಆಡಿ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನ ಹೊಂದಿರುವ ಶ್ರೀಮಂತ ಸಚಿವರಾಗಿದ್ದಾರೆ ಎಂಟಿಬಿ ನಾಗರಾಜ್‌. ಪ್ರತಿ ಬಾರಿಯಂತೆ ಈ ಬಾರಿಯು ಮನೆಯ ಮುಂದೆ ವಿಶೇಷ ಪೂಜೆ ಮಾಡಲಾಗಿದೆ. 
 

Follow Us:
Download App:
  • android
  • ios