ಭಾರತ ಮಾತಾಕಿ ಜೈ ಅಂತೇವೆ, ಆದ್ರೆ ಇಂಡಿಯಾ ಮಾತಾಕಿ ಜೈ ಎನ್ನೊಲ್ಲ: ಕೆ.ಎಸ್. ಈಶ್ವರಪ್ಪ ಆಕ್ರೋಶ
ದೇಶದ ಜನ ಭಾರತ್ ಮಾತಾ ಕೀ ಜೈ ಅಂತಾ ಕೂಗೋದು ಕೇಳಿದ್ದೀವಿ. ಇಂಡಿಯಾ ಮಾತಾಕೀ ಜೈ ಅಂತಾ ಕೂಗಿದ್ದು ಕೇಳಿದ್ರಾ? ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಬಾಗಲಕೋಟೆ (ಸೆ.06): ದೇಶದ ಹೆಸರು ಇಂಡಿಯಾ ಬದಲಾಗಿ ಭಾರತ ನಾಮಕರಣ ಮಾಡಲಾಗುತ್ತಿದೆ. ಇಂಡಿಯಾ ಅಥವಾ ಭಾರತ ಎಂದು ಕರೆಯಲು ಮುಕ್ತ ಅವಕಾಶವಿದೆ 2018ರಲ್ಲಿ ಸುಪ್ರಿಂ ಕೋರ್ಟ್ ಅವಕಾಶ ಕಲ್ಪಿಸಿದೆ. ಸಿದ್ದರಾಮಯ್ಯನವರು ನಾನೇ ಕಾನೂನು ತಜ್ಞ, ಅಂಬೇಡ್ಕರ್ ಬಿಟ್ರೆ ನಾನೇ ಅಂತಾ ಹೇಳುತ್ತಾರೆ. ಇಡೀ ದೇಶದ ಜನ ಭಾರತ್ ಮಾತಾ ಕೀ ಜೈ ಅಂತಾ ಕೂಗೋದು ಕೇಳಿದ್ದೀವಿ. ಭಾರತ ಅಂದ್ರೆ ನಮ್ಮ ತಾಯಿ ಅಂತಾ ಅರ್ಥ. ಹೀಗಾಗಿ, ಭಾರತ್ ಮಾತಾಕೀ ಜೈ ಅಂತಾರೆ. ಇಂಡಿಯಾ ಮಾತಾಕೀ ಜೈ ಅಂತಾ ಕೂಗಿದ್ದು ಕೇಳಿದ್ರಾ? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಈ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಡಿಯಾ ಅಥವಾ ಭಾರತ ಎಂದು ಕರೆಯಲು ಮುಕ್ತ ಅವಕಾಶವಿದೆ 2018ರಲ್ಲಿ ಸುಪ್ರಿಂ ಕೋರ್ಟ್ ಅವಕಾಶ ಕಲ್ಪಿಸಿದೆ. ಸಿದ್ದರಾಮಯ್ಯನವರು ನಾನೇ ಕಾನೂನು ತಜ್ಞ, ಅಂಬೇಡ್ಕರ್ ಬಿಟ್ರೆ ನಾನೇ ಅಂತಾ ಹೇಲ್ತಾರೆ. ಈ ಪತ್ರಿಕೆ ಅವ್ರಿಗೆ ಕಳಿಸ್ತೇನೆ. ಯಾಕಂದ್ರೆ ಚರ್ಚೆ ಆಗ್ತಿರೋ ವಿಷಯಗಳು ಇವು. ಭಾರತ್ ಮಾತಾ ಕೀ ಜೈ ಅಂತಾ ಇಡೀ ದೇಶದ ಜನ ಕೂಗೋದು ಕೇಳಿದ್ದೀವಿ. ಭಾರತ ಅಂದ್ರೆ ನಮ್ಮ ತಾಯಿ ಅಂತಾ ಅರ್ಥ. ಭಾರತ್ ಮಾತಾಕೀ ಜೈ ಅಂತಾರೆ. ಇಂಡಿಯಾ ಮಾತಾಕೀ ಜೈ ಅಂತಾ ಕೂಗಿದ್ದು ಕೇಳಿದ್ರಾ? ಎಂದು ಕಿಡಿಕಾರಿದರು.
Sanatan Dharma: ಉದಯನಿಧಿ ಮಾತ್ರವಲ್ಲ, ಅವರಪ್ಪ ಬಂದ್ರೂ ಆಗಲ್ಲ: ಅವರಜ್ಜನ ಕೈಯಲ್ಲೂ ಆಗಿಲ್ಲವೆಂದ ಈಶ್ವರಪ್ಪ
ಈಗಿನ ಕಾಂಗ್ರೆಸ್ ನವರು ಸ್ವತಂತ್ರ ದಿನಾಚರಣೆ ದಿನ ಇಂಡಿಯಾ ಮಾತಾಕೀ ಜೈ ಅಂತಾ ಹೇಳಿದ್ದಾರಾ? ನನಗೆ ಗೊತ್ತಿಲ್ಲ. ಇವರು ಸೋನಿಯಾ ಗಾಂಧಿ ಬಗ್ಗೆ ಪ್ರೀತಿ, ಭಾರತದ ಬಗ್ಗೆ ಪ್ರೀತಿ ಇರೋರಲ್ಲ. ಹಿಂದೂ ಧರ್ಮದ ಬಗ್ಗೆ ದ್ವೇಶ, ಭಾರತದ ಬಗ್ಗೆಯೂ ದ್ವೇಶ. ಪಾಕಿಸ್ತಾನ ಬಗ್ಗೆ ಮಾತಾಡಿದ್ರೆ ಬಿಜೆಪಿಯವರು ಕೋಮುವಾದಿಗಳು ಅಂತಾರೆ. ನಿಮಗೆ (ಕಾಂಗ್ರೆಸ್) ಸೋನಿಯಾ ಗಾಂಧಿ ಬಗ್ಗೆ ಪ್ರೀತಿ ಜಾಸ್ತಿ, ಸಾವರ್ಕರ್ ಬಗ್ಗೆ ಇಲ್ಲ. ಇಂಡಿಯಾ ಬ್ರಿಟೀಷರು ತಂದಿರೋ ಪದವಾಗಿದೆ. ವಿದೇಶಿ ಸಂಸ್ಕ್ರತಿ ಅದು. ನಮ್ಮ ದೇಶದಲ್ಲಿ ಭಾರತ್ ಮಾತಾಕೀ ಜೈ ಅನ್ನೋದು ಇಡೀ ದೇಶದ ಯುಕರಿಗೆ ಸ್ಪೂರ್ತಿ ಕೊಡುವ ಪದವಾಗಿದೆ ಎಂದರು.
ಭಾರತ್ ಮಾತಾಕೀ ಜೈ, ಎಂಬ ಘೋಷಣೆ ಭಾರತಕ್ಕೆ ಸ್ವತಂತ್ರ ತಂದ ಘೋಷಣೆಗಳು. ಕಾಂಗ್ರೆಸ್‌ನ ತರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ ಸಂದರ್ಭದಲ್ಲೂ ಜನ ಭಾರತ್ ಮಾತಾಕೀ ಜೈ ಅಂತಾ ಕೂಗಿದ್ರೆ ವಿನಃ ಇಂಡಿಯಾ ಮಾತಾಕೀ ಜೈ ಅಂತಾ ಅಲ್ಲ. ಪ್ರೈಮರಿ ಸ್ಕೂಲ್‌ಗೆ ಹೋಗೋ ಹುಡುಗ ಭಾರತ್ ಮಾತಾಕೀ ಜೈ ಅಂತಾ ಕೂಗ್ತಾನೆ. ಸಿದ್ದರಾಮಯ್ಯ, ಹಾಗೂ ಡಿಕೆಶಿಗೆ ಗೊತ್ತಾಗಲ್ವ ಎಂದು ಕಿಡಿಕಾರಿದರು.
ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಹೆದರಿದ್ದರೆಂದು ಹೇಳಲಾಗುತ್ತಿದೆ. ಈ 25 ಜನ ಇಂಡಿಯಾ ಅಂತಾ ಇಟ್ಕೊಂಡ ಬಿಟ್ರಲ್ಲ. ನಮಗೇನು ಭಯ ಇಲ್ಲ. ಭಾರತಾಂಭೆ ನಮ್ಮ ತಾಯಿ. ನಮ್ಮ ತಾಯಿಯನ್ನ ಒಂದಿಂಚು ಬಿಟ್ಕೋಡೊಕೆ ತಯಾರಿಲ್ಲ. ಭಾರತ ಅಂದ್ರೆ ನಮ್ಮ ರಕ್ತ ಕುದಿಯುತ್ತದೆ. ಇವ್ರು ಇಂಡಿಯಾ ಅಂತಾ ಹೆಸರಿಟ್ಟುಕೊಂಡಿದ್ದಾರೆ. ಅದ್ರಲ್ಲೂ ಇವ್ರಿಗೆ ಭಿನ್ನತೆ, ಬೇರೆ ಬೇರೆ ಅಭಿಪ್ರಾಯ ಇದೆ. ನಿಮ್ಮ ಸೋನಿಯಾ, ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಇಡೀ ವಂಶವೇ ಬಂದ್ರೂ ಸಹ ಮೋದಿಯವ್ರು ಅಲ್ಲಾಡಿಸೋಕೆ ಯಾರ ಕೈಯಲ್ಲೂ ಆಗಲ್ಲ. ಮೋದಿಯವರು ಹೆದರುವ ಹಾಗೆ ಇದ್ದಿದ್ರೆ ಭಾರತ ಅನ್ನೋ ಪದವನ್ನ ಇಷ್ಟು ಗಟ್ಟಿಯಾಗಿ ಹೇಳೋಕೆ ಆಗ್ತಿರಲಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ರಾಷ್ಟ್ರಭಕ್ತಿ ಜಾಗೃತಿ ಆಗಲಿ ಅಂತಾ ಭಾರತ ಎಂದು ಮಾಡಲು ಹೊರಟಿದ್ದಾರೆ. ರಾಜಕಾರಣ ಮಾಡಲು ಅಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಮಗನಿಗೆ ಬುದ್ಧಿ ಹೇಳಿದ ಬಿಗ್‌ಬಾಸ್ ವಿನ್ನರ್ ಪ್ರಥಮ್: ಎಲ್ಲ ಧರ್ಮ ಗೌರವಿಸುವಂತೆ ತಾಕೀತು
ಕಾಂಗ್ರೆಸ್ ನವರಿಗೆ ವಿದೇಶಿ ಪದಗಳೇ ಇಷ್ಟ: ಕಾಂಗ್ರೆಸ್ ನವರಿಗೆ ವಿದೇಶಿ ಪದಗಳೇ ಇಷ್ಟ. ಸೋನಿಯಾ ಗಾಂಧಿ ಯಾಕೆ ಇಷ್ಟ? ವಿದೇಶಿ ಅಂದ್ರೆ ಅವರಿಗೆ ಬಲು ಖುಷಿ. ನಮ್ಮನ್ನೆಲ್ಲ ಬೆಳೆಸಿರೋದು ಆರ್.ಎಸ್.ಎಸ್ ನವರು ಆಗಿದ್ದಾರೆ. ಮೋಹನ್ ಜೀ ಭಾಗವತ್ ನಮಗೆಲ್ಲ ಭಾರತ್ ಮಾತಾಕೀ ಜೈ ಅಂತಾ ಕಲಿಸಿಕೊಟ್ಟಿದ್ದಾರೆ. ರಾಷ್ಟ್ರಗೀತೆಯಲ್ಲೂ ಭಾರತ ಅಂತಾ ಇದೆ. ಭಾರತ ಅಂತಾ ಪದಕ್ಕೆ ಅಪಮಾನ ಮಾಡ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ನವ್ರು ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.