ಕೆಪಿಎಸ್ಸಿ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆ ತರುವ ಉದ್ದೇಶದೊಂದಿಗೆ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ಲೋಕಸೇವಾ ಆಯೋಗ ತಿದ್ದುಪಡಿ ವಿಧೇಯಕ-2025ರಲ್ಲಿನ ಅಂಶಗಳ ಕುರಿತು ಕಾನೂನು ಸಲಹೆ ಪಡೆದು ಮರು ಸಲ್ಲಿಸುವಂತೆ ರಾಜ್ಯಪಾಲರು ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಬೆಂಗಳೂರು (ಏ.17): ಕೆಪಿಎಸ್ಸಿ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆ ತರುವ ಉದ್ದೇಶದೊಂದಿಗೆ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ಲೋಕಸೇವಾ ಆಯೋಗ ತಿದ್ದುಪಡಿ ವಿಧೇಯಕ-2025ರಲ್ಲಿನ ಅಂಶಗಳ ಕುರಿತು ಕಾನೂನು ಸಲಹೆ ಪಡೆದು ಮರು ಸಲ್ಲಿಸುವಂತೆ ರಾಜ್ಯಪಾಲರು ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಈ ಹಿಂದೆ ಕೆಪಿಎಸ್ಸಿಯಲ್ಲಿ ಯಾವುದೇ ಬದಲಾವಣೆ ತರಬೇಕಾದರೂ ರಾಜ್ಯ ಸರ್ಕಾರ ಮೊದಲು ಕೆಪಿಎಸ್ಸಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅದನ್ನು ತೆಗೆದು ಹಾಕಿ ಕೆಪಿಎಸ್ಸಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದಾಗ ಸರ್ಕಾರ ಕೆಪಿಎಸ್ಸಿಯನ್ನು ಸಂಪರ್ಕಿಸುವ ಅಗತ್ಯವಿಲ್ಲ ಎಂಬ ಅಂಶ ಸೇರಿಸಿ ವಿಧೇಯಕದಲ್ಲಿ ತಿದ್ದುಪಡಿ ತರಲಾಗಿತ್ತು.
ಇದನ್ನೂ ಓದಿ: 'ಸಗಣಿ ತಿಂದವರನ್ನ ಸುಮ್ನೆ ಬಿಡೋಲ್ಲ': ಎಂಜಿನಿಯರ್‌ಗಳ ಅಕ್ರಮ ನೇಮಕಾತಿ, KPSC ಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ!
ಈ ನಿರ್ಧಾರ ಸರಿಯೇ?
ಎಂಬ ಕುರಿತು ಸರ್ಕಾರ ಸೂಕ್ತ ಅಭಿಪ್ರಾಯ ಸಲ್ಲಿಸಬೇಕು. ಹಾಗೆಯೇ ವಿಧೇಯಕದಲ್ಲಿನ ಅಂಶಗಳ ಕುರಿತು ಕಾನೂನು ಸಲಹೆ ಪಡೆದು ವಿಧೇಯಕವನ್ನು ಮರು ಸಲ್ಲಿಕೆ ಮಾಡುವಂತೆ ರಾಜ್ಯಪಾಲರು ಸೂಚನೆ ನೀಡಿ, ವಿಧೇಯಕವನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಕೆಪಿಎಸ್‌ಸಿ 1122 ಎಸ್‌ಡಿಎ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ!
- ಕಾನೂನು ಸಲಹೆ ಪಡೆದು ಮರು ಸಲ್ಲಿಕೆಗೆ ಸಲಹೆ
ಆದರೆ, ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆ. ಸಂವಿಧಾನದ ವಿವಿಧ ಪರಿವಿಧಿ ಅಡಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಕೆಪಿಎಸ್ಸಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದಾಗ ಸರ್ಕಾರ ಕೆಪಿಎಸ್ಸಿಯನ್ನು ಸಂಪರ್ಕಿಸದಿರುವ ನಿರ್ಧಾರ ಸರಿಯೇ?
