ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಹೆಲಿಕಾಪ್ಟರ್‌ನಲ್ಲಿ ಡಿಕೆ ಶಿವಕುಮಾರ್ ಸೇರಿ ಇತರ ನಾಯಕರು ಸಂಚರಿಸುತ್ತದ್ದ ವೇಳೆ ಹದ್ದು ಡಿಕ್ಕಿಯಾಗಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿದೆ.
ಬೆಂಗಳೂರು(ಮೇ.02): ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತವಾಗಿದೆ. ಹಾರಾಟದ ನಡುವೆ ಹದ್ದು ಡಿಕೆಶಿ ಹೆಲಿಕಾಪ್ಟರ್‌ಗೆ ಡಿಕ್ಕಿಯಾಗಿದೆ. ಇದರ ಪರಿಣಾಮ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡಿದೆ. ಪೈಲೆಟ್ ಹರಸಾಹಸದಿಂದ ಭಾರಿ ಅನುಹುತ ತಪ್ಪಿದೆ. ಜಕ್ಕೂರು ಹೆಲಿಪ್ಯಾಡ್‌ನಿಂದ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಜಕ್ಕೂರ್ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆದೆ ಕೆಲ ಕ್ಷಣಗಳ ಬಳಿಕ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿದೆ. ಹದ್ದು ಡಿಕ್ಕಿಯಾದ ರಭಸಕ್ಕೆ ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿದೆ. ಡಿಕೆ ಶಿವಕುಮಾರ್ ಜೊತೆಗಿದ್ದ ಇತರ ಕೆಲವರಿಗೆ ಗಾಯಗಳಾಗಿದೆ. ಡಿಕೆ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೀಕೆಗಳ ಲೆಕ್ಕದ ಬದಲು ಸರ್ಕಾರದ ಕೊಡುಗೆ ಲೆಕ್ಕ ನೀಡಿ: ಮೋದಿಗೆ ಡಿಕೆಶಿ ಪ್ರಶ್ನೆ
ಹದ್ದು ಡಿಕ್ಕಿಯಾದ ಬೆನ್ನಲ್ಲೇ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿದೆ. ಹೀಗಾಗಿ ಪೈಲೆಟ್ ತಕ್ಷಣ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಇತ್ತ ಕೋಲಾರದ ಮುಳಭಾಗಿಲಿನಲ್ಲಿ ಸಾರ್ವಜನಿಕ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೀಗಾಗಿ ಡಿಕೆ ಶಿವಕುಮಾರ್ ರಸ್ತೆ ಮಾರ್ಗದ ಮೂಲಕ ಕೋಲಾರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಕಾಂಗ್ರೆಸ್ ಹಾಗೂ ಡಿಕೆ ಶಿವಕುಮಾರ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇಂದು ಕೋಲಾರ ಸೇರಿದಂತೆ ಹಲವು ಭಾಗದಲ್ಲಿ ಡಿಕೆ ಶಿವಕುಮಾರ್ ಪ್ರಚಾರ ನಡೆಸಲಿದ್ದಾರೆ. ಹಲವು ಪ್ರಮುಖ ನಾಯಕರು ಹೆಲಿಕಾಪ್ಟರ್ ಮೂಲಕ ಸಂಚಾರ ಮಾಡುತ್ತಿದ್ದಾರೆ. ಈ ಮೂಲಕ ಅತೀ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಪಕ್ಷಗಳು ವೇಳಾಪಟ್ಟಿ ಮಾಡಿದೆ. ಆದರೆ ಈ ಘಟನೆ ರಾಜ್ಯದ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಅದೃಷ್ಟವಶಾತ್ ಡಿಕೆ ಶಿವಕುಮಾರ್ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಮೇ.10 ರಂದು ನಡೆಯಲಿದೆ. ಮೇ.13ಕ್ಕೆ ಫಲಿತಾಂಶ ಹೊರಬೀಳಲಿದೆ. ಸದ್ಯ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಪರ ಕೇಂದ್ರ ನಾಯಕರ ದಂಡೇ ರಾಜ್ಯ ಪ್ರವಾಸ ಮಾಡುತ್ತಿದ್ದೆ. ಇತ್ತ ಕಾಂಗ್ರೆಸ್ ಪರ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿದಂತೆ ಹಲವು ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ರಾಮನಗರ: ಡಿಕೆಶಿಗೆ ಅಶೋಕ್, ಎಚ್‌ಡಿಕೆಗೆ ಸಿಪಿವೈ ಸವಾಲು..!
ಸಮೀಕ್ಷಾ ವರದಿ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭಾ ಸೃಷ್ಟಿಯಾಗಲಿದೆ ಎಂದಿದೆ. ಆದರೆ ಪೂರ್ಣಬಹುತದ ಸರ್ಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮತಬೇಟೆ ನಡೆಸುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಘಟಾನುಘಟಿ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
