ಮಾಜಿ ಶಾಸಕ ಬಸವರಾಜ್ ದಡೇಸಗೂರು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗನ್ ಮ್ಯಾನ್ ವಿಚಾರವಾಗಿ ಶೋಕಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಪ್ಪಳ, (ಮೇ.27): 'ಶಿವರಾಜ್ ತಂಗಡಗಿ ಮೂರು ಬಿಟ್ಟೋನು, ಸರಿಯಾಗಿ ಕನ್ನಡ ಓದಲು ಬರೆಯಲು ಬರಲಾರದ ಮಂತ್ರಿ ಮಂತ್ರಿ ಶೋಕಿ ಮಾಡ್ತಾನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಮಾಜಿ ಶಾಸಕ ಬಸವರಾಜ್ ದಡೇಸಗೂರು ತೀವ್ರ ವಾಗ್ದಾಳಿ ನಡೆಸಿದರು.

ಗನ್ ಮ್ಯಾನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಶಾಸಕ ದಡೇಸಗೂರು,ಶೋಕಿಗೆ ಗನ್ ಮ್ಯಾನ್ ಕೇಳ್ತಾನೆ, ಆತನಿಗೆ ಮಾನ ಮರ್ಯಾದೆ ಇದೆಯಾ, ನನಗೆ ಜ್ಞಾನ ಇದೆಯಾ ಅಂತಾ ಕೇಳ್ತಾನೆ. ತಿಳ್ಕೊ, ನಾನು ಸೋತಿರಬಹುದು ಮತ್ತೆ ಗೆಲ್ಲುವೆ. ಮಾನ-ಮಾರ್ಯಾದೆ ಇದ್ರೆ ಆ ಮನುಷ್ಯ ಮಾತಾಡಬಾರದು ಎಂದು ಕಿಡಿಕಾರಿದರು.

ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದ್ದರೂ ಅಧಿಕಾರಿಗಳು ಗನ್‌ಮ್ಯಾನ್ ನೀಡಿಲ್ಲ ಎಂದು ದೂರಿದರು. ನನಗೆ ಕಾನೂನು ಚೌಕಟ್ಟಿನಲ್ಲಿ ಗನ್ ಮ್ಯಾನ್ ಕೊಡಲಿ.ಗುಪ್ತ ಚರ ಇಲಾಖೆ ಅಧಿಕಾರಿಗಳು ಗನ್ ಮ್ಯಾನ್ ನೀಡಲು ಮಾಹಿತಿ ಕೊಟ್ಟಿದ್ದಾರೆ. ಗನ್‌ಮ್ಯಾನ್ ಕೊಡದಿದ್ದರೆ ಕೋರ್ಟ್‌ಗೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕೊಪ್ಪಳದ ರಾಜಕೀಯ ವಲಯದಲ್ಲಿ ಈ ವಾಗ್ವಾದ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆಗಳು ಏನಾಗಲಿವೆ ಎಂಬುದು ಕುತೂಹಲ ಕೆರಳಿಸಿದೆ.