ಹಳೆ ಕಾರುಗಳಿಗೆ ಹೈಟೆಕ್ ಸ್ಪರ್ಶ ನೀಡುವ ಜಾದೂಗಾರ!
ತಾತ ಮುತ್ತಾತನ ಕಾಲದ ಕಾರುಗಳಿಗೆ ಹೊಸ ಸ್ಪರ್ಶ
ಕೋಲಾರ ಜಿಲ್ಲೆಯಲ್ಲಿದೆ ಹಳೆಯ ಕಾರುಗಳಿಗೆ ಹೈಟೆಕ್ ಸ್ಪರ್ಶ ನೀಡುವ ಗ್ಯಾರೇಜ್
ಹೊರ ರಾಜ್ಯಗಳಿಂದ ಕಾರುಗಳನ್ನು ತಂದು ರಿಪೇರಿ ಮಾಡುವ ಕೆಲಸ
ದೀಪಕ್ ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಮಾ.24): ಅವೆಲ್ಲಾ ನಮ್ಮ ತಾತ ಮುತ್ತಾತನ ಕಾಲದ ಹಳೆಯ ಕಾರ್ ಗಳು (Old Cars) ನೀವು ಸಿನಿಮಾದಲ್ಲೂ ನೋಡಿದಂತ ಜಮಾನದ ಕಾರ್ ಗಳು, ಸದ್ಯ ಇಲ್ಲೊಂದು ಗ್ಯಾರೇಜ್ ನಲ್ಲಿ (Garage) ಅಂತಹ ಮುತ್ತಾತನ ಕಾಲದ ಕಾರ್ ಗಳಿಗೆ ಹೊಸ ಜೀವ ನೀಡಿ ಹೊಸ ಟ್ರಂಡ್ ಸೆಟ್ ಮಾಡುವ ಕೆಲಸದಲ್ಲಿತೊಡಗಿದೆ.
ಬ್ರಿಟಿಷರ ಕಾಲದ (British) ಮತ್ತು ರಾಜಮಹಾರಾಜರ ಕಾಲದ ಹತ್ತಾರು ಬಗೆಯ ಕಾರ್ ಗಳು, ಹಳೆಯ ಮಾಡೆಲ್ ಕಾರ್ ಗಳನ್ನು (Old Model Cars) ರಿಪೇರಿ (Repair) ಮಾಡುತ್ತಿರುವ ಯುವಕರು,ಅಲ್ಲೇ ಪಕ್ಕದಲ್ಲೇ ನಿಲ್ಲಿಸಲಾಗಿರುವ ಹಳೆಯ ಕಾಲದ ಬೈಕ್ ಕಲೆಕ್ಷನ್,ಇದೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಹನುಮನಾಯಕನಹಳ್ಳಿ ಗ್ರಾಮದ ಬಳಿ. ಹೌದು ಈ ಗ್ರಾಮದ ಬಳಿ ಒಂದು ಕಾರ್ ಗ್ಯಾರೇಜ್ ಇದೆ, ಇಲ್ಲಿ ನೀವೊಮ್ಮೆ ನೋಡಿದ್ರೆ ನಿಜಕ್ಕೂ ಖುಷಿ ಯಾಗ್ತೀರಿ, ಯಾಕಂದ್ರೆ ಇಲ್ಲಿರುವ ಕಾರ್ ಗಳನ್ನು ಯಾವುದನ್ನೂ ಕೂಡಾ ನೀವು ನೋಡಿರದ ಅಪರೂಪದ ಕಾರ್ ಗಳು. ನಮ್ಮ ಮುತ್ತಾತನ ಕಾಲದಲ್ಲಿ ರಾಜ ಮಹಾರಾಜರು, ಶ್ರೀಮಂತರು, ಬ್ರಿಟೀಷ್ ಅಧಿಕಾರಿಗಳು ಬಳಸುತ್ತಿದ್ದ ಕಾರ್ ಗಳು.
ಒಂದಕ್ಕಿಂತ ಒಂದು ವಿಭಿನ್ನ, ಇಂಥಾದೊಂದು ಕಾರ್ ಗಳ ಬಗ್ಗೆ ಆಸಕ್ತಿ ಇರುವ ಮೂಲತ: ಕಾರ್ ಮೆಕಾನಿಕ್ ಆಗಿರುವ ಕೆಜಿಎಫ್ ಮೂಲದ ನವೀನ್ ಮತ್ತು ಅವರ ಸ್ನೇಹಿತರು ಹಳೇ ಕಾರ್ ಗಳನ್ನು ಮತ್ತೆ ರಿಪೇರಿ ಮಾಡಿ ರೋಡಿಗಿಳಿಸುವ ನಿಟ್ಟಿನಲ್ಲಿ ಪ್ರಯತ್ನವೊಂದನ್ನು ಆರಂಭಿಸಿದ್ದಾರೆ, ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹಳೆಯ ಕಾರ್ ಗಳ ಮತ್ತು ಬೈಕ್ ಗಳ ಬಗ್ಗೆ ಯುವಕರಲ್ಲಿ ಹೊಸ ಕ್ರೇಜ್ ಇದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ತೆರೆ ಕಾಣುತ್ತಿರುವ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಹಳೆಯ ಕಾರ್ ಗಳನ್ನು ಬಳಸುವುದು ಕಾಮನ್ ಆಗಿದ್ದು ಅದೇ ಟ್ರೆಂಡ್ ಸೆಟ್ ಮಾಡಿ ಹಳೆಯ ಕಾರ್ ಗಳನ್ನು ರಿಪೇರಿ ಮಾಡಿ ಅದನ್ನು ಎಲೆಕ್ಟ್ರಿಕ್ ಕಾರ್ ಗಳಾಗಿ ಬದಲಾಯಿಸಬೇಕು ಅನ್ನೋದು ನವೀನ್ ಅವರ ಆಶಯ.
KH Muniyappa: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾದರೆ ಸ್ವಾಗತ
ಇಲ್ಲಿ ಚೆನೈ, ಬೆಂಗಳೂರು, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಂದ ಹತ್ತಾರು ಬಗೆಯ ಕಾರ್ ಗಳನ್ನು ತಂದು ರಿಪೇರಿ ಮಾಡುವ ಕೆಲಸ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ ಗಳು ಅಂದಿನ ಕಾಲಕ್ಕೆ ಯೂರೋಪಿಯನ್, ಅಮೇರಿಕನ್ ದೇಶದ ಕಾರ್ ಗಳಾಗಿರುವ ಹಿನ್ನೆಲೆಯಲ್ಲಿ ಇದರ ಬಿಡಿಭಾಗಗಳನ್ನು ಅಲ್ಲಿಂದಲೇ ತರಿಸಿಕೊಂಡು ರಿಪೇರಿ ಮಾಡಲಾಗುತ್ತಿದೆ. ಸದ್ಯ ಈ ಜಮಾನಾ ಗ್ಯಾರೇಜ್ ನಲ್ಲಿರುವ ಅಪರೂಪದ ಕಾರ್ ಗಳು ಯಾವವು ಅಂದ್ರೆ- ಬೀಟಲ್, ಆಸ್ಟ್ರೀನ್-11, ಆಸ್ಟ್ರೀನ್-8, ಬೀಟಲ್ ಬಗ್, ಮೋರಿಸ್, ಫೋರ್ಡ್ ಆಸ್ಟ್ರೀನ್-7, ಪೋರ್ಡ್ ಫರ್ಪೆಕ್ಟ್, ಆಮೇರಿಕನ್ ಮೂಲದ ಲೆಕ್ಸುರಿ ಕಾರ್- ಕೆಡಿಲಾಕ್ ಸೇರಿದಂತೆ ಹತ್ತಾರು ಬಗೆಯ ಹಳೆಯ ಬೈಕ್ ಕಲೆಕ್ಷನ್ ಕೂಡಾ ಇಲ್ಲಿದೆ.
ಪುಟಿದೆದ್ದು ನಿಂತ ಕುಕ್ಕುಟೋದ್ಯಮ, ಗ್ರಾಹಕರಿಗೆ ಬೆಲೆ ಏರಿಕೆ ಶಾಕ್
ಒಟ್ಟಾರೆ ಯುವಕರಲ್ಲಿ ಹಳೆಯ ಜಮಾನಾದ ಕಾರ್ ಕ್ರೇಜ್ ಹೆಚ್ಚಾಗಿದ್ದು ಅದಕ್ಕೆ ತಕ್ಕಂತೆ ನವೀನ್ ಹಾಗೂ ಅವರ ಸ್ನೇಹಿತರು ಅಂದುಕೊಂಡಂತೆ ಎಲ್ಲವೂ ಆದ್ರೆ ಮೂಲೆ ಸೇರಿದ್ದ ನಮ್ಮ ತಾತ ಮುತ್ತಾತನ ಕಾಲದ ಕಾರ್ ಗಳು ಪರಿಸರ ಮಾಲಿನ್ಯ ರಹಿತ ಕಾರ್ ಗಳಾಗಿ ಮತ್ತೆ ರೋಡಿಗಿಳಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ..