ಶಿವಮೊಗ್ಗ (ಮಾ.21): ದೆಹಲಿಯಲ್ಲಿ ನಾಲ್ಕು ತಿಂಗಳಿಂದ ರೈತರ ಹೋರಾಟ ನಡೆದಿದೆ.  ಕೇಂದ್ರ ಸರ್ಕಾರದ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವ ಸಲುವಾಗಿ ಹೋರಾಟ ನಡೆದಿದೆ.  ಬಹು ರಾಷ್ಟ್ರೀಯ ಕಂಪೆನಿಗಳ ಹುನ್ನಾರದಿಂದ ಕಾಯ್ದೆ ಬಂದಿದೆ ಎಂದು  ರಾಷ್ಟ್ರೀಯ ಕಿಸಾನ್ ಮೋರ್ಚಾದ ರಾಕೇಶ್ ಸಿಂಗ್ ಟಿಕಾಯತ್ ಮತ್ತು ಯುದ್ದವೀರ್ ಸಿಂಗ್ ಹೇಳಿದರು.

ಶಿವಮೊಗ್ಗದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕೇಶ್ ಸಿಂಗ್ ಟಿಕಾಯತ್ ಮತ್ತು ಯುದ್ದವೀರ್ ಸಿಂಗ್,  ರೈತ ಬೆಳೆದ ಬೆಳೆಗಳನ್ನು ಕಡಿಮೆ ದರದಲ್ಲಿ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಕಂಪೆನಿಯ ವಿರುದ್ಧ ನಮ್ಮ ಹೋರಾಟ.  ಈ ನೀತಿಯ ವಿರುದ್ಧ ದೃಶ್ಯ, ಮುದ್ರಣ, ಸಾಮಾಜಿಕ ಜಾಲತಾಣದಲ್ಲಿ ಲೇಖನ ಪ್ರಕಟಿಸಿದರೇ ಕೇಸ್ ದಾಖಲಾಗುತ್ತಿದೆ. ವಿದ್ಯುತ್, ಬೀಜ, ಕೃಷಿ ಹೀಗೆ ಇವುಗಳ ಮೇಲೆ ಕಾಯ್ದೆಗಳನ್ನು ಜಾರಿಗೆ ತಂದು ಜನ ಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು.

ಡಿಸೆಂಬರ್‌ವರೆಗೂ ರೈತ ಚಳವಳಿ ನಡೆಯಲಿದೆ: ರಾಕೇಶ್‌ ಟಿಕಾಯತ್‌

 ದೆಹಲಿಯಲ್ಲಿ ಮೋದಿ ಮೀಡಿಯ ಮತ್ತು ನ್ಯಾಷನಲ್ ಮೀಡಿಯಾ ಎಂದು ಎರಡು ಗುಂಪು ಇದೆ.  ಹೋರಾಟದ ಪರವಾಗಿ ಲೇಖನ ಬರೆಯುವ ಪತ್ರಕರ್ತರಿದ್ದಾರೆ. ಅವರ ಮೇಲೆ ದಾಳಿ ನಡೆದಿದ್ದು ಅವರ ರಕ್ಷಣೆ ಗೂ ನಾವು ಮುಂದಾಗಬೇಕಿದೆ.  8 ಲಕ್ಷ ಮಿಲಿಯನ್ ಟನ್ ಸ್ಟೋರೇಜ್ ಮಾಡುವ ಗೋದಾಮು ಗಳನ್ನು ಅದಾನಿಯಂತಹವರು ಹೊಂದಿದ್ದಾರೆ.  ಹೀಗಾಗಿ ನಾವು ರೋಟಿ ತಿಜೋರಿಯಲ್ಲಿ ಬಂಧಿಸಿ ಇಡುತ್ತೇವೆ ಎಂದು ಅವರು ಹೇಳಿದರು. 

ದೆಹಲಿಯಲ್ಲಿ ಕೇವಲ ರೈತರ ಹೋರಾಟ ನಡೆಯುತ್ತಿಲ್ಲ. ಈ ಹೋರಾಟಕ್ಕೆ ಎಲ್ಲಾ ವರ್ಗದ ಜನರಿಂದ ಬೆಂಬಲ ಸಿಕ್ಕಿದೆ ಎಂದು ಕಿಸಾನ್ ಮೋರ್ಚಾ ಮುಖಂಡರು ಎಂದು ಅಸಮಾಧಾನ ಹೊರಹಾಕಿದರು.