ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ| ಡಿಸೆಂಬರ್‌ವರೆಗೂ ರೈತ ಚಳವಳಿ ನಡೆಯಲಿದೆ: ರಾಕೇಶ್‌ ಟಿಕಾಯತ್‌

ಅಲಹಾಬಾದ್(ಮಾ.15)‌: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ ಈ ವರ್ಷ ಡಿಸೆಂಬರ್‌ವರೆಗೂ ಮುಂದುವರೆಯಲಿದೆ ಎಂದು ಭಾರತೀಯ ಕಿಸಾನ್‌ ಯೂನಿಯನ್‌ನ ವಕ್ತಾರ, ರೈತ ನಾಯಕ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳು ಊಟ ಹಾಕುವಂತೆ ರೈತರನ್ನು ಕೇಳಿದ್ದಾರೆ. ಆದರೆ ಕ್ವಿಂಟಾಲ್‌ ಭತ್ತಕ್ಕೆ 1850 ರು. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವವರೆಗೂ ಒಂದು ಅಗಳು ಅನ್ನ ನೀಡಬೇಡಿ ಎಂದು ರೈತರಿಗೆ ಸಲಹೆ ನೀಡಿದೆ’ ಎಂದು ತಿಳಿಸಿದರು.

ಇದೇ ವೇಳೆ ಕೇವಲ ದೆಹಲಿಯಲ್ಲಿ ಕುಳಿತು ಪ್ರತಿಭಟಿಸದೆ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶಕ್ಕೂ ತಾವು ಭೇಟಿ ನೀಡುವುದಾಗಿ ತಿಳಿಸಿದರು.