ತಮ್ಮ ಪುತ್ರನ ಲೈಂಗಿಕ ಹಗರಣದಲ್ಲಿನ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತೆಯನ್ನು ಬೆಂಬಲಿಗರ ಮೂಲಕ ಮಾಜಿ ಸಚಿವ ರೇವಣ್ಣ ಅಪಹರಿಸಿದ್ದಾರೆ ಎಂದು ಮೇ 2ರಂದು ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಬೆಂಗಳೂರು(ಮೇ.15): ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಮಾಜಿ ಸಚಿವ ಎಚ್. ಡಿ.ರೇವಣ್ಣ ನ್ಯಾಯಾಲಯ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾದರು. ಬಿಡುಗಡೆಯಾದ ಬೆನ್ನಲ್ಲೇ ರೇವಣ್ಣ ಅವರು ಬೆಂಗಳೂರಲ್ಲಿ ವಿವಿಧ ದೇವಸ್ಥಾನಗಳಿಗೆ ತೆರಳಿ, ಸಂಜೆ ಮೈಸೂರಿಗೆ ಪ್ರಯಾಣಿಸಿ ಚಾಮುಂಡೇಶ್ವರಿ ದರ್ಶನ ಪಡೆದರು. ಇದಕ್ಕೂ ಮೊದಲು ಕಾರಾಗೃಹದಿಂದ ಹೊರಬಂದ ಅವರನ್ನು ಮಾಜಿ ಸಚಿವ ಸಾ.ರಾ. ಮಹೇಶ್ ಹಾಗೂ ಜೆಡಿಎಸ್ ಮುಖಂಡರು ಜೈಕಾರ ಕೂಗಿ ಸ್ವಾಗತಿಸಿದರು.
ಬಳಿಕ ಸಾ.ರಾ.ಮಹೇಶ್ ಜತೆ ಕಾರಿನಲ್ಲಿ ಹೊರಟ ರೇವಣ್ಣ ಅವರು ಜೈಲಿನಿಂದ ನೇರವಾಗಿ ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿದರು. ಅಲ್ಲಿ ತಂದೆ-ತಾಯಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಸುದೀರ್ಘ ಸಮಾಲೋಚನೆ ನಡೆಸಿದರು. ನಂತರ ಜೆ.ಪಿ.ನಗರ ಬಳಿ ಇರುವ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಸವನಗುಡಿ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜಾ ಕೈಂಕರ್ಯ ನಡೆಸಿದರು. ನಂತರ ಮೈಸೂರಿಗೆ ತೆರಳಿದರು.
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್! “ಸನ್ ಆಫ್ ರೇವಣ್ಣ”ಗೆ ಕಾದಿದ್ಯಾ ಭಾರೀ ಸಂಕಷ್ಟ..?
ಲೋಕಸಭಾ ಚುನಾವಣೆ ಮತದಾನಕ್ಕೂ ಮುನ್ನ ಹಾಸನ ಸಂಸದ ಪ್ರಜ್ವಲ್ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಸಾರ್ವಜನಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಅಶ್ಲೀಲ ವಿಡಿಯೋಗಳಲ್ಲಿ ಸಂಸದರು ಮನೆಯಲ್ಲಿನ ಮಹಿಳಾ ಕೆಲಸಗಾರರ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ಶೋಷಣೆ ದೃಶ್ಯಾವಳಿಗಳಿವೆ ಎನ್ನಲಾಗಿತ್ತು. ಈ ಪೆನ್ ಡ್ರೈವ್ ಬಯಲಾದ ಬೆನ್ನಲ್ಲೇ ಮತದಾನ ಮುಗಿಸಿ ವಿದೇಶಕ್ಕೆ ಪ್ರಜ್ವಲ್ ಹಾರಿದರು. ಇತ್ತ ತಮ್ಮ ಪುತ್ರನ ಲೈಂಗಿಕ ಹಗರಣದಲ್ಲಿನ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತೆಯನ್ನು ಬೆಂಬಲಿಗರ ಮೂಲಕ ಮಾಜಿ ಸಚಿವ ರೇವಣ್ಣ ಅಪಹರಿಸಿದ್ದಾರೆ ಎಂದು ಮೇ 2ರಂದು ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ರೇವಣ್ಣ ಅವರನ್ನು ವಿಶೇಷ ತನಿಖಾ ದಳ ಬಂಧಿಸಿ ಜೈಲಿಗೆ ಕಳುಹಿಸಿತ್ತು. ಕೊನೆಗೆ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರಿಗೆ ಷರತುಬದ್ಧ ಜಾಮೀನನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಮಂಜೂರು ಮಾಡಿತ್ತು. ಜಾಮೀನು ಪ್ರತಿ ಸಿಗದ ಕಾರಣ ಮಾಜಿ ಸಚಿವರ ಬಿಡುಗಡೆ ವಿಳಂಬವಾಯಿತು. ಅಂತೆಯೇ ಮಂಗಳವಾರ ಬೆಳಗ್ಗೆ ಜಾಮೀನು ಪ್ರಕ್ರಿಯೆಯನ್ನು ರೇವಣ್ಣ ಪರ ವಕೀಲರು ಮುಗಿಸಿದರು. ತರುವಾಯ ಬೆಳಗ್ಗೆ 11.30ರ ಸುಮಾರಿಗೆ ಜೈಲಿನಿಂದ ಹೊರಬಂದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್: ಹೊಳೆನರಸೀಪುರ, ಹಾಸನದಲ್ಲಿ ಎಫ್‌ಎಸ್‌ಎಲ್ ಪರಿಶೀಲನೆ
ನನಗೆ ಕಾನೂನಿನ ಮೇಲೆ ಗೌರವವಿದೆ. ನನ್ನ ವಿರುದ್ಧದ ಆರೋಪದಿಂದ ಮುಕ್ತನಾ ಗುತ್ತೇನೆ. ನ್ಯಾಯಾಲ ಯದ ಆದೇಶವನ್ನು ಪಾಲಿಸುತ್ತೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಜಾಮೀನು ವಿರುದ್ಧ ಎಸ್‌ಐಟಿ ಕೋರ್ಟಿಗೆ?
ಎಚ್.ಡಿ.ರೇವಣ್ಣ ಅವರಿಗೆ ವಿಶೇಷ ಜನ ಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಎಸ್‌ಐಟಿ ಹೈ ಕೋರ್ಟ್‌ಗೆ ಶೀಘ್ರ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ರೇವಣ್ಣ ಆಪ್ತ ಮಾಜಿ ಜಿಪಂ ಸದಸ್ಯನ ಬಂಧನ
ಪ್ರಜ್ವಲ್ ಲೈಂಗಿಕ ಹಗರಣದ ಸಂತ್ರಸ್ತೆ ಕಿಡ್ನಾಪ್ ಕೇಸ್ ಸಂಬಂಧ ಎಚ್.ಡಿ. ರೇವ ಣ್ಣ ಅವರ ಮತ್ತೊಬ್ಬ ಬೆಂಬಲಿಗ, ಮಾಜಿ ಜಿ.ಪಂ. ಸದಸ್ಯ ಕೀರ್ತಿ ಎಂಬುವರನ್ನು ಎಸ್‌ಐಟಿ ಬಂಧಿಸಿದೆ.
