ಕಾಡಾನೆ ಕಾಲ್ತುಳಿತಕ್ಕೆ ಕೇರಳ ವ್ಯಕ್ತಿ ಸಾವು ಪ್ರಕರಣ; ಕರ್ನಾಟಕ ಸರ್ಕಾರದ ₹15 ಲಕ್ಷ ಪರಿಹಾರ ಹಣ ತಿರಸ್ಕರಿಸಿದ ಕುಟುಂಬ!

ಕರ್ನಾಟಕದ ಕಾಡಾನೆ (Karnataka Elephant) ದಾಳಿಗೆ ಬಲಿಯಾಗಿದ್ದ ಕೇರಳದ ವ್ಯಕ್ತಿಯ (Kerala Man) ಕುಟುಂಬಕ್ಕೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದ 15 ಲಕ್ಷ ರೂಗಳ ಪರಿಹಾರವನ್ನು ಸಂತ್ರಸ್ಥನ ಕುಟುಂಬಸ್ಥರು ತಿರಸ್ಕರಿಸಿದ್ದಾರೆ.

Kerala man dies in wild elephant stampede case  family rejected compensation money by karnataka govt rav

ಚಾಮರಾಜನಗರ (ಮಾ.10): ಕರ್ನಾಟಕದ ಕಾಡಾನೆ (Karnataka Elephant) ದಾಳಿಗೆ ಬಲಿಯಾಗಿದ್ದ ಕೇರಳದ ವ್ಯಕ್ತಿಯ (Kerala Man) ಕುಟುಂಬಕ್ಕೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದ 15 ಲಕ್ಷ ರೂಗಳ ಪರಿಹಾರವನ್ನು ಸಂತ್ರಸ್ಥನ ಕುಟುಂಬಸ್ಥರು ತಿರಸ್ಕರಿಸಿದ್ದಾರೆ.

ಆನೆ ಕಾಲ್ತುಳಿತ ಪ್ರಕರಣದಲ್ಲಿ, ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತ ಕುಟುಂಬ ತಿರಸ್ಕರಿಸಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ತಿಳಿಸಿದ್ದಾರೆ. ಈ ಕುರಿತು ಬಂಡೀಪುರದಲ್ಲಿ (Bandipur) ಮಾತನಾಡಿದ ಅವರು, ನಾವು ಮಾನವೀಯತೆಯಿಂದ ಪರಿಹಾರ ಘೋಷಣೆ ಮಾಡಿದ್ದೆವು. ಆದರೆ ಸಂತ್ರಸ್ತ ಕುಟುಂಬವು ಪರಿಹಾರ ಬೇಡವೆಂದು ತಿರಸ್ಕರಿಸಿದೆ ಎಂದಿದ್ದಾರೆ.

ಕಾಡಾನೆ ದಾಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಕಂದಕ ನಿರ್ಮಾಣಕ್ಕೆ ಜಮೀನು ನೀಡಿದ ರೈತರು!

ಬಿಜೆಪಿ ವಿರೋಧದಿಂದ ಪರಿಹಾರ ತಿರಸ್ಕರಿಸಿದ ಕುಟುಂಬ

ನಾವು ಮಾನವೀಯತೆಯಿಂದ ಪರಿಹಾರ ಘೋಷಿಸಿದ್ದೆವು. ಆದರೆ ಪರಿಹಾರ ನೀಡಲು ಬಿಜೆಪಿ ವಿರೋಧ ಮಾಡಿತ್ತು. ಬಿಜೆಪಿ ವಿರೋಧ ಮಾಡಿದ್ದರಿಂದ ನಮಗೆ ಪರಿಹಾರ ಬೇಕಿಲ್ಲ ಎಂದು ಸಂತ್ರಸ್ತನ ಕುಟುಂಬ ತಿರಸ್ಕರಿಸಿದೆ ಎಂದು ಖಂಡ್ರೆ ಮಾಹಿತಿ ನೀಡಿದ್ದಾರೆ.

ಕಾಡಾನೆ ದಾಳಿಗೆ ಸಾವನ್ನಪ್ಪಿದ ಕೇರಳ ವ್ಯಕ್ತಿಗೆ ಕೆಪಿಸಿಸಿಯಿಂದ 15 ಲಕ್ಷ ಪರಿಹಾರ ಕೊಡಿ: ಸಿಟಿ ರವಿ ಆಕ್ರೋಶ

ಅಂದಹಾಗೆ ಈ ಹಿಂದೆ ಕೇರಳದಲ್ಲಿ (Kerala) ಕರ್ನಾಟಕದ ಆನೆ ತುಳಿತದಿಂದಾಗಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ಕೇರಳದ ವ್ಯಕ್ತಿ ಮೃತಪಟ್ಟಿರುವುದಕ್ಕೆ ಕರ್ನಾಟಕ ಸರ್ಕಾರದಿಂದ ಪರಿಹಾರ ಘೋಷಿಸಲಾಗಿತ್ತು. ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಪರಿಹಾರ ಘೋಷಣೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

Latest Videos
Follow Us:
Download App:
  • android
  • ios