ಕರ್ತವ್ಯ ಲೋಪ ಅಫಜಲಪುರ ಸಿಪಿಐ ಅಮಾನತ್ತು; ಆರ್‌ಡಿ ಪಾಟೀಲ್ ಪ್ರಕರಣದಲ್ಲಿ ಬಲಿಯಾದ ಮೂರನೇ ಅಧಿಕಾರಿ!

ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಅಪಾರ್ಟ್‌ಮೆಂಟ್‌ನಿಂದ ತಪ್ಪಿಸಿಕೊಂಡಿದ್ದ ಹಿನ್ನೆಲೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಫಜಲಪುರ ಸಿಪಿಐ ಪಂಡಿತ್ ಸಗರ್ ಅಮಾನತ್ತು ಮಾಡಿ ಕಲಬುರಗಿ ಐಜಿಪಿ ಅಯ್ ಹಿಲೋರಿ ಆದೇಶ ಹೊರಡಿಸಿದ್ದಾರೆ.

KEA Exam scam RD Patil case CPI Pandit Sagar suspended at kalaburagi rav

ಕಲಬುರಗಿ (ನ.22): ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಅಪಾರ್ಟ್‌ಮೆಂಟ್‌ನಿಂದ ತಪ್ಪಿಸಿಕೊಂಡಿದ್ದ ಹಿನ್ನೆಲೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಫಜಲಪುರ ಸಿಪಿಐ ಪಂಡಿತ್ ಸಗರ್ ಅಮಾನತ್ತು ಮಾಡಿ ಕಲಬುರಗಿ ಐಜಿಪಿ ಅಯ್ ಹಿಲೋರಿ ಆದೇಶ ಹೊರಡಿಸಿದ್ದಾರೆ.

 ನವೆಂಬರ್ 7 ರಂದು ಕಲಬುರಗಿ ನಗರದ ವರ್ಧಾ ಲೇಔಟ್ ನ ಅಪಾರ್ಟ್‌ಮೆಂಟ್‌ನಿಂದ ಕಾಂಪೌಂಡ್ ಜಿಗಿದು ಎಸ್ಕೇಪ್ ಆಗಿದ್ದ ಆರ್ ಡಿ ಪಾಟೀಲ್. ಪ್ರಕರಣದ ಕಿಂಗ್‌ಪಿನ್ ಅಪಾರ್ಟ್‌ಮೆಂಟ್‌ನಲ್ಲಿದ್ದಾನೆಂಬ ಮಾಹಿತಿ ಮುಂಚಿತವಾಗಿ ಸಿಕ್ಕರೂ ಬಂಧನಕ್ಕೆ ತೆರಳಲು ಸಿಪಿಐ ಪಂಡಿತ್ ಸಗರ್ ನಿಧಾನ ಮಾಡಿದ ಆರೋಪ. ಕಣ್ಣೆದುರಲ್ಲೇ ಆರೋಪಿ ತಪ್ಪಿಸಿಕೊಂಡು ಹೋದ ಹಿನ್ನೆಲೆ ಅಮಾನತ್ತು ಮಾಡಲಾಗಿದೆ.

ಕೆಇಎ ಪರೀಕ್ಷಾ ಅಕ್ರಮ ಪ್ರಕರಣ: ಸಿಐಡಿ ವಿರುದ್ಧ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್‌ ಸಿಡಿಮಿಡಿ

ಅದಾದ ಬಳಿಕ ಆರ್‌ಡಿ ಪಾಟೀಲ್ ಬಳಸಿದ್ದ ಕಾರಿನ ಜಾಡು ಹಿಡಿದು ಆರೋಪಿಯ ಬೆನ್ನಹತ್ತಿದ್ದ ಪೊಲೀಸ್ ಕೊನೆಗೆ ಮಹಾರಾಷ್ಟ್ರದ ಚಿಕ್ಕಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಆರ್‌ಡಿ ಪಾಟೀಲ್ ಬಂಧಿಸಿತ್ತು.

ಆರ್‌ಡಿ ಪಾಟೀಲ್‌ ಪ್ರಕರಣದಲ್ಲಿ ಬಲಿಯಾದ ಮೂರನೇ ಪೊಲೀಸ್ ಸಿಬ್ಬಂದಿ

ಅಮಾನತ್ತಿಗೆ ಒಳಗಾಗಿರೋ ಅಫಜಲಪುರ ಸಿಪಿಐ ಪಂಡಿತ್ ಸಗರ್ ಆರ್‌ಡಿ ಪಾಟೀಲ್‌ನ ಕರ್ಮಕಾಂಡಕ್ಕೆ ಬಲಿಯಾದ ಮೂರನೇ ಪೊಲೀಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಆರ್‌ಡಿ ಪಾಟೀಲ್‌ಗೆ ಸಲಾಂ ಹೊಡೆದ ಕಾರಣ ಬ್ರಹ್ಮಪೂರ ಪೊಲೀಸ್ ಠಾಣೆಯ ಕಾನ್ಸಟೇಬಲ್ ಮಾಳಪ್ಪ ಭಾಸಗಿ ಅಮಾನತ್ತಾಗಿದ್ದ. ಅಲ್ಲದೇ ಸಿಐಡಿ ವಿರುದ್ದ ಮಾತನಾಡಲು ಅವಕಾಶ ಕೊಟ್ಟ ಕಾರಣ  ಅಶೋಕ ನಗರ ಠಾಣೆಯ ಮಲ್ಲಿಕಾರ್ಜುನ ಎನ್ನುವ  ಮುಖ್ಯ ಪೇದೆಯನ್ನೂ ಸಹ ಅಮಾನತ್ತು ಮಾಡಲಾಗಿತ್ತು. ಇದೀಗ ಆರ್‌ಡಿ ಪಾಟೀಲ್ ಅರೆಸ್ಟ್ ಮಾಡಲು ವಿಳಂಬ ಕಾರಣ ಸಿಪಿಐ ಪಂಡಿತ ಸಗರ್ ಅಮಾನತ್ತಾಗಿದ್ದಾರೆ.

ಅರ್ಜಿ ದಿನದಿಂದಲೇ ಕೆಇಎ ಪರೀಕ್ಷಾ ಅಕ್ರಮಕ್ಕೆ ಆರ್‌.ಡಿ.ಪಾಟೀಲ್‌ ಸ್ಕೆಚ್‌?

 ಹಾಕಿದ್ದು ಸತ್ಯ ಇದೆಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ನೋಡಿದಾಗ ಆರೋಪಿ ಆರ್‌ಡಿಕ ಪಾಟೀಲನ ಅಕ್ರಮಕ್ಕೆ ಪೊಲೀಸ್ ಇಲಾಖೆಯಿಂದಲೇ ಕುಮ್ಮಕ್ಕು ಸಿಗುತ್ತಿದೆಯಾ ಎಂಬ ಅನುಮಾನ ಮೂಡಿಸಿದೆ. ಸಾಲು ಸಾಲು ಪೊಲೀಸ್ ಅಧಿಕಾರಿಗಳ ಅಮಾನತ್ತು ಸಾರ್ವಜನಿಕರಲ್ಲಿ ಇಂತಹ ಪ್ರಶ್ನೆ ಹುಟ್ಟುಹಾಕಿದೆ.

Latest Videos
Follow Us:
Download App:
  • android
  • ios