KEA ಪರೀಕ್ಷಾ ಅಕ್ರಮ: ಪೊಲೀಸ್‌ ಪಾಲಿಗೆ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಬಿಸಿತುಪ್ಪ!

ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಹಗರಣ ಮಾಡಿದ್ದಾನೆಂಬ ಗುರುತರ ಆರೋಪಗಳಿರುವ ಆರ್‌.ಡಿ.ಪಾಟೀಲ್‌ ಬಂಧನದ ಸುತ್ತ ಕಳೆದ 12 ದಿನದಿಂದ ಸಾಗಿರುವ ಕಾರ್ಯಾಚರಣೆ ಕಲಬುರಗಿ ನಗರ ಹಾಗೂ ಜಿಲ್ಲಾ ಪೊಲೀಸರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. 

KEA Exam Irregularity Kingpin Problem for Kalaburagi Police gvd

ಶೇಷಮೂರ್ತಿ ಅವಧಾನಿ

ಕಲಬುರಗಿ (ನ.09): ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಹಗರಣ ಮಾಡಿದ್ದಾನೆಂಬ ಗುರುತರ ಆರೋಪಗಳಿರುವ ಆರ್‌.ಡಿ.ಪಾಟೀಲ್‌ ಬಂಧನದ ಸುತ್ತ ಕಳೆದ 12 ದಿನದಿಂದ ಸಾಗಿರುವ ಕಾರ್ಯಾಚರಣೆ ಕಲಬುರಗಿ ನಗರ ಹಾಗೂ ಜಿಲ್ಲಾ ಪೊಲೀಸರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕಳೆದ ನ.28, 29ರಂದು ಕೆಇಎ ಪರೀಕ್ಷೆಗಳಿದ್ದವು, ಬ್ಲೂಟೂತ್‌ ಬಳಸಿರೋ ಹಗರಣ ನ.28ರಂದು ಬಯಲಾಗುತ್ತಿದ್ದಂತೆಯೇ ತಲೆ ಮರೆಸಿಕೊಂಡಿರೋ ಆರ್‌.ಡಿ. ಪಾಟೀಲ್‌ 12 ದಿನಗಳು ಉರುಳಿದರೂ ಇಲ್ಲಿಯವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ.

ಆತನ ಮೊಬೈಲ್‌ ಟವರ್‌ ಲೋಕೇಶನ್‌ ಬೆನ್ನು ಹತ್ತಿ ಅಡಗುದಾಣ ಪತ್ತೆಹಚ್ಚಿ ಕಾರ್ಯಾಚರಣೆಗೆ ಮುಂದಾಗಿರುವ ಪೊಲೀಸರಿಗೆ ಪಾಟೀಲ್‌ ದಿಕ್ಕುತಪ್ಪಿಸುವಲ್ಲಿ, ಆಗಾಗ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶ ಕಂಡಿದ್ದಾನೆ. ಏತನ್ಮಧ್ಯೆ ತನ್ನ ಮೊಬೈಲ್‌ ಲೋಕೇಶನ್‌ ಉತ್ತರ ಪ್ರದೇಶದಲ್ಲಿರುವಂತೆ ಮಾಡಿ ತಾನು ತನ್ನ ತವರೂರು ಕಲಬುರಗಿಯ ಬಾಡಿಗೆ ಫ್ಲ್ಯಾಟ್‌ ಒಂದರಲ್ಲಿ ಆರಾಮಾಗಿದ್ದು ಸಾರ್ವಜನಿಕವಾಗಿ ಕಲಬುರಗಿ ಪೊಲೀಸರ ವೃತ್ತಿ ಪ್ರಾವಿಣ್ಯತೆಯ ಸುತ್ತಮುತ್ತಲೇ ಜನ ಶಂಕೆ ಪಡುವಂತೆ ಮಾಡಿದ್ದಾನೆ. ಕಲಬುರಗಿ ಪೊಲೀಸರ ಕಾರ್ಯವೈಖರಿಯನ್ನೇ ಅಣುಕಿಸುತ್ತಿದೆ ಕಿಂಗ್‌ಪಿನ್‌ ಬಂಧನ ಕಾರ್ಯಾಚರಣೆ, ಪಿಎಸ್‌ಐ, ಕೆಇಎಯಂತಹ ನೇಮಕಾತಿ ಪರೀಕ್ಷೆ ಹಗರಣದ ಮಾಸ್ಟರ್‌ ಮೈಂಡ್‌ ಕಲಬುರಗಿಯಲ್ಲದ್ರೂ ಪೊಲೀಸರ ಅಂತರಾಜ್ಯ ಸುತ್ತಾಟ ನಗೆಪಾಟಲಿಗೆ ಈಡು ಮಾಡಿದೆ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ.

ಸಿದ್ಧರಾಮಯ್ಯಗೆ ವೇದಿಕೆಗಳಲ್ಲಿ ಮಾತ್ರ ರೈತರ ಬಗ್ಗೆ ಕನಿಕರ: ಡಿ.ವಿ.ಸದಾನಂದ ಗೌಡ ಆರೋಪ

ಆರ್‌ಡಿಪಿಯಂತಹ ಮೋಸ್ಟ್‌ ವಾಟೆಂಡ್‌ ಆರೋಪಿ, ಕೋಟಿಗಟ್ಟಲೇ ಆರ್ಥಿಕ ಅಪರಾ ತಪರಾ ಮಾಡಿರುವ ಅಪರಾಧಿಯ ಬಂಧನ ಕಾರ್ಯಾಚರಣೆಯಲ್ಲಿ ಪೊಲೀಸ್‌ ಎಡವಿತು ಹೇಗೆ? ಕಲಬುರಗಿಯಲ್ಲಿದ್ರೂ ಗೊತ್ತಾಗಲಿಲ್ಲವೇಕೆ? ಗೊತ್ತಾದ ಮೇಲೂ ಕಾರ್ಯೋನ್ಮುಖರಾಗಲು 3 ಗಂಟೆ ವಿಳಂಬವಾಯ್ತೇಕೆ? ಗುಪ್ತಚರ (ಇಂಟಲಿಜೆನ್ಸ್‌) ಜಾಲದ ವೈಫಲ್ಯವೆ? ಗೊತ್ತಾಗಲಿಲ್ಲ ಹೇಗೆ? ಗೊತ್ತಾದ್ಮೇಲೆ ಪರಾರಿ ಆಗಲು ಆತನಿಗೆ ಗೋಲ್ಡನ್‌ ಚಾನ್ಸ್‌ ದೊರಕಿತು ಹೇಗೆ? ಎಂದು ಜನರ ಪ್ರಶ್ನೆಗಳ ಸುರಿಮಳೆಗೆ ಪೊಲೀಸ್‌, ಜಿಲ್ಲಾಡಳಿತ, ಸರಕಾರ ಯಾರೊಬ್ಬರಿಂದಲೂ ಸೂಕ್ತ ಉತ್ತರ ದೊರಕಿಲ್ಲ.

ಪಿಎಸ್‌ಐ ಹಗರಣದ ಮಾಸ್ಟರ್‌ ಮೈಂಡ್‌ ಆಗಿದ್ದ ಪಾಟೀಲ್‌ ಆ ಹಗರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗುತ್ತಿದ್ದಂತೆಯೇ ಇತ್ತ ಜಾಮೀನು ಪಡೆದು ಜೈಲಿನಿಂದ ಹೊರಬಂದವನೇ ಕಲಬುರಗಿಯಲ್ಲೊಂದು ಠಿಕಾಣಿ ಮಾಡಿಕೊಂಡಿದ್ದನೆಂದು ಗೊತ್ತಾಗಿದೆ. ಹೆಸರು ಬದಲಿಸಿ ಕಲಬುರಗಿಯಲ್ಲೇ ಬಾಡಿಗೆ ಮನೆ ಪಡೆದು ಅಲ್ಲೇ ಯಾರಿಗೂ ಶಂಕೆ ಬಾರದಂತೆ ವಾಸವಾಗಿದ್ದ, ಕೆಇಎ ಪರೀಕ್ಷೆಯಾದ ನಂತರ ಕೆಲದಿನ ಹೊರಗಿದ್ದ ಪಾಟೀಲ್‌ ಉಪಾಯವಾಗಿ ತನ್ನ ಬಾಡಿಗೆ ಮನೆಯಲ್ಲೇ ತಂಗಿದ್ದ. ಇಲ್ಲಿದ್ದುಕೊಡೇ ಪೊಲೀಸ್‌ ಪೇದೆ ಪರೀಕ್ಷೆ, ಕೆಇಎ ಇತ್ಯಾದಿ ಪರೀಕ್ಷೆಗಳಲ್ಲಿ ಹಗರಣ ಮಾಡಿದ್ದಾನೆಂಬ ಮಾತುಗಳು ಕೇಳಿಬರುತ್ತಿವೆ.

ಪೊಲೀಸ್‌ ಇನ್ಸ್‌ಪೆಕ್ಟರ್‌ ಚಲನವಲನ ಮೇಲೆ ನಿಗಾ: ಆರ್‌ಡಿ ಪಟೀಲ್‌ ಫ್ಲಾಟ್‌ನಲ್ಲಿ ಆರಾಮಿದ್ದವ ಅದ್ಹೇಗೆ ಮೊಬೈಲ್‌ನಲ್ಲಿ ಮಾನಾಡುತ್ತಲೇ ಹೊರಬಂದು ಗ್ರಿಲ್‌, ಗೇಟ್‌ ಹತ್ತಿ ಹಾರಿ ಬಿಗಾಲಲ್ಲೇ ಪರಾರಿಯಾಗಿಬಿಟ್ಟಿದ್ದ. ಈತ ಹಿಂಬದಿ ಗೇಟ್‌ನಿಂದ ಪರಾರಿಯಾಗುತ್ತಿದ್ದರೆ ಇತ್ತ ಫ್ಲಾಟ್‌ನ ಫ್ರಂಟ್‌ ಗೇಟ್‌ನಲ್ಲಿ ಪೊಲೀಸರು ಹಾಜರಿದ್ದು, ಆತನ ಬಂಧನಕ್ಕೆ ಸಿದ್ದರಾಗಿದ್ದರು. ಆದರೆ ಆತನಿದ್ದ ಫ್ಲಾಟ್‌ಗೆ ಹೋಗಿ ನೋಡಿದರೆ ಅದಾಗಲೇ ಅಲ್ಲಿಂದ ಆರ್‌ಡಿಪಿ ಸಲೀಸಾಗಿ ತಪ್ಪಿಸಿಕೊಂಡಾಗಿತ್ತು. ಪೊಲೀಸ್‌ ಆಗಮನದ ಮಹತ್ವದ ಮಾಹಿತಿ ಆರ್‌ಡಿಪಿಗೆ ಪೊಲೀಸ್‌ ಅಧಿಕಾರಿಯೇ ತಿಳಿಸಿದ್ದಾರೆಂಬ ಗುಮಾನಿ ಹಿನ್ನೆಲೆಯಲ್ಲಿ ಸದರಿ ಪೊಲೀಸ್‌ ಅಧಿಕಾರಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆ ಅಧಿಕಾರಿ ಯಾರು? ಯಾಕೆ ಹೀಗೆ ಮಾಡಿದ? ಮಾಹಿತಿ ಸೋರಿಕೆ ಮಾಡಿದ್ದೇಕೆ? ಆತನೊಂದಿಗೆ ಆರ್‌ಡಿಪಿಗೆ ಅದೆಂತಹ ನಂಟಿತ್ತು? ಎಂಬಿತ್ಯಾದಿ ವಿಷಯವಾಗಿ ಪೊಲೀಸ್‌ ಕಮೀಷ್ನರ್‌ ತನಿಖೆ ಶುರು ಮಾಡಿದ್ದಾರೆಂದು ಗೊತ್ತಾಗಿದೆ.

ಕ್ರಿಮ್ಸ್‌ನಲ್ಲಿ 'ಮುನ್ನಾಭಾಯಿ ಎಂಬಿಬಿಎಸ್' ನೋಡಿ ಆಕ್ರೋಶಗೊಂಡ ಸಚಿವ ಮಂಕಾಳ ವೈದ್ಯ!

ಆರ್‌ಡಿಪಿ ಪರಾರಿ ವಿಚಾರದಲ್ಲಿ ಉಗುಳು ನುಂಗಿ ಹೇಳಿಕೆ!: ಹಗರಣದ ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ ಬಂಧನದಲ್ಲಿ ಪೊಲೀಸರು ಎಡವಿದ್ಯಾಕೆ? ಕಲಬುರಗಿಯಲ್ಲಿರೋದು ಗೊತ್ತಿದ್ದರೂ ಯಾಕೆ ಸಕಾಲಕ್ಕೆ ಬಂಧಿಸಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಗರ, ಜಿಲ್ಲಾ ಪೊಲೀಸ್‌ ಮುಖ್ಯಸ್ಥರು, ಜಿಲ್ಲಾ ಉಸ್ತುವಾರಿ ಸಚಿವರು, ಆಡಳಿತಾರೂಢ ಕಾಂಗ್ರೆಸ್‌ ಶಾಸಕರೆಲ್ಲರಿಗೂ ಮಾಧ್ಯಮದವರು ಕೇಳುತ್ತಿದ್ದರೆ, ಇವರಲ್ಲಿ ಯಾರೊಬ್ಬರೂ ನಡೆದದ್ದು ನಡೆದ್ಹಂಗೆ ನೇರಾನೇರ ಹೇಳದೆ ಉಗುಳು ನುಂಗುತ್ತಿದ್ದಾರೆ. ಇದೇ ಕಾರಣಕ್ಕಾಗಿ ಆತನ ಬಂಧನವಾಗಲಿಲ್ಲ, ಪರಾರಿಯಾಗಲು ಅವಕಾಶ ಸಿಕ್ಕಿತು ಎಂದೋ, ಬಂಧನ ಕಾರ್ಯಾಚರಣೆಯಲ್ಲಿ ಪೊಲೀಸ್‌ ವೈಫಲ್ಯವಿದೆ, ಕ್ರಮ ಕೈಗೊಳ್ಳುತ್ತೇವೆಂದೋ ಇದುವರೆಗೂ ಯಾರೂ ಹೊಣೆಗಾರಿಕೆಯ ಹೇಳಿಕೆ ನೀಡದೆ ಮಾಧ್ಯದವರ ಪ್ರಶ್ನೆಗಳಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios